ಉಳ್ಳಾಲ : ಫ್ಯಾಸಿಸ್ಟ್ ಶಕ್ತಿಗಳು ಆಯುಧ ಮುಖೇನ ಹತ್ಯಾಕಾಂಡವನ್ನು ನಡೆಸಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಿ ಬೇಕಾದರೂ ಇಂತಹ ಕೃತ್ಯ ನಡೆಯುವ ಸಂಭವ ಇದೆ. ಇದನ್ನು ವಿರೋಧಿಸುವತ್ತ ಜನ ಸಿದ್ಧರಾಗಿರಬೇಕು ಎಂದು ಸಂಯುಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದರು.
ಅವರು ಸಂಯುಕ್ತ ನಾಗರಿಕ ವೇದಿಕೆ ಕೆ.ಸಿ.ರೋಡ್ ಇದರ ವತಿಯಿಂದ ದೆಹಲಿಯಲ್ಲಿ ನಡೆದ ಹತ್ಯಾಕಾಂಡ ಮತ್ತು ಮುಸ್ಲಿಮರ ವಿರುದ್ದ ವ್ಯವಸ್ಥಿತವಾಗಿ ಫ್ಯಾಸಿಸ್ಟ್ ಶಕ್ತಿಗಳು ಮಾಡುತ್ತಿರುವ ಕ್ರೌರ್ಯ ಖಂಡಿಸಿ ಕೆ.ಸಿ. ರೋಡ್ ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆ ಹಾಗೂ ಮೌನ ಪ್ರಾರ್ಥನೆ ಯನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿಯದ್ದು ಫ್ಯಾಸಿಸ್ಟ್ ಶಕ್ತಿಗಳ ಪೂರ್ವನಿಯೋಜಿತ ಕೃತ್ಯ. ಫ್ಯಾಸಿಸ್ಟ್ ಶಕ್ತಿಗಳನ್ನು ಹಿಂದು ಮುಸ್ಲಿಮರೆಲ್ಲರೂ ಸೇರಿ ದೆಹಲಿಯಿಂದ ಓಡಿಸುವಲ್ಲಿ ಸಫಲರಾಗಿದ್ದಾರೆ. ಸಂವಿಧಾನ ಒಪ್ಪಿಕೊಂಡು ಇರುವ ಜನ ಇರುವವರೆಗೂ ಅಶಾಂತಿ ನಿರ್ಮಿಸಲು ಫ್ಯಾಸಿಸ್ಟರಿಂದ ಅಸಾಧ್ಯ. ಆಯುಧ ಮುಖೇನ ಕೊಲ್ಲುವ ಕೃತ್ಯ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಇದನ್ನು ವಿರೋಧಿಸುವತ್ತ ಸಿದ್ಧರಾಗಿರಬೇಕು ಎಂದರು.
ಈ ಸಂದರ್ಭ ದೆಹಲಿಯಲ್ಲಿ ಹತ್ಯೆಗೀಡಾದ ಅಮಾಯಕರಿಗೆ ಗೌರವಾರ್ಥವಾಗಿ ಮೂರು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನಡೆಸಲಾಯಿತು.
Click this button or press Ctrl+G to toggle between Kannada and English