ಮಂಗಳೂರು : ಮಂಗಳೂರು ಕ್ಲಾಕ್ ಟವರ್ ನ ಎದುರು, ಪುರಭವನದ ಹತ್ತಿರ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳು ಒಂದಾಗಿ ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಿದರು.
” ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಆಂದೋಲನದಲ್ಲಿ ಹಿಂಸಾಚಾರ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಬೇಕು ” ಎಂದು ಚಂದ್ರ ಮೊಗೇರ ಹಿಂದೂ ಜನಜಾಗೃತಿ ಸಮಿತಿಯವರು ಹೇಳಿದರು.
ಶ್ರೀ. ಚಂದ್ರ ಮೋಗೇರ ಇವರು ಮಾತನಾಡಿ ” ಪೌರತ್ವ ಸುಧಾರಣೆ ಕಾಯಿದೆ’ ಯ ವಿರುದ್ಧ ಹಿಂಸಾಚಾರದ ಪ್ರಕರಣದಲ್ಲಿ ಉತ್ತರಪ್ರದೇಶ ಪೋಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ( ಪಿ.ಎಫ್.ಆಯ್) ಎಂಬ ಜಿಹಾದಿ ಸಂಘಟನೆಯ 108 ಕಾರ್ಯಕರ್ತರು ಬಂಧಿಸಿದರು.ಈ ಸಂಘಟನೆಯ ಇತರ ಐವರನ್ನು ಬಿಜನೌರ್ ನಲ್ಲಿ ಬಂಧಿಸಲಾಗಿದ್ದು ಈ ಐವರು ಸದಸ್ಯರು ಶಾಹೀನ್ ಬಾಗ್ ಆಂದೋಲನವನ್ನು ಉದ್ರಿಕ್ತಗೊಳಿಸಲು, ಆಂದೋಲನಕಾರರನ್ನು ಪ್ರಚೋಧಿಸಲು ಹಾಗೂ ಆಂದೋಲನಕಾರರಿಗೆ ಆರ್ಥಿಕ ಸಹಾಯವನ್ನು ಪೂರೈಸುವಲ್ಲಿ ಸಕ್ರಿಯರಾಗಿದ್ದರು.
ಸಂಪೂರ್ಣ ದೇಶದಲ್ಲಿ ನಿರ್ಬಂಧ ಹೇರಿರುವ ‘ಸಿಮೀ’ ಯ ಉಗ್ರಗಾಮಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕಾರ್ಯಕರ್ತರಿಗೆ ತರಬೇತಿ ನೀಡಿದ್ದಾಗಿ ಕೆಲವು ಫಟನೆಗಳಿಂದ ಬೆಳಕಿಗೆ ಬಂದಿದೆ.ಆದ್ದರಿಂದ ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ತೊಂದರೆಯಾಗದೆ ಇರಲು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ಎಂಬ ಸಂಘಟನೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆಯನ್ನು ಈ ಆಂದೋಲನದಲ್ಲಿ ಮಾಡಲಾಯಿತು. ಜೊತೆಗೆ ಕಾಶ್ಮೀರದ ಭಯೋತ್ಪಾದಕರನ್ನು ದಾನಶೂತ ಹಾಗೂ ಹಿಂದೂಗಳ ರಕ್ಷಕರು ಎಂದು ಬಿಂಬಿಸುವ ಜೊತೆಗೆ ಕಾಶ್ಮೀರಿ ಹಿಂದೂಗಕ ಮೇಲಿನ ಅತ್ಯಾಚಾರವನ್ನು ಮುಚ್ಚಿಡುವ ‘ಶಿಕಾರಾ’ ಚಲನಚಿತ್ರವನ್ನು ಬಹಿಷ್ಕರಿಸಬೇಕು” ಎಂದು ಆಗ್ರಹಿಸಿದರು.
