ಮಂಗಳೂರು : ದಿನಾಂಕ : 23.02.2020, ಭಾನುವಾರ, ಬೆಳಿಗ್ಗೆ 8.30 ರಿಂದ ಆರಂಭವಾಗಿ ಅಪರಾಹ್ನ ಸಹಭೋಜನದೊಂದಿಗೆ ಸಮಾರೋಪಗೊಂಡಿತು.
ನದಿ ಪರಿಸರ ಸಂರಕ್ಷಣೆಗಾಗಿ ಉಳ್ಳಾಲ ನದಿ ತೀರ ಪ್ರದೇಶಗಳ ಸರ್ವಧರ್ಮೀಯ ನಾಗರಿಕರು (ಉಳಿಯ, ಹೊಯಿಗೆ, ಕಟ್ಟತ್ತಲೆ, ಮಾರ್ಗತಲೆ, ಕಕ್ಕೆತೋಟ, ಪಾಂಡೇಲ್ಪಕ್ಕ (ಬಂಡಸಾಲೆ), ಸೇನೆರೆಬೈಲು, ಕೋಡಿ ಮತ್ತು ಕೋಟೆಪುರ ಒಗ್ಗಟ್ಟಿನಿಂದ ಮುಂದೆ ಬಂದಿದ್ದು, ನದಿ ನಾಶದಿಂದ ಸಂಭವಿಸಿರುವ ಇಲ್ಲಿನ ಮುಖ್ಯ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಇದರ ಜತೆಗೆ ನದಿ ತಟದ ನಿವಾಸಿಗಳಲ್ಲಿ ನದಿ ಸಂರಕ್ಷಣೆಯ ಬಗ್ಗೆ ನಿರಂತರ ಜನಜಾಗೃತಿ ಮೂಡಿಸುವಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಮಾಡುತ್ತಿವೆ.
ಇದರ ಭಾಗವಾಗಿ ನಾಲ್ಕನೇ ಹಂತದ ಸಾಮೂಹಿಕ ಶ್ರಮದಾನ ಕಾರ್ಯವು ಶ್ರೀ ಉಳಿಯ ಧರ್ಮ ಅರಸರ ಕ್ಷೇತ್ರವನ್ನು ಕೇಂದ್ರವಾಗಿಟ್ಟು, ಸ್ಥಳೀಯ ನದಿ ಪರಿಸದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಹಿಂದು, ಮುಸ್ಲಿಮ್, ಕೈಸ್ತ ಬಾಂಧವರು ಸೇರಿ ಶ್ರೀ ಕ್ಷೇತ್ರದ ಆವರಣವನ್ನು ಸ್ವಚ್ಛಗೊಳಿಸಿದರು, ಬಳಿಕ ಪರಿಸರದ ನದಿ ತಟಗಳು ಸೇರಿದಂತೆ ಪ್ರಮುಖ ರಸ್ತೆಗಳನ್ನು ವಿವಿಧ ತಂಡಗಳ ಮೂಲಕ ಶುಚಿಗೊಳಿಸಲಾಯಿತು, ವಿಶೇಷವಾಗಿ ಪರಿಸರದಲ್ಲಿ ಶೇಖರಣೆಗೊಂಡಿರುವ ಪರಿಸರ ಮಾರಕ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜಗಳನ್ನು ಹೆಕ್ಕಿಕೊಂಡು ಬಳಿಕ ನಗರ ಸಭೆಯ ಸಹಕಾರದೊಂದಿಗೆ ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ಕಿಶೋರ್ ಅತ್ತಾವರ ನಿದೇಶಕರು ಸ್ಕೂಲ್ ಆಫ್ ಸೋಷಿಯಲ್ ವರ್ಕ್, ಶ್ರೀ ರಘುವೀರ್ ಸೂಟರ್‌ಪೇಟೆ ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಸಂಧರ್ಭೋಚಿತವಾಗಿ ಮಾತನಾಡಿದರು. ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಇದರ ಸಂಚಾಲಕರಾದ ಶ್ರೀ ಮಂಗಳೂರು ರಿಯಾಜ್ ನದಿ ಸಂರಕ್ಷಣಾ ಅಭಿಯಾನದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು, ಕಾರ್ಯಕ್ರಮದ ಸಂಚಾಲಕ ಶ್ರೀ ಲೋಯೆಡ್ ಆರ್ ಡಿಸೋಜ ಸ್ವಾಗತಿಸಿದರು, ಶ್ರೀ ಸುಂದರ ಉಳಿಯ ವಂದಿಸಿದರು.
ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಆಡಳಿತ ಮಂಡಳಿಯು ಕಾರ್ಯಕ್ರಮದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.
Click this button or press Ctrl+G to toggle between Kannada and English