ಮಂಗಳೂರು :ಮಂಗಳೂರು ನಗರ ಪೊಲೀಸ್ ಅಯುಕ್ತ ಮನೀಷ್ ಕರ್ಬಿಕರ್ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳ ಇಬ್ಬರು ಸಹಚರರನ್ನು ಹಫ್ತಾ ಹಣದೊಂದಿಗೆ ಬಂಧಿಸಿರುವುದಾಗಿ ತಿಳಿಸಿದರು. ಬಂಧಿತರನ್ನು ಸುರತ್ಕಲ್ ಸಮೀಪದ ತಾರಾನಾಥ ಮತ್ತು ಸುಬ್ರಮಣ್ಯ ಅಲಿಯಾಸ್ ಸುಬ್ಬು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳಿಂದ ಒಂದು ಲಕ್ಷ ರೂಪಾಯಿ ನಗದು ಹಣ ಮತ್ತು 8 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳು ಶ್ರೀಮಂತ ಉಧ್ಯಮಿಗಳಿಂದ ಹಫ್ತಾ ಹಣಕ್ಕಾಗಿ ಬೇಡಿಕೆ ಒಡ್ಡುತ್ತಿದ್ದು, ಅದನ್ನು ಪಿ.ವಿ.ಎಸ್ ವೃತ್ತದ ಬಳಿ ಇರುವ ಮಿಲ್ಕ್ ವೇ ಎಂಬ ಹಾಲಿನ ಬೂತ್‌ಗೆ ಕಳುಹಿಸಲು ತಿಳಿಸುತ್ತಿದ್ದರು. ಬುಧವಾರ ಉಧ್ಯಮಿಯೊಬ್ಬರಿಂದ ಒಂದು ಲಕ್ಷ ರೂಪಾಯಿಯನ್ನು ಪಿ.ವಿ.ಎಸ್ ವೃತ್ತದ ಬಳಿ ಇರುವ ಮಿಲ್ಕ್ ವೇ ಹಾಲಿನ ಬೂತ್‌ಗೆ ತಲುಪಿಸಲು ತಿಳಿಸಲಾಗಿತ್ತು, ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಸಿ.ಸಿ.ಬಿ ಪೊಲೀಸರು ಕೂಡಲೇ ಧಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸ್ ಅಯುಕ್ತ ಮನೀಷ್ ಕರ್ಬಿಕರ್ ತಿಲಿಸಿದರು.
ಆರೋಪಿತರುಗಳನ್ನು ಹೆಚ್ಚಿನ ತನಿಖೆಗಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಗೋಷ್ಠಿಯಲ್ಲಿ ಡಿಸಿಪಿಗಳಾದ ಮುತ್ತುರಾಯ, ಧರ್ಮಾಯ್ಯ ಹಾಗೂ ಮಂಗಳೂರು ಸಿಸಿಬಿಯ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English