ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ 80% ಉದ್ಯೋಗ ಮೀಸಲಾತಿ ನೀಡುವಂತೆ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯ

3:49 PM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

yogish-shetty
ಮಂಗಳೂರು : ತುಳುನಾಡಿನಲ್ಲಿ ತುಳುವರಿಗೆ ಉದ್ಯೋಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನಾ ಸಭೆಯು ಗುರುವಾರ 13-2-2020 ಬೆಳಿಗ್ಗೆ 11:30ಕ್ಕೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉದ್ಯೋಗ ಮೀಸಲಾತಿಗಾಗಿ ಪ್ರತಿಭಟನೆ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಯೋಗಿಶ್ ಶೆಟ್ಟಿ ಜಪ್ಪುರವರು ಸಭೆಯನ್ನು ಉದ್ದೇಶೀಸಿ ವಿದ್ಯಾಭ್ಯಾಸ ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಅಗತ್ಯ. ಹಾಗೂ ಹೆತ್ತವರು ತಮ್ಮ ಬೆವರು ಸುರಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಕ್ಕೆ ತಾಯಿ ನಾಡಿನಲ್ಲಿ ಉದ್ಯೋಗ ಮಾಡಿ ಅವರನ್ನು ಸಂತೋಷದಲ್ಲಿ ಇರಿಸುವುದು ಅತಿಮುಖ್ಯ. ಪ್ರಸ್ತುತ ತುಳುನಾಡದಲ್ಲಿ ವಾಸಿಸುವ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ.

ಹೆತ್ತವರನ್ನು,ಕುಟುಂಬಸ್ಥರನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಳುನಾಡಿನ ಕೈಗಾರಿಕೆಗಳಲ್ಲಿ 80% ಉದ್ಯೋಗ ಮೀಸಲಾತಿ
ನೀಡಬೇಕೆಂದು ಕರೆ ನೀಡಿದರು.

yogish-shetty

ಶಿಕ್ಷಣ ತಜ್ಞ ಎಂ.ಜಿ. ಹೆಗಡೆ ಮಾತನಾಡುತ್ತಾ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೃಹತ್ ಕೈಗಾರಿಕೆಗಳು ತಲೆ ಎತ್ತಿ ನಿಂತಿದ್ದು, ಪರಿಸರಕ್ಕೆ ಹಾಗೂ ಇಲ್ಲಿಯ ಜನರಿಗೆ ಆರೋಗ್ಯಕ್ಕೆ ಹಾನಿಕರವಾಗಿದ್ದು ಅಲ್ಲಿಯ ಕೈಗಾರಿಕೆಯ ಮಾಲಿನ್ಯಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದರೂ ಕೂಡಾ ಅಭಿವೃದ್ಧಿ ನಿಟ್ಟಿನಲ್ಲಿ ಜನರು ಇದಕ್ಕೆ ಸಹಕರಿಸಿದರು ಕೂಡಾ ಉದ್ಯೋಗಗಳು ಮಾತ್ರ ಸ್ಥಳೀಯರಿಗೆ ಸಿಗುತ್ತಿಲ್ಲ, ಬೇರೆ ರಾಜ್ಯಗಳ ಪಾಲಾಗುತ್ತಿದೆ ಎಂದು ಹೇಳಿದರು.

yogish-shetty

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ದಿನಕರ ಶೆಟ್ಟಿಯವರು ಮಾತನಾಡುತ್ತಾ ತುಳುನಾಡ ಸಂಸ್ಕೃತಿಯ ತುಂಬು ಕುಟುಂಬ ಪದ್ದತಿ ನಶಿಸಿ
ಹೋಗುತ್ತಿದೆ. ನಮ್ಮ ಊರಿನಲ್ಲಿ ಅನೇಕ ಕಂಪನಿಗಳಿವೆ, ಆದರೆ ಕನಿಷ್ಠ 20% ಉದ್ಯೋಗ ನಮಗೆ ಸಿಗುತ್ತಿಲ್ಲ, ಮೂರೂ ವರುಷ ಅನುಭವವಿದ್ದವರಿಗೆ ಮಾತ್ರ ಉದ್ಯೋಗ ನೀಡುವ ನಿಯಮವಿದೆ. ಹೊಸಬರು ಕೆಲಸವಿಲ್ಲದೇ ಊರು ಬಿಟ್ಟು ಕಷ್ಟ್ಟ ಪಡುವ ಪರಿಸ್ಥತಿ ಬಂದಿದೆ. ಯಾವ ಪಕ್ಷದ ಜನಪ್ರತಿನಿಧಿಗಳು ಇದರ ಬಗ್ಗೆ ಮಾತನಾಡುದಿಲ್ಲ.

yogish-shetty

ಈಗ ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋಗಿದೆ. ಕನಿಷ್ಠ 5% ಉದ್ಯೋಗ ಕೂಡ ನಮಗೆ ಸಿಗುತ್ತಿಲ್ಲ. ನಾವು ದೊಡ್ಡ ಮಟ್ಟದಲ್ಲಿ ಇದರ ಬಗ್ಗೆ ದ್ವನಿ ತೆಗೆಯದೆ ಮೌನ
ವಹಿಸಿದರೆ ಮುಂದಿನ ದಿನ ಕಷ್ಟವಾಗಲಿದೆ. ಜಿಲ್ಲೆಯ ಎಲ್ಲರೂ ಈ ವಿಚಾರದಲ್ಲಿ ಜಾಗ್ರತರಾಗಬೇಕು ಎಂದು ಹಿಂದೂ ಸಭಾ ಮುಖಂಡರಾದ ರಾಜೇಶ್ ಪವಿತ್ರನ್,
ನ್ಯಾಯವಾದಿ ರಾಘವೇಂದ್ರ ರಾವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

yogish-shetty

ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಜೆ. ಇಬ್ರಾಹಿಂ, ಆನಂದ ಅಮೀನ್ ಅಡ್ಯಾರ್, ಜ್ಯೋತಿಕಾ ಜೈನ್, ರಮೇಶ್ ಪೂಜಾರಿ ಶೀರೂರು,
ದೇವಿಪ್ರಸಾದ್ ವಾಮದಪದವು, ರಮೇಶ್ ಶೆಟ್ಟಿ ಮಜಲೋಡಿ, ಸುಭಾಷ್, ಸುದನ್, ಹಸನ್ ಅಡ್ಡೂರು, ಫಾರೂಕ್ ಗೋಲ್ಡನ್, ಅಝೀಜ್ ಉಳ್ಳಾಲ್, ಹಮೀದ್
ಕಾವೂರು, ಹರೀಶ್ ಶೆಟ್ಟಿ ಶಕ್ತಿನಗರ, ಶ್ರೀನಿವಾಸ ಉರ್ವ, ರೋಶನ್ ಶೇಡಿಗುರಿ, ಇರ್ಫಾನ್ ಕಲ್ಲಾಪು, ಶೋಹನ್ ಬೆಂದೂರು, ಗೈಟನ್ ರೋಡ್ರಿಗಸ್, ಜನಾರ್ಧನ್ ಬೆಂಗ್ರೆ, ಸತೀಶ್ ಸಾಲ್ಯಾನ್, ಶಾರದಾ ಬಿಕರ್ನಕಟ್ಟೆ, ತನ್ವೀರ್, ಬ್ರಿಜೇಶ್, ವಿದ್ಯಾರ್ಥಿ ಮುಖಂಡರುಗಳಾದ ಗುರುದತ್ತ್ ಮಲ್ಲಿ, ಭಾಷಿತ್, ತುಷಾರ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English