ದೆಹಲಿಯಲ್ಲಿ ಹಿಂಸಾಚಾರ ಎಸಗಲು ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ 1.61 ಕೋಟಿ ಹಣ ಪಡೆದಿದ್ದ

Tuesday, September 22nd, 2020
delhi riot

ನವದೆಹಲಿ : ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಹೋರಾಟಗಾರ ಖಾಲಿದ್ ಸೈಫಿ ಮತ್ತು ಎಎಪಿಯ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ದೆಹಲಿಯಲ್ಲಿ ಹಿಂಸಾಚಾರ ಎಸಗಲು 1.61 ಕೋಟಿ ಹಣ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಫಿಯಾ ಉರ್ ರೆಹಮಾನ್ ಮತ್ತು ವಿದ್ಯಾರ್ಥಿ ಮೀರನ್ ಹೈದರ್ ಅವರ ಹೆಸರೂ ಹಣಪಡೆದವರ ಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ. ಸಿಎಎ ವಿರುದ್ಧದ ಪ್ರತಿಭಟನೆ ವೇಳೆ […]

ದೆಹಲಿ ಹಿಂಸಾಚಾರ ವಿರೋಧಿಸಿ ಕೆ.ಸಿ. ರೋಡ್ ಜಂಕ್ಷನ್ ನಲ್ಲಿ ಮೊಂಬತ್ತಿ ಪ್ರತಿಭಟನೆ ಹಾಗೂ ಮೌನ ಪ್ರಾರ್ಥನೆ

Wednesday, March 4th, 2020
ullal

ಉಳ್ಳಾಲ : ಫ್ಯಾಸಿಸ್ಟ್ ಶಕ್ತಿಗಳು ಆಯುಧ ಮುಖೇನ ಹತ್ಯಾಕಾಂಡವನ್ನು ನಡೆಸಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಿ ಬೇಕಾದರೂ ಇಂತಹ ಕೃತ್ಯ ನಡೆಯುವ ಸಂಭವ ಇದೆ. ಇದನ್ನು ವಿರೋಧಿಸುವತ್ತ ಜನ ಸಿದ್ಧರಾಗಿರಬೇಕು ಎಂದು ಸಂಯುಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದರು. ಅವರು ಸಂಯುಕ್ತ ನಾಗರಿಕ ವೇದಿಕೆ ಕೆ.ಸಿ.ರೋಡ್ ಇದರ ವತಿಯಿಂದ ದೆಹಲಿಯಲ್ಲಿ ನಡೆದ ಹತ್ಯಾಕಾಂಡ ಮತ್ತು ಮುಸ್ಲಿಮರ ವಿರುದ್ದ ವ್ಯವಸ್ಥಿತವಾಗಿ ಫ್ಯಾಸಿಸ್ಟ್ ಶಕ್ತಿಗಳು ಮಾಡುತ್ತಿರುವ ಕ್ರೌರ್ಯ ಖಂಡಿಸಿ ಕೆ.ಸಿ. ರೋಡ್ ಜಂಕ್ಷನ್ ನಲ್ಲಿ ನಡೆದ […]

ದೆಹಲಿ ಹಿಂಸಾಚಾರ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಮುರಳೀಧರ್ ವರ್ಗಾವಣೆ

Thursday, February 27th, 2020
s-muralidhar

ನವದೆಹಲಿ : ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಮುರಳೀಧರ್ ಅವರು ಬುಧವಾರ (ಫೆಬ್ರವರಿ 26, 2020) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದಾರೆ. ಆದಾಗ್ಯೂ, ಈಶಾನ್ಯ ದೆಹಲಿಯಲ್ಲಿ ಗಲಭೆಗಳು ಸಂಭವಿಸುವ ಹಲವು ದಿನಗಳ ಮೊದಲು (ಫೆಬ್ರವರಿ 12) ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು ಶಿಫಾರಸು ಮಾಡಿದ್ದರಿಂದ ಇದು ವಾಡಿಕೆಯ ವರ್ಗಾವಣೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, […]

