ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದಲ್ಲಿ ಜನಜಾಗೃತಿ

Saturday, March 21st, 2020
shakti

ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ವರ್ಗದಿಂದ ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದ ಹಲವು ಪ್ರದೇಶದಲ್ಲಿ ಮನೆ ಮನೆಗೆ ತೆರಲಿ ಜನ ಜಾಗೃತಿಯನ್ನು ನಡೆಸಲಾಯಿತು. ಕೊರೊನಾ ವೈರಸ್ (ಕೋವಿದ್-19)ರ ಕುರಿತಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನೆ ಮನೆಗೆ ತೆರಲಿ ಕನ್ನಡ ಹಾಗೂ ಆಂಗ್ಲಭಾಷಾ ಕರಪತ್ರವನ್ನು ವಿತರಿಸಿ ವಿವರಿಸಲಾಯಿತು. ಸರ್ಕಾರ, ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಣಯವನ್ನು ಸ್ವಾಗತಿಸುವಂತೆ ತಿಳಿಸಲಾಯಿತು. ನಾಳೆ ಪ್ರಧಾನಿಯವರು ಕರೆಕೊಟ್ಟಿರುವ ಜನತಾ ಕರ್ಪ್ಯೂವನ್ನು […]

ಜನಜಾಗೃತಿಗಾಗಿ ನದಿ ಪರಿಸರದಲ್ಲಿ ನಡೆಸುವ ಸ್ವಚ್ಚತಾ ಕಾರ್ಯಕ್ರಮ : ನಾಲ್ಕನೇ ಹಂತದ ಸಾಮೂಹಿಕ ಶ್ರಮದಾನ

Monday, February 24th, 2020
jana-jagruti

ಮಂಗಳೂರು : ದಿನಾಂಕ : 23.02.2020, ಭಾನುವಾರ, ಬೆಳಿಗ್ಗೆ 8.30 ರಿಂದ ಆರಂಭವಾಗಿ ಅಪರಾಹ್ನ ಸಹಭೋಜನದೊಂದಿಗೆ ಸಮಾರೋಪಗೊಂಡಿತು. ನದಿ ಪರಿಸರ ಸಂರಕ್ಷಣೆಗಾಗಿ ಉಳ್ಳಾಲ ನದಿ ತೀರ ಪ್ರದೇಶಗಳ ಸರ್ವಧರ್ಮೀಯ ನಾಗರಿಕರು (ಉಳಿಯ, ಹೊಯಿಗೆ, ಕಟ್ಟತ್ತಲೆ, ಮಾರ್ಗತಲೆ, ಕಕ್ಕೆತೋಟ, ಪಾಂಡೇಲ್ಪಕ್ಕ (ಬಂಡಸಾಲೆ), ಸೇನೆರೆಬೈಲು, ಕೋಡಿ ಮತ್ತು ಕೋಟೆಪುರ ಒಗ್ಗಟ್ಟಿನಿಂದ ಮುಂದೆ ಬಂದಿದ್ದು, ನದಿ ನಾಶದಿಂದ ಸಂಭವಿಸಿರುವ ಇಲ್ಲಿನ ಮುಖ್ಯ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ, ಇದರ ಜತೆಗೆ ನದಿ ತಟದ […]

ಬಾಲ ಭಿಕ್ಷಾಟನೆ ನಿರ್ಮೂಲನೆಗಾಗಿ ಜನಜಾಗೃತಿ

Friday, September 30th, 2016
Child health

ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಗರದ 12 ವೃತ್ತಗಳಲ್ಲಿ ಬಾಲ ಭಿಕ್ಷಾಟನೆ ನಿರ್ಮೂಲನೆಗಾಗಿ ಜನಜಾಗೃತಿ ಸಲುವಾಗಿ ಘೋಷಣಾ ಫಲಕವನ್ನು ಹಿಡಿದುಕೊಂಡು ಜಾಥಾ ನಡೆಸಿದರು. ಮೇಯರ್ ಹರಿನಾಥ್ ಕಾರ್ಯಕ್ರಮದ ಬ್ಯಾನರ್‌ ಅನಾವರಣಗೊಳಿಸುವುದರ ಮೂಲಕ ಜಾಥಾಗೆ ಚಾಲನೆ ನೀಡಿದರು. ಕೆಲವು ಅಜ್ಞಾನಿ ಪೋಷಕರು ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಂಡು ಅವರನ್ನು ಶಿಕ್ಷಣದ ಅವಕಾಶದಿಂದ ವಂಚಿತರನ್ನಾಗಿಸುವುದರ ಜೊತೆಗೆ ನಗರ ಜೀವನದ ಕರಾಳತೆಯನ್ನು ಹೆಚ್ಚಿಸುತ್ತಿದ್ದಾರೆ. ಭಿಕ್ಷೆ ಬೇಡಿದ ಮಕ್ಕಳು ಆತ್ಮವಿಶ್ವಾಸ ಹಾಗೂ ಆತ್ಮಗೌರವ ಇಲ್ಲದವರಾಗಿ ಬೆಳೆದು ದೇಶಕ್ಕೆ ಮುಳುವಾಗುತ್ತಾರೆ. ಆದ್ದರಿಂದ ಬಾಲ ಭಿಕ್ಷಾಟನೆಯನ್ನು […]

ಗೋವಿನ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ: ಸಿದ್ಧಾರ್ಥ ಗೋಯೆಂಕಾ

Monday, September 26th, 2016
siddartha-goyenka

ಉಡುಪಿ: ಗೋವಿನೊಂದಿಗಿರುವ ಭಾವನಾತ್ಮಕ ಸಂಬಂಧದ ಜೊತೆಗೆ ಗೋವಿನಿಂದ ಸಿಗುವ ವಾಣಿಜ್ಯ ಉಪಯೋಗ ಹಾಗೂ ಔಷಧಿಯುಕ್ತ ವಸ್ತುಗಳ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ ಎಂದು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಗೋಸಂರಕ್ಷಣಾ ಪ್ರಕೋಷ್ಠದ ಸಭೆ ಉದ್ದೇಶಿಸಿ ಮಾತನಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿಯಂತ್ರಿಸಬೇಕು ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ […]

ಜೈಲು ಶಿಕ್ಷೆಗೆ ಸೀಮಿತವಾದುದಲ್ಲ ಅದು ಸತ್‌ಪರಿವರ್ತನೆಯ ದಾರಿ : ರವೀಶ ತಂತ್ರಿ

Thursday, December 17th, 2015
Kasaragod subjail

ಮುಳ್ಳೇರಿಯ : ಜೈಲು ಶಿಕ್ಷೆ ಎಂಬುದು ಕೇವಲ ಶಿಕ್ಷೆಗೆ ಮಾತ್ರ ಸೀಮಿತವಾದ ಜಾಗವಲ್ಲ ಅದೊಂದು ಆತ್ಮಚಿಂತನೆಯೊಡಗೂಡಿ ಸತ್‌ಪರಿವರ್ತನೆಯ ದಾರಿಯಲ್ಲಿ ಮುನ್ನಡೆಯುವ ಸದವಕಾಶವಾಗಿರುತ್ತದೆ. ಹಾಗಾಗಿ ಜೈಲಿನಲ್ಲಿರುವ ಎಲ್ಲಾ ಕೈದಿಗಳು ಬಿಡುಗಡೆಯಾಗಿ ಬರುವಾಗ ಸನ್ನಡತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಉನ್ನತಿಗೇರಲು ಭಗವತ್‌ಶಕ್ತಿಗಳು ಆನುಗ್ರಹಿಸಿ ಜನ್ಮಸಾರ್ಥಕ್ಯಗೊಳಿಸಿಕೊಳ್ಳಲಿ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಸ್ಪೆಶಲ್ ಸಬ್ ಜೈಲಿನಲ್ಲಿ ಜೈಲಿನ ವಾಚನಾಲಯಕ್ಕೆ ಸುಮಾರು 250 ರಷ್ಟು ಕನ್ನಡ ಪುಸ್ತಕಗಳು ಹಾಗೂ ಕನ್ನಡ ದಿನಪತ್ರಿಕೆಯನ್ನು ಕುಂಟಾರಿನ ಪರಿವರ್ತನಾ ಯುವಕ ಸಂಘದ […]