ಮಂಗಳೂರು : ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾದಲ್ಲಿ 3 ದಿನಗಳ ಸಾಂಸ್ಕೃತಿಕ ಉತ್ಸವ ಆರ್ಕಿಹೋಲಿಕ್ಸ್ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ಶಿಲ್ಪಿ ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್ ಮತ್ತು ಸಿಸಿಬಿಎ ವಿನ್ಯಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಂಪ್ರಸಾದ್ ಅಕ್ಕಿಸೆತಿ ಇವರುಗಳು ಆಗಮಿಸಿದ್ದರು.
ಬೆಳಿಗ್ಗೆ ಉದ್ಘಾಟನಾ ಸಮಾರಂಭದ ನಂತರ ಮುಖ್ಯ ಅತಿಥಿಗಳು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವಾಸ್ತುಶಿಲ್ಪ ವಿಷಯದ ಬಗ್ಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಫರ್ದೆಗಳು ಜರುಗಿದವು. ಕೊನೆಯ ದಿನದ ಕಾರ್ಯಕ್ರಮವಾಗಿ ಕಾಲೇಜಿನ ವಾಸ್ತು ಶಿಲ್ಷ ವಿಭಾಗವು ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್ ಅವರ ಟೈಮ್ ಲೆಸ್ ಆರ್ಕಿಟೆಕ್ಚರ್ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಮಂಗಳೂರಿನ ಭಾರತ್ ಸಿನಿಮಾದಲ್ಲಿ ಅಯೋಜಿಸಿತ್ತು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು ಇದರ ಕುಲಾಧಿಪತಿಗಳಾದ ಸಿಎ. ಎ. ರಾಘವೇಂದ್ರ ರಾವ್ ಇವರು ವಹಿಸಿದ್ದರು. ಸಿಸಿಬಿಎ ವಿನ್ಯಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮ್ ಪ್ರಸಾದ್ ಅಕ್ಕಿಸೆತಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು ಇದರ ಉಪ ಕುಲಾಧಿಪತಿಗಳಾದ ಡಾ| ಶ್