ಶ್ರೀ. ಚಂದ್ರ ಮೋಗೇರ ಇವರು ಮಾತನ್ನು ಮುಂದುವರೆಸುತ್ತ “ಶಾಹೀನ್ ಬಾಗ್ ಪರಿಸರದಲ್ಲಿ ಪೌರತ್ವ ಸುಧಾರಣೆ ಕಾಯಿದೆ ವಿರುದ್ಧ ಡಿಸೆಂಬರ್ 15, 2019 ರಿಂದ ಮತಾಂಧರು ಧರಣಿ ಆಂದೋಲನವನ್ನು ಪ್ರಾರಂಭಿಸಲಾಯಿತು. ಈ ಆಂದೋಲನದ ಯೋಜನೆಯನ್ನು ರೂಪಿಸುವ ‘ಜೆ.ಎನ್.ಯೂ’ ನ ಮಾಜೀ ವಿದ್ಯಾರ್ಥಿ ಶರಜೀಲ್ ಇಮಾಮನು ಬಹಿರಂಗವಾಗಿ ‘ ಅಸ್ಸಾಮ್ ಅನ್ನು ಭಾರತದಿಂದ ಮುರಿಯಲು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ; ಹಾಗೆ ಮಾಡಿದರೆ ಕೇಂದ್ರ ಸರಕಾರವು ನಾವು ಹೇಳಿದಂತೆ ಕೇಳುತ್ತದೆ’. ‘ ‘ರೈಲು ಗಾಡಿಗಳನ್ನು ನಿಲ್ಲಿಸಿರಿ’, ಎಂಬ ಹೇಳಿಕೆಗಳನ್ನು ನೀಡಿದನು.ಈತನು ‘ ಈ ರೀತಿಯ ಆಂದೋಲನವನ್ನು ದೇಶಾದ್ಯಂತ ಮಾಡಿರಿ’, ಎಂದು ಸತತವಾಗಿ ಇಲ್ಲಿಂದ ಪ್ರಚೋದನೆ ಮಾಡುತ್ತಿದ್ದಾನೆ ; ಇದರ ಅರ್ಥ ‘ಈ ರೀತಿಯ ಆಂದೋಲನವನ್ನು ದೇಶಾದ್ಯಂತ ಮಾಡಿರಿ’ ಇಂದು ಸತತವಾಗಿ ಇಲ್ಲಿಂದ ಪ್ರಚೋದನೆ ಮಾಡುತ್ತಿದ್ದಾನೆ ; ಇದರ ಅರ್ಥ ಈ ರೀತಿಯ ಹಿಂಸಾತ್ಮಕ ಆಂದೋಲಗಳನ್ನು ನಡೆಸಿ ದೇಶಾದ್ಯಂತ ಅರಾಜಕತೆಯನ್ನು ನಿರ್ಮಿಸಿ ಹಾಗೂ ದೇಶವನ್ನು ಅಸ್ಥಿರಗೊಳಿಸುವುದು ಎಂಬುದು ಸ್ಪಷ್ಟವಾಗಿದೆ.ಇದರಿಂದ ಈ ಆಂದೋಲನದ ಹಿಂದೆ ಸುನಿಯೋಜಿತ ಪದ್ದತಿಯನ್ನು ಬಳಸಲಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ.ಒಟ್ಟಿನಲ್ಲಿ ಈಗ ಈ ಆಂದೋಲನವು ಧಾರಣೆ ಮಾಡಿದರುವ ಸ್ವರೂಪವನ್ನು ನೋಡಿದರೆ ‘ ವಿದೇಶೀ ಶಕ್ತಿಗಳ ಬೆಂಬಲ ಪಡೆದಿರುವ ಸಾಮ್ಯವಾದಿಗಳು ಹಾಗೂ ಮತಾಂಧರು ಪ್ರಾರಂಭಿಸಿರುವ ಈ ಪ್ರಕರಣವು ಹಿಂದೂ ಬಾಹುಳ್ಯ ‘ ಭಾರತ ದೇಶದ ವಿರುದ್ಧ ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ’, ಎಂಬ ಅನುಮಾನಕ್ಕೆ ಈಗ ಪುಷ್ಟಿ ಸಿಗುತ್ತಿದೆ. ಪೋಲೀಸರು ಇಲ್ಲಿ ಆಂದೋಲನ ಮಾಡುತ್ತಿರುವುವವರನ್ನು ಎಲ್ಲರನ್ನೂ ತೆರವುಗೊಳಿಸಿ ಈ ಪರಿಸರವನ್ನು ಮುಕ್ತಗೊಳಿಸಿ ನಾಗರಿಕರು ಜೀವನ ನಡೆಸಲು ಅನುಕೂಲ ವಾತಾವರಣವನ್ನು ನಿರ್ಮಿಸಲಿ. ಅದೇ ರೀತಿ ಈ ಆಂದೋಲನದಲ್ಲಿ ದೇಶವಿರೊಧಿ, ಸಮಾಜವಿರೋಧಿ, ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮುಖಂಡರು, ವಕ್ತಾರರು ಇವರುಗಳ ವಿರುದ್ಧ ಅಪರಾಧಗಳನ್ನು ದಾಖಲಿಸಿಕೊಂಡು ಅವರ ಮೇಲೆ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕು” ಎಂದು ವಿಚಾರ ಮಂಡಿಸಿದರು.
