ನಗರ ಸಭೆ ವತಿಯಿಂದ ಮಣಿಪಾಲದಲ್ಲಿ ಗೂಡಂಗಡಿ ತೆರವು ಕಾರ್ಯಾಚರಣೆ

5:06 PM, Thursday, November 8th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Udupi TMCಮಣಿಪಾಲ :ಮಣಿಪಾಲದ ಈಶ್ವರನಗರದಲ್ಲಿ “ಬಸ್ ಬೇ” ಅಭಿವೃದ್ಧಿಗಾಗಿ ಗುರುವಾರ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯಿತು. ಬೆಳಿಗ್ಗೆ ಜೆಸಿಬಿ ಹಾಗೂ ಇಂಜಿನೀಯರ್ ಸ್ಥಳಕ್ಕೆ ಧಾವಿಸಿ ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್ ನೀಡದೇ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು. ತೆರವು ಕೆಲಸ ಆರಂಭವಾಗುತ್ತಲೇ ಕಾಂಗ್ರೇಸ್ ಮುಂಖಂಡರು ಹಾಗೂ ಸ್ಥಳೀಯರು ಸೇರಿ ಕೆಲಸಕ್ಕೆ ಅಡ್ಡಿ ಪಡಿಸಿ ಕಾರ್ಯಾಚರಣೆಯನ್ನು ವಿರೋಧಿಸಿದರು.

ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್ ನೀಡದೇ ಒಮ್ಮೆಲೆ ತೆರವು ಮಾಡಿಸುವುದು ನ್ಯಾಯಸಮ್ಮತವಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆ ಮಾಡಿಕೊಟ್ಟು ಆ ನಂತರ ತೆರವುಗೊಳಿಸಲಿ ಆದರೆ ಇಲ್ಲಿ ಯಾವುದೇ ಬದಲಿ ವ್ಯವಸ್ಥೆ ಇಲ್ಲದೆ ತೆರವುಗೊಳಿಸಲು ಮುಂದಾಗಿದ್ದಾರೆ. ಇನ್ನು ೨ದಿನಗಳ ಬಳಿಕ ದಿಪಾವಳಿ ಹಬ್ಬ ಹರಿದಿನಗಳು ಬರುತ್ತವೆ. ಇಲ್ಲಿ ವ್ಯಾಪಾರ ಸ್ಥಗಿತ ಮಾಡಿದರೆ ಇವರು ಹೇಗೆ ಜೀವನ ಸಾಗಿಸುವುದು ಎಂದು ನಗರ ಸಭೆಯ ವಿರೋಧ ಪಕ್ಷದ ಮುಖಂಡ ಜಯಾನಂದ ಮಲ್ಪೆ ಪತ್ರಕರ್ತರೊಂದಿಗೆ ಆರೋಪಿಸಿದರು.

ಚಂದ್ರಶೇಖರ್, ಸುಲೇಮಾನ್, ಜಯಪೂಜಾರಿ, ವಿಟ್ಟು ನಾಯ್ಕ, ಕೃಷ್ಣ, ಸುರೇಂದ್ರ, ಸುರೇಶ್, ಮುರಳೀಧರ, ಅಣ್ಣಯ್ಯ, ಉಮೇಶ್, ಮುಕುಂದ ನಾಯ್ಕ ಎನ್ನುವವರು ಅಲ್ಲಿ ವ್ಯಾಪಾರ ನಡೆಸುತ್ತಿದ್ದು, ನಗರಸಭೆಯ ಅಭಿವೃದ್ದಿಯ ಮಂತ್ರ, ವಿರೋಧ ಪಕ್ಷದ ಆಕ್ರೋಶದ ಮುಂದೆ ವ್ಯಾಪಾರಸ್ಥರು ಮಂಕಾಗಿದ್ದಾರೆ. ಅನೇಕ ದಿನಗಳಿಂದ ಈ ವಿಷಯದಲ್ಲಿ ಚರ್ಚೆ, ಪ್ರತಿಭಟನೆ ನಡೆಯುತ್ತಿದ್ದರೂ ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆ ಮಾಡದೆ ಇರುವುದು ಕಂಡುಬಂದಿದೆ. ಒಟ್ಟಾರೆ ವ್ಯಾಪಾರಸ್ಥರು ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English