ಮೈಸೂರಿನಲ್ಲಿ ನಕಲಿ ವೈದ್ಯರ ಬಂಧನ

11:55 AM, Saturday, February 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

health-center
ಮೈಸೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವೆಂಕಟೇಶ್‌ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಇಲವಾಲ ಗ್ರಾಮದಲ್ಲಿ ಕ್ಲಿನಿಕ್‌ ನಡೆಸುತಿದ್ದ ಇಬ್ಬರು ನಕಲಿ ವೈದ್ಯರನ್ನು ಪೋಲೀಸರಿಗೆ ಒಪ್ಪಿಸಿದೆ.

ಇಲ್ಲಿ ಹಲವಾರು ವರ್ಷಗಳಿಂದಲೂ ಚಾಮುಂಡೇಶ್ವರಿ ಕ್ಲಿನಿಕ್‌ ಮತ್ತು ದಿವ್ಯ ಶ್ರೀ ಹೆಲ್ತ್‌ ಕೇರ್‌ ಎಂದು ಕ್ಲಿನಿಕ್‌ ಗಳನ್ನು ನಡೆಸುತಿದ್ದ ವಿಜಯ ಕುಮಾರ್‌ ಮತ್ತು ದೇವೇಂದ್ರ ಎಂಬುವವರು ಸರ್ಕಾರದ ಯಾವುದೇ ಅನುಮತಿ ಮತ್ತು ನೋಂದಣಿ ಇಲ್ಲದೆ ಜನರಿಗೆ ಚಿಕಿತ್ಸೆ ನೀಡುತಿದ್ದರು.

ಈ ಇಬ್ಬರೂ ಕೇವಲ ಪಿಯುಸಿ ಓದಿಕೊಂಡಿದ್ದು ಈ ಹಿಂದೆ ಆಸ್ಪತ್ರೆಗಳಲ್ಲಿ ವೈದ್ಯರ ಸಹಅಯಕರಾಗಿ ಕೆಲಸ ನಿರ್ವಹಿಸಿದ್ದರು. ಅದನ್ನೇ ಅನುಭವ ಮಾಡಿಕೊಂಡ ಇಬ್ಬರೂ ಮೈಸೂರು-ಮಂಗಳೂರು ಹೆದ್ದಾರಿಯ ಬದಿಯಲ್ಲಿರುವ ಇಲವಾಲದಲ್ಲಿ ಕ್ಲಿನಿಕ್‌ ತೆರೆದು ಅಕ್ರಮ ಗರ್ಭಪಾತವನ್ನೂ ಮಾಡಿಸುತಿದ್ದರು ಎಂದು ಆರೋಪಿಸಲಾಗಿದೆ .

ಈ ಕುರಿತು ಮಾಹಿತಿ ಪಡೆದ ಡಿಹೆಚ್‌ಒ ವೆಂಕಟೇಶ್‌ ನೇತೃತ್ವದ ತಂಡ ಧಾಳಿ ನಡೆಸಿ ಕ್ಲಿನಿಕ್‌ ಗೆ ಬೀಗಮುದ್ರೆ ಜಡಿದಿದೆ. ಇಬ್ಬರು ನಕಲಿ ವೈದ್ಯರು ನಕಲಿ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದರು ಎನ್ನಲಾಗಿದ್ದು ಪೊಲೀಸರು ಇಬ್ಬರು ನಕಲಿ ವೈದ್ಯರನ್ನ ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಲವಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English