ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸ್ವಾಗತ, ಸಂಪೂರ್ಣ ಸಹಕಾರ : ವಿಶ್ವಹಿಂದೂ ಪರಿಷದ್

10:13 AM, Monday, February 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vivaaha

ಮಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿಶ್ವಹಿಂದೂ ಪರಿಷದ್ ಸ್ವಾಗತಿಸಿದ್ದು,ಈ ಕಾರ್ಯಕ್ರಮ ಯಶಸ್ವಿಗೊಳಿಸಲು ವಿಶ್ವ ಹಿಂದೂ ಪರಿಷದ್ ಸಂಪೂರ್ಣ ಸಹಕಾರ ನೀಡಲಿದೆ.

ಈ ಕಾರ್ಯಕ್ರಮ ಸಾಮಾಜಿಕ ಪರಿವರ್ತನೆಗೆ ಮುನ್ನಡಿಯಾಗಿದ್ದು, ಬಡವರಿಗೆ ದೀನ ದಲಿತರಿಗೆ ಮತ್ತು ಸರಳ ವಿವಾಹವಾಗಲಿಚ್ಛಿಸುವವರಿಗೆ ಪುಣ್ಯಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹದ ಮುಖಾಂತರ ಸರಕಾರ ಸುಮಾರು ರೂಪಾಯಿ 55,000 /- ಖರ್ಚು ಮಾಡಲಿದೆ. ಈ ನಿರ್ಧಾರ ಐತಿಹಾಸಿಕವಾಗಿದ್ದು ಸಮಾಜವನ್ನು ಪರಿವರ್ತನೆ ಮಾಡಿಸುವ ಮುಖಾಂತರ ಜಾಗೃತಿಯನ್ನು ಮೂಡಿಸುವ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನು ವಿಶ್ವಹಿಂದೂ ಪರಿಷದ್ ನೀಡಲಿದೆ.

ಸಪ್ತಪದಿ ಸಾಮೂಹಿಕ ಸರಳ ವಿವಾಹದ ಪೂರ್ವಭಾವಿಯಾಗಿ ಜನಜಾಗ್ರತಿಗೋಸ್ಕರ ಹಮ್ಮಿಕೊಂಡಿರುವ ರಥಯಾತ್ರೆಯನ್ನು ಹಿಂದೂ ಸಂಘಟನೆಗಳ ಮುಖಾಂತರ ಬೆಂಬಲಿಸಲಿದ್ದು, ಉಡುಪಿ, ದಕ್ಷಿಣಕನ್ನಡ, ಕೊಡಗು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ, ಯಶಸ್ವಿಗೆ ಪ್ರಯತ್ನಿಸಲಿದ್ದೇವೆ ಎಂದು ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English