ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆಯಿಂದ ಮಾಹಿತಿ ಸಂಗ್ರಹ

11:15 AM, Wednesday, February 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kushalnagara

ಮಡಿಕೇರಿ : ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಕಾವೇರಿ ನದಿಯಲ್ಲಿ ತುಂಬಿರುವ ಮಣ್ಣಿನ ಹೂಳಿನ ಪ್ರಮಾಣ ಮತ್ತು ಜಿಪಿಎಸ್ ಆಧಾರಿತ ನಿರ್ದಿಷ್ಟ ಸ್ಥಳದ ಮಾಹಿತಿ ಸಂಗ್ರಹ ಕಾರ್ಯ ನಡೆಸಿದರು.

ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಕುಶಾಲನಗರ ಮಾರುಕಟ್ಟೆ ತನಕ ರ‍್ಯಾಫ್ಟರ್ ಮೂಲಕ ಕಾವೇರಿ ನದಿಯಲ್ಲಿ ಸಂಚರಿಸಿದ ವೇದಿಕೆ ಪ್ರಮುಖರು ನದಿಯ ಮಧ್ಯದಲ್ಲಿ ನಿರ್ಮಾಣಗೊಂಡಿರುವ ಮಣ್ಣಿನ ಬೃಹತ್ ನಡುಗಡ್ಡೆಗಳನ್ನು ಪತ್ತೆಹಚ್ಚುವುದರೊಂದಿಗೆ ಅಲ್ಲಲ್ಲಿ ನದಿಯ ಆಳವನ್ನು ಪರಿಶೀಲಿಸುತ್ತ ತೆರಳಿದ ವೇದಿಕೆ ಪ್ರಮುಖರಿಗೆ 10 ಕ್ಕೂ ಅಧಿಕ ಬೃಹತ್ ಮಣ್ಣಿನ ನಡುಗಡ್ಡೆಗಳು ಪತ್ತೆಯಾದವು.

ಕಳೆದೆರಡು ವರ್ಷಗಳ ಅವಧಿಯಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿಗೆ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ನದಿಯಲ್ಲಿ ವ್ಯಾಪಕವಾಗಿ ಹೂಳು ತುಂಬಿರುವ ಕಾರಣ ನದಿ ನೀರು ಉಕ್ಕಿ ಹರಿದು ಪ್ರವಾಹ ಸೃಷ್ಟಿಸುತ್ತಿರುವ ಕಾರಣ ಮುಂದಿನ ಮಳೆಗಾಲದ ಒಳಗಾಗಿ ನದಿಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಹೂಳು ತುಂಬಿರುವ ನಿರ್ದಿಷ್ಟ ಪ್ರದೇಶವನ್ನು ಗುರುತಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ ಹಿನ್ನೆಲೆಯಲ್ಲಿ ನದಿ ಸರ್ವೆ ಕಾರ್ಯ ನಡೆಸಲಾಯಿತು ಎಂದು ವೇದಿಕೆಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದರು.

ಕುಶಾಲನಗರದ ಬಹುತೇಕ ಬಡಾವಣೆಗಳಲ್ಲಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸರಕಾರ ಕೂಡಲೆ ಯೋಜನೆ ರೂಪಿಸಬೇಕು. ತಜ್ಞರ ಸಮಿತಿಯೊಂದನ್ನು ರಚಿಸಿ ನದಿಯ ವಾಸ್ತವಾಂಶವನ್ನು ಪರಿಶೀಲನೆ ಮಾಡಬೇಕು. ನಂತರ ನದಿಯಲ್ಲಿ ಸೇರಿರುವ ಬೃಹತ್ ಪ್ರಮಾಣದ ಹೂಳನ್ನು ತೆರವುಗೊಳಿಸುವ ಕೆಲಸ ತಕ್ಷಣ ನಡೆಸಬೇಕೆಂದು ಆಗ್ರಹಿಸಿ ಮನವಿಯಲ್ಲಿ ಸಲ್ಲಿಸಲಾಗಿದೆ ಎಂದರು.

kushalnagara

ವೇದಿಕೆ ಉಪಾಧ್ಯಕ್ಷ ತೋರೆರ ಉದಯ್‌ಕುಮಾರ್ ಹಾಗೂ ಖಜಾಂಚಿ ಕೊಡಗನ ಹರ್ಷ ಮಾತನಾಡಿ, ಕುಶಾಲನಗರ ಮಾದಾಪಟ್ಟಣ ಬಳಿಯಿಂದ ಬೈಚನಹಳ್ಳಿ, ಕುಶಾಲನಗರ ಪಟ್ಟಣ, ನೆರೆಯ ಕೊಪ್ಪ ಸೇರಿದಂತೆ ನದಿ ತಟದ ಬಡಾವಣೆಗಳ ನೂರಾರು ಮನೆಗಳು ಕಳೆದ ಎರಡು ವರ್ಷಗಳಿಂದ ಜಲಾವೃತಗೊಳ್ಳುತ್ತಿವೆ.

ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ಸಂಪರ್ಕ ವ್ಯವಸ್ಥೆಗೆ ಅಡ್ಡಿಯುಂಟಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಆಸ್ತಪಾಸ್ತಿ ನಷ್ಟವುಂಟಾಗುವುದರೊಂದಿಗೆ ಮಡಿಕೇರಿ, ಮೈಸೂರು, ಹಾಸನ ಭಾಗಗಳ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ಹಿನ್ನಲೆಯಲ್ಲಿ ನದಿಯ ಮೂಲ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನದಿಯ ಹೂಳು ಎತ್ತುವ ಯೋಜನೆಗೆ ಕೂಡಲೆ ಕ್ರಮಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸ್ವತಃ ತಾವೇ ನದಿಯಲ್ಲಿ ಸರ್ವೆ ನಡೆಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭ ವೇದಿಕೆ ಪ್ರಮುಖರಾದ ನಜೀರ್ ಅಹಮ್ಮದ್ ಹಾಜರಿದ್ದರು.

ದುಬಾರೆ ರ‍್ಯಾಫ್ಟ್ ಮಾಲೀಕರು ಹಾಗೂ ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ ಅವರು ರ‍್ಯಾಫ್ಟಿಂಗ್ ವ್ಯವಸ್ಥೆ ಕಲ್ಪಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English