ಮುಜರಾಯಿ ಸಿಬ್ಬಂದಿಗೆ ಐದು ಲಕ್ಷ, ವಿಮೆ ಮತ್ತು 10 ಲಕ್ಷ ಜೀವ ವಿಮೆ : ಕೋಟಾ ಶ್ರೀನಿವಾಸ ಪೂಜಾರಿ

Sunday, July 26th, 2020
srinivas-poojary

ಮಂಗಳೂರು:  ರಾಜ್ಯದ ಸಹಸ್ರಾರು ಮುಜಾರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾರಕ ಕೊರೋನಾ ವರೈಸ್ ಸಾಂಕ್ರಾಮಿಕದ ಭದ್ರತೆಗೆ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ದರ್ಜೆಯ ಸಿಬ್ಬಂದಿಗೆ ವಿಮಾ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ‘ಅರ್ಚಕರ ಮನವಿಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಐದು ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಮತ್ತು […]

ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸ್ವಾಗತ, ಸಂಪೂರ್ಣ ಸಹಕಾರ : ವಿಶ್ವಹಿಂದೂ ಪರಿಷದ್

Monday, February 24th, 2020
vivaaha

ಮಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿಶ್ವಹಿಂದೂ ಪರಿಷದ್ ಸ್ವಾಗತಿಸಿದ್ದು,ಈ ಕಾರ್ಯಕ್ರಮ ಯಶಸ್ವಿಗೊಳಿಸಲು ವಿಶ್ವ ಹಿಂದೂ ಪರಿಷದ್ ಸಂಪೂರ್ಣ ಸಹಕಾರ ನೀಡಲಿದೆ. ಈ ಕಾರ್ಯಕ್ರಮ ಸಾಮಾಜಿಕ ಪರಿವರ್ತನೆಗೆ ಮುನ್ನಡಿಯಾಗಿದ್ದು, ಬಡವರಿಗೆ ದೀನ ದಲಿತರಿಗೆ ಮತ್ತು ಸರಳ ವಿವಾಹವಾಗಲಿಚ್ಛಿಸುವವರಿಗೆ ಪುಣ್ಯಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹದ ಮುಖಾಂತರ ಸರಕಾರ ಸುಮಾರು ರೂಪಾಯಿ 55,000 /- ಖರ್ಚು ಮಾಡಲಿದೆ. ಈ ನಿರ್ಧಾರ ಐತಿಹಾಸಿಕವಾಗಿದ್ದು ಸಮಾಜವನ್ನು ಪರಿವರ್ತನೆ ಮಾಡಿಸುವ ಮುಖಾಂತರ […]

ಸಂದೀಪ್ ಶೆಟ್ಟಿ ಜೊತೆ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ನಟಿ ಯಜ್ಞಾ ಶೆಟ್ಟಿ

Thursday, October 31st, 2019
Yajna-shetty

ಮಂಗಳೂರು : ಕರಾವಳಿ ಬೆಡಗಿ, ಸ್ಯಾಂಡಲ್ ವುಡ್ ನಟಿಯಾದ ಯಜ್ಞಾ ಶೆಟ್ಟಿಯವರ ವಿವಾಹವು ಮಂಗಳೂರಿನ ಅಡ್ಯಾರ್ ಗಾರ್ಡನ್ ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಬುಧವಾರದಂದು ನಡೆಯಿತು. ಯಜ್ಞಾ ಶೆಟ್ಟಿಯವರು ಕರಾವಳಿ ಮೂಲದ ಸಂದೀಪ್ ಶೆಟ್ಟಿಯವರನ್ನು ವರಿಸಿದ್ದು, ಈ ವಿವಾಹ ಸಮಾರಂಭದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಟ ಹಾಗೂ ನಿರ್ದೇಶಕ ವೃಷಬ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿ ವಧು-ವರನನ್ನು ಹರಿಸಿದರು. ಯಜ್ಜಾ ಶೆಟ್ಟಿಯವರು ರಾಜಶೇಖರ್ ರಾವ್ ನಿರ್ದೇಶನದ ಒಂದು ಪ್ರೀತಿಯ ಕಥೆ, ನಟ ಜಗ್ಗೇಶ್ […]