ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಹುಲಿ ಶಾಂಭವಿ

4:16 PM, Friday, November 9th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Pilkula tiger Shaambhaviಮಂಗಳೂರು :ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಜೀವಿ ಸಂಕುಲಕ್ಕೆ ಐದು ಹೊಸ ಸದಸ್ಯರ ಸೇರ್ಪಡೆಯಾಗಿದೆ. 4 ವರ್ಷ ಪ್ರಾಯದ ಹುಲಿ ಶಾಂಭವಿ ಬುಧವಾರ ಅವಳಿ ಮರಿಗಳಿಗೆ ಜನ್ಮನೀಡಿದೆ.

ಹೊಸ ಅತಿಥಿಗಳ ಆಗಮನದಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 9ಕ್ಕೆ ಏರಿದೆ. ಉದ್ಯಾನದ ಸಿಬ್ಬಂದಿ ವಿಶೇಷ ಕಾಳಜಿಯಿಂದ ಶಾಂಭವಿಯ ಆರೈಕೆ ಮಾಡುತ್ತಿದ್ದು, ಪ್ರಸ್ತುತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಜ, ವಿಕ್ರಮ, ನೇತ್ರಾವತಿ, ಶರಾವತಿ, ಕೃಷ್ಣ, ಕದಂಬ ಸೇರಿದಂತೆ 7 ಹುಲಿಗಳಿವೆ.

ಈ ಉದ್ಯಾನವನದಲ್ಲಿಯೇ ಗೌರಿ ಎಂಬ ಹೆಸರಿನ ಚಿರತೆಯೊಂದು ಒಂದು ವಾರದ ಹಿಂದೆ 3 ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯದಿಂದಿವೆ. ಕಾರ್ಕಳದಲ್ಲಿ ಉರುಳಿಗೆ ಸಿಕ್ಕಿಬಿದ್ದಿದ್ದ ಈ ಚಿರತೆಯನ್ನು ಅರಣ್ಯ ಇಲಾಖೆಯವರು ಪಿಲಿಕುಳಕ್ಕೆ ತಂದು ಒಪ್ಪಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English