ದೆಹಲಿ ಹಿಂಸಾಚಾರ : ಗಲಭೆಯಲ್ಲಿ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆ

Thursday, February 27th, 2020
himsachara

ನವದೆಹಲಿ : ಕಳೆದ 4 ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಇದುವರೆಗೂ ದೆಹಲಿಯ ಸಿಎಎ ಹಿಂಸಾಚಾರಕ್ಕೆ ಒಬ್ಬ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಐಬಿ ಅಧಿಕಾರಿ ಸೇರಿ 34 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಜನ್‌ಪುರ, ಮೌಜ್‌ಪುರ್‌ ಮತ್ತು ಕಾರವಾಲ್‌ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ದೆಹಲಿ ಪೊಲೀಸರು ಇದುವರೆಗೂ 18ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಗಲಭೆಗೆ ಸಂಬಂಧಿಸಿದಂತೆ 106 ಜನರನ್ನು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಈಶಾನ್ಯ ದೆಹಲಿಯಲ್ಲಿ ಒಂದು ತಿಂಗಳ […]

ದೆಹಲಿ ಹಿಂಸಾಚಾರ : ಮೋರಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಯ ಶವ ಪತ್ತೆ

Wednesday, February 26th, 2020
Ankith-Sharma

ನವದೆಹಲಿ : ಪೌರತ್ವದ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಹೊತ್ತು ಉರಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗಾಗಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ನಡುವೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಶವವೊಂದು ದೆಹಲಿಯ ಮೋರಿಯಲ್ಲಿ ಪತ್ತೆಯಾಗಿದೆ. ಅಂಕಿತ್ ಶರ್ಮಾ ಸಾವನ್ನಪ್ಪಿದ ಅಧಿಕಾರಿಯಾಗಿದ್ದಾರೆ. ಉತ್ತರ ದೆಹಲಿಯ ಚಾಂದಭಾಗ್ನಲ್ಲಿ ಬೆಳಗ್ಗೆ ಇವರ ಶವ ಪತ್ತೆಯಾಗಿದೆ. ಮಂಗಳವಾರ ಅಂಕಿತ್ ಶರ್ಮಾ ಮನೆಗೆ ಹಿಂದಿರುಗುವಾಗ ಅವರ ಮೇಲೆ ಗುಂಪು ದಾಳಿ ನಡೆಸಿದೆ. ಈ ವೇಳೆ ಹಲ್ಲೆ ನಡೆಸಿ ಅವರನ್ನು ಹತ್ಯೆಗಯ್ಯಲಾಗಿದೆ. ಬಳಿಕ ದೇಹವನ್ನು ಮೋರಿಗೆ ಎಸೆಯಲಾಗಿದೆ […]

ದೆಹಲಿ ಹಿಂಸಾಚಾರ : ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

Wednesday, February 26th, 2020
dehli

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು ಗಲಭೆ ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದೆಹಲಿಯ ಜಾಫ್ರಾಬಾದ್‌, ಸೀಲಂಪುರ್ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದು 160 ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೆಹಲಿಯ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಹಾಗೂ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರುವಲ್ಲಿ ದೆಹಲಿ ಸಿಎಂ ವಿಫಲರಾಗಿದ್ದಾರೆ ಎಂದು ಆರೋಪಿಸಿ […]

ದೆಹಲಿ ಹಿಂಸಾಚಾರದಲ್ಲಿ 76 ಮಂದಿಗೆ ಗಾಯ, ಸೆಕ್ಷನ್ 144 ಜಾರಿ

Tuesday, February 25th, 2020
dehali-himsachara

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ 76 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ದಿಲ್ಲಿಯ ಅತೀ ಸೂಕ್ಷ್ಮ ಪ್ರದೇಶಗಳಾದ ಜಾಫ್ರಾಬಾದ್, ಮೌಜ್ ಪುರ್, ಬಾಬರ್ ಪುರ್, ಗೋಕುಲ್ ಪುರಿ, ಜೋಹ್ರಿ ಎನ್ ಕ್ಷೇವ್ ಮ್ತು ಶಿವ ವಿಹಾರ್ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ವಿವರಿಸಿದೆ. ಅಮೆರಿಕ […]