ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವಿವಿಧ ಸಂಶೋಧನಾ ಕೇಂದ್ರಗಳ ಉದ್ಘಾಟನಾ ಸಮಾರಂಭ

5:41 PM, Saturday, November 10th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Sahyaadri Collegeಮಂಗಳೂರು :ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇ ಜ್ ಅಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ನಲ್ಲಿ ಕರ್ನಾಟಕ ಸರಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಹಯೋಗದೊಂದಿಗೆ ನೂತನವಾಗಿ ಸ್ಥಾಪನೆಗೊಂಡಿರುವ ಸಂಶೋಧನಾ ಕೇಂದ್ರ, ಇನ್‌ಕುಬೇಶನ್ ಸೆಂಟರ್, ಉದ್ಯೋಗಾವಕಾಶ ಒದಗಣೆ ಕೇಂದ್ರ, ತರಬೇತಿ ಕೇಂದ್ರಗಳು ಹಾಗೂ ಅಲಹಾಬಾದ್‌ನ ಐಐಐಟಿ ಸಂಸ್ಥೆಯ ಸಹಯೋಗದಲ್ಲಿ ಸ್ಥಾಪನೆಗೊಂಡಿರುವ ಉತ್ಕೃಷ್ಟತಾ ಕೇಂದ್ರ ಹಾಗೂ ನಾವಿನ್ಯತಾ ಪ್ರಯೋಗಾಲಯ ಮೊದಲಾದವುಗಳ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಸಿ.ಟಿ ರವಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಭಾರತ ದೇಶವು ಸಾವಿರಾರು ವರ್ಷಗಳಿಂದ ಜ್ಞಾನಾಧರಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದರಿಂದ ಹಲವಾರು ವರ್ಷಗಳ ಹಿಂದೆ ವಿದೇಶಿಯರು ನಮ್ಮಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದರು. ಯಾಕೆಂದರೆ ಆಗಿನ ಕಾಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ಉನ್ನತ ಸ್ಥಿತಿಯಲ್ಲಿತ್ತು. ಗೆಲಿಲಿಯೋ ಭೂಮಿ ದುಂಡಗಿದೆ ಎಂದು ಸಂಶೋಧಿಸುವ ಹಲವಾರು ವರ್ಷಗಳ ಮೊದಲೇ ಆರ್ಯಭಟನು ಭೂಮಿಯು ಸೂರ್ಯನ ಸುತ್ತ 365 ದಿನಗಳು ಸುತ್ತುತ್ತದೆ ಎಂದು ಪ್ರತಿಪಾದಿಸಿದ್ದ. ಆದರೆ ನಂತರದ ವರ್ಷಗಳಲ್ಲಿ ವಿದೇಶಿಯರ ಗುಲಾಮಗಿರಿಯ ಪ್ರಭಾವದಿಂದ ನಮ್ಮ ಸಾಮರ್ಥ್ಯವನ್ನು ನಾವು ಮರೆತು ಬಿಟ್ಟಿದ್ದೇವೆ. ನಾವು ನಮ್ಮ ತನವನ್ನು ಮರೆಯದೇ ಶೈಕ್ಷಣಿಕ ಮಟ್ಟವನ್ನು ಉನ್ನತ ಮಟ್ಟಕ್ಕೇರಿಸಲು ಪ್ರಯತ್ನಪಡಬೇಕು ಎಂದರು.

ಸಮಾರಂಭಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮಾತನಾಡಿ ಅವರು ಸಮಾಜದಲ್ಲಿ ಏನಾದರು ಬದಲಾವಣೆ ತರಬೇಕೆಂದು ಹಲವರು ಕನಸನ್ನು ಕಂಡರೂ ಇದರಲ್ಲಿ ಯಶಸ್ವಿಯಾಗುವವರು ಬೆರಳೆಣಿಕೆ ಯಷ್ಟು ಜನ ಮಾತ್ರ ಇಂತವರ ಸಾಲಿನಲ್ಲಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ಭಂಡಾರಿಯವರೂ ಒಬ್ಬರು. ವಿಧ್ಯಾರ್ಥಿಗಳು ಹೊಸ ಹೊಸ ವಿಚಾರಗಳಿಗೆ ಹೆಚ್ಚು ಒತ್ತು ನೀಡಿ, ಹೊಸ ಅನ್ವೇಷಣೆಯಲ್ಲಿ ತೊಡಗುವ ಮೂಲಕ ಸಾಧನೆ ಮಾಡಬೇಕು, ಸಾಮಾಜಿಕ ಚಿಂತನೆಯಲ್ಲಿ ಯುವಜನತೆಯ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು, ಅದ್ಭುತ ಕ್ಯಾಂಪಸ್‍ನಲ್ಲಿ ವೇಗವಾಗಿ ಸಾಗಿ ಹೊಸ ಅವಿಷ್ಕಾರದೊಂದಿಗೆ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರದ ಸಂಪೂರ್ಣ ಸಹಕಾರವಿದೆ ಎಂದು ಡಿ,ವಿ ಹೇಳಿದರು.

ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಅವರು ಮಾತನಾಡಿ ಕರ್ನಾಟಕ ಸರಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ಸಹಯೋಗದೊಂದಿಗೆ ರಾಜ್ಯದಲ್ಲೇ ಪ್ರಥಮವಾಗಿ ಸಂಶೋಧನಾ ಕೇಂದ್ರ ಇಲ್ಲಿ ಸ್ಥಾಪನೆಗೊಳ್ಳುತ್ತಿರುವುದು ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿರುವ ಅಲಹಾಬಾದ್‌ನ ಐಐಐಟಿ ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆಗೊಳ್ಳುತ್ತಿರುವುದು ಒಂದು ಹೆಗ್ಗಳಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೃಷ್ಣಪಾಲೇಮಾರ್, ಐಎಎಸ್ ಸಿದ್ದಯ್ಯ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಡಿ ತಿವಾರಿ, ಐಐಐಟಿ ಅಹಮದಾಬಾದ್ ನ ನಿರ್ದೇಶಕ ಡಾ.ಮಹೇಶ್ವರಪ್ಪ, ಎಂಜಿಆರ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಡಿಜಿಪಿ ಅಮರ್ ಕುಮಾರ್ ಪಾಂಡೆ, ಸಂಪೂರ್ಣ ಸ್ವರಾಜ್ ಫೌಂಡೇಶನ್ ಅಧ್ಯಕ್ಷ ಶಂಕರ್ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English