ಮೈಸೂರಿನಲ್ಲಿ ನಕಲಿ ವೈದ್ಯರ ಬಂಧನ

Saturday, February 15th, 2020
health-center

ಮೈಸೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವೆಂಕಟೇಶ್‌ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಇಲವಾಲ ಗ್ರಾಮದಲ್ಲಿ ಕ್ಲಿನಿಕ್‌ ನಡೆಸುತಿದ್ದ ಇಬ್ಬರು ನಕಲಿ ವೈದ್ಯರನ್ನು ಪೋಲೀಸರಿಗೆ ಒಪ್ಪಿಸಿದೆ. ಇಲ್ಲಿ ಹಲವಾರು ವರ್ಷಗಳಿಂದಲೂ ಚಾಮುಂಡೇಶ್ವರಿ ಕ್ಲಿನಿಕ್‌ ಮತ್ತು ದಿವ್ಯ ಶ್ರೀ ಹೆಲ್ತ್‌ ಕೇರ್‌ ಎಂದು ಕ್ಲಿನಿಕ್‌ ಗಳನ್ನು ನಡೆಸುತಿದ್ದ ವಿಜಯ ಕುಮಾರ್‌ ಮತ್ತು ದೇವೇಂದ್ರ ಎಂಬುವವರು ಸರ್ಕಾರದ ಯಾವುದೇ ಅನುಮತಿ ಮತ್ತು ನೋಂದಣಿ ಇಲ್ಲದೆ ಜನರಿಗೆ ಚಿಕಿತ್ಸೆ ನೀಡುತಿದ್ದರು. ಈ ಇಬ್ಬರೂ ಕೇವಲ ಪಿಯುಸಿ ಓದಿಕೊಂಡಿದ್ದು […]

ಮಾರ್ಚ್14ರಿಂದ 19ರವರೆಗೆ ನಗರದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ

Monday, March 7th, 2011
Kusta

ಮಂಗಳೂರು : ಮಾರ್ಚ್ 14ರಿಂದ 19ರವರೆಗೆ ಕುಷ್ಠರೋಗ ನಿರ್ಮೂಲನಾ ಆಂದೋಲನಾ ಕಾರ್ಯಕ್ರಮವನ್ನು ಮಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ  ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ‘ಕುಷ್ಠರೋಗ ನಿರ್ಮೂಲನ ಮಂಗಳೂರು ನಗರ’ದಲ್ಲಿ ಸಭೆಯಲ್ಲಿ ಹೊಸ ಎಂ ಬಿ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಚರ್ಚೆ ನಡೆಸಲಾಯಿತು. 2010-11ನೇ ಸಾಲಿನಲ್ಲಿ ಮಂಗಳೂರು ನಗರದಲ್ಲಿ ಹೊಸದಾಗಿ  ಒಟ್ಟು 17 ಪ್ರಕರಣಗಳನ್ನು ಪತ್ತೆ ಹಚ್ಚಿ ಎಂ ಡಿ ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಷ್ಠರೋಗ ನಿವಾರಣಾಧಿಕಾರಿ ಡಾ ಟಿ. ಎನ್. […]

ಹೆಚ್.ಐ.ವಿ ಬಗ್ಗೆ ಭಯ ಬೇಡ, ತಿಳುವಳಿಕೆ ಬೇಕು : ಡಾ. ಓ. ಆರ್. ಶ್ರೀರಂಗಪ್ಪ

Wednesday, December 1st, 2010
ಡಾ. ಓ. ಆರ್. ಶ್ರೀರಂಗಪ್ಪ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ದ.ಕ ಇದರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ರೆಡ್ ರಿಬ್ಬನ್ ಕ್ಲಬ್ಗಳು ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್, ರೋಶನಿ ನಿಲಯ, ಮಂಗಳೂರು ವತಿಯಿಂದ ಇಂದು ನಗರದ ರೋಶನಿ ನಿಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಡಾ. ಓ. ಆರ್. ಶ್ರೀರಂಗಪ್ಪ, ಜಿಲ್ಲಾ […]