ದೆಹಲಿ ಹಿಂಸಾಚಾರ : ಮೋರಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಯ ಶವ ಪತ್ತೆ

4:18 PM, Wednesday, February 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ankith-Sharma

ನವದೆಹಲಿ : ಪೌರತ್ವದ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಹೊತ್ತು ಉರಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗಾಗಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ನಡುವೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಶವವೊಂದು ದೆಹಲಿಯ ಮೋರಿಯಲ್ಲಿ ಪತ್ತೆಯಾಗಿದೆ.

ಅಂಕಿತ್ ಶರ್ಮಾ ಸಾವನ್ನಪ್ಪಿದ ಅಧಿಕಾರಿಯಾಗಿದ್ದಾರೆ. ಉತ್ತರ ದೆಹಲಿಯ ಚಾಂದಭಾಗ್ನಲ್ಲಿ ಬೆಳಗ್ಗೆ ಇವರ ಶವ ಪತ್ತೆಯಾಗಿದೆ.

ಮಂಗಳವಾರ ಅಂಕಿತ್ ಶರ್ಮಾ ಮನೆಗೆ ಹಿಂದಿರುಗುವಾಗ ಅವರ ಮೇಲೆ ಗುಂಪು ದಾಳಿ ನಡೆಸಿದೆ. ಈ ವೇಳೆ ಹಲ್ಲೆ ನಡೆಸಿ ಅವರನ್ನು ಹತ್ಯೆಗಯ್ಯಲಾಗಿದೆ. ಬಳಿಕ ದೇಹವನ್ನು ಮೋರಿಗೆ ಎಸೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಶರ್ಮಾ ಅವರ ತಂದೆ ಕೂಡ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರು ಅಂಕಿತ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಉಂಟಾದ ಈ ಸಂಘರ್ಷದಲ್ಲಿ 20 ನಜನ ಸಾವನ್ನಪ್ಪಿದ್ದಾರೆ. ಸೋಮವಾರ ಎರಡು ಗುಂಪುಗಳ ನಡುವೆ ಉಂಟಾದ ಸಂಘರ್ಷದಲ್ಲಿ 42 ವರ್ಷದ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಸಾವನ್ನಪ್ಪಿದ್ದರು. ಸದ್ಯ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು, ನಿನ್ನೆಗಿಂತ ಕೊಂಚ ಗಲಭೆ ಕಡಿಮೆಯಾಗಿದೆ. ಈಶಾನ್ಯ ದೆಹಲಿಯುದ್ದಕ್ಕೂ ಪ್ಯಾರಾ ಮಿಲಿಟರಿ ಮತ್ತು ರಿಸರ್ವ್ ಪೊಲೀಸ್ ಪಡೆ ಗಸ್ತು ತಿರುಗುತ್ತಿದ್ದು, ಸೈನ್ಯವನ್ನೂ ನಿಯೋಜಿಸುವ ಸಾಧ್ಯತೆಯಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English