ಈ ಆಂದೋಲದ ವಿಷಯದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಅಧಿಕಾರಿಗಳ ಮೂಲಕ ಕೇಂದ್ರಿಯ ಗೃಹ ಸಚಿವರಿಗೆ ಮನವಿಯನ್ನು ನೀಡಲಾಯಿತು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ,ದೇರಳಕಟ್ಟೆ ಇದರ ಗುರು ಸ್ವಾಮಿಗಳಾದ ಶ್ರೀ ವಿಶ್ವನಾಥ್ ಪೂಜಾರಿ ಅವರು ಮಾತನಾಡುತ್ತಾ “ಹೇಗೆ ಮಾನ್ಯ ಪ್ರಧಾನ ಮಂತ್ರಿಗಳು ಸಿಎ ಏ ಕಾನೂನನ್ನು ಜಾರಿಗೆ ತಂದಿದ್ದಾರೋ ಅದೇ ರೀತಿ ಸಮಾನ ನಾಗರಿಕ ಕಾನೂನು ತಂದು ಈ ದೇಶದ ಬಹುಸಂಖ್ಯಾತ ಹಿಂದುಗಳ ಮೇಲಾಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಆಗ್ರಹಿಸಿದರು ಜೊತೆಗೆ ಸಿಎ ಕಾನೂನಿನ ಸಂದರ್ಭದಲ್ಲಿ ಮುಸಲ್ಮಾನರಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಿನೋದ್ ಛೋಪ್ಡ ನಿರ್ದೇಶನದ ಶಿಕಾರ ಚಲನ ಚಿತ್ರದಲ್ಲಿ ನಿರಾಶ್ರಿತ ಕಾಶ್ಮೀರ ಹಿಂದೂಗಳ ಭಾವನೆಯೊಂದಿಗೆ ಕಾಶ್ಮೀರಿ ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟ ಆಡಲಾಗಿದೆ. ಈ ಸಿನಿಮಾದಲ್ಲಿ ಬೆರಳಣಿಕೆಯಷ್ಟೆ ಹಿಂದೂಗಳ ಹತ್ಯೆ ಮಾಡಲಾಗಿ ದೆ ಎಂದು ಸತ್ಯ ಮರ ಮಾಚಿದ್ದಾರೆ. ನಿಜವಾಗಿ ಹತ್ತು ಸಾವಿರ ಹಿಂದೂಗಳ ಮಾರಣ ಹೋಮ ನಡೆದಿದೆ,ಇಂತಹ ಅನೇಕ ಅಸತ್ಯ ಇದರಲ್ಲಿ ತೋರಿಸಲಾಗಿದ್ದು .ಕೂಡಲೆ ಈ ಚಲನಚಿತ್ರವನ್ನು ನಿಷೇಧಿಸ ಬೇಕು ಮತ್ತು ಬಹಿಷ್ಕರಿಸ ಬೇಕು ಎಂದು ಶ್ರೀ ಹರ್ಷವರ್ದನ ಶೆಟ್ಟಿ, ಹಿಂದೂ ಜನ ಜಾಗೃತಿ ಸಮಿತಿ, ಮಂಗಳೂರು ಇವರು ಕರೆ ನೀಡಿದರು.
ಆಂದೋಲನವನ್ನು ಶ್ರೀ.ಬಾಲಕೃಷ್ಣ ಶೆಟ್ಟಿ ಯವರು ಶಂಖನಾದ ಮಾಡಿ ಪ್ರಾರಂಭಿಸಿದರು. ಶ್ರೀ ಉಪೇಂದ್ರ ಆಚಾರ್ಯ ನಿರೂಪಿಸಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ ಇದರ ಗುರು ಸ್ವಾಮಿಗಳಾದ ಶ್ರೀ ವಿಶ್ವನಾಥ ಪೂಜಾರಿ, ಹಿಂದೂ ಮಹಾಸಭಾದ ಶ್ರೀ ಲೋಕೇಶ್ ಕುತ್ತಾರ್, ಶ್ರೀ ಸತೀಶ್ , ಶ್ರೀ ರಾಕೇಶ್ ಕೋಟೆಕಾರು, ಶ್ರೀ ಜಯಂತಿ ಸಿದ್ದಕಟ್ಟೆ, ಆನಂದ್ ಕಾನರ್ಪ, ಶ್ರೀ ಸುರೇಶ್ ಬಿಜೈ, ಶ್ರೀ ಶಶಿಧರ್ ಬಾಳಿಗಾ ಶಕ್ತಿನಗರ, ದಯಾನಂದ ಒಳ ಚಿಲ್, ಶ್ರೀಮತಿ ಮನೋಹರಿ, ಸೌ.ಹೇಮಾವತಿ, ಶ್ರೀ ವೇಣುಗೋಪಾಲ್, ಸೌ.ಗೀತಾ ಸುಂದರ,ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮಾ ನಾಯಕರಾದ ಶ್ರೀ ಚಂದ್ರ ಮೊಗೇರ, ಶ್ರೀಹರ್ಷವರ್ಧನ ಶೆಟ್ಟಿ,ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ ,ಶ್ರೀ ಗಣೇಶ್ ಸಾಲಿಯಾನ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ರಾಧಾಕೃಷ್ಣ ಮಾರ್ತಾಜೆ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English