ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದಲ್ಲಿ ಜನಜಾಗೃತಿ

8:13 PM, Saturday, March 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

shaktiಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ವರ್ಗದಿಂದ ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದ ಹಲವು ಪ್ರದೇಶದಲ್ಲಿ ಮನೆ ಮನೆಗೆ ತೆರಲಿ ಜನ ಜಾಗೃತಿಯನ್ನು ನಡೆಸಲಾಯಿತು. ಕೊರೊನಾ ವೈರಸ್ (ಕೋವಿದ್-19)ರ ಕುರಿತಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನೆ ಮನೆಗೆ ತೆರಲಿ ಕನ್ನಡ ಹಾಗೂ ಆಂಗ್ಲಭಾಷಾ ಕರಪತ್ರವನ್ನು ವಿತರಿಸಿ ವಿವರಿಸಲಾಯಿತು. ಸರ್ಕಾರ, ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಣಯವನ್ನು ಸ್ವಾಗತಿಸುವಂತೆ ತಿಳಿಸಲಾಯಿತು.
ನಾಳೆ ಪ್ರಧಾನಿಯವರು ಕರೆಕೊಟ್ಟಿರುವ ಜನತಾ ಕರ್ಪ್ಯೂವನ್ನು ತಪ್ಪದೇ ಪಾಲಿಸುವಂತೆ ವಿನಂತಿಸಲಾಯಿತು. ಜನಜಾಗೃತಿಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದೆ. ಸವಿಸ್ತರವಾದ ಕರಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ನೀಡಿರುವ ಮಾಹಿತಿಯನ್ನು ಒದಗಿಸಲಾಯಿತು. ಸಂಸ್ಥೆಯ ಸುಮಾರು 25 ಜನರು 10 ತಂಡದಲ್ಲಿ ಈಡನ್ ಗಾರ್ಡನ್, ದತ್ತನಗರ, ಕಸ್ಟೋಮ್ಸ್ ಕಾಲೋನಿ, ಮೂಡಾ ಲೆಜೌಟ್, ಸೌಹಾರ್ದ ಲೇನ್‌ನಲ್ಲಿ ಒಟ್ಟು ೬೦೦ ಮನೆಗಳನ್ನು ಸಂಪರ್ಕಿಸಿದರು.

ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್, ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಜಿ. ಕಾಮಾತ್, ಸಾಮಾಜಿಕ ಕಾರ್ಯಕರ್ತರಾದ ಶ್ರವಣ್ ಕುಮಾರ್ ಸೇರಿದಂತೆ ಅನೇಕರು ನೇತೃತ್ವ ವಹಿಸಿದರು.

shakti

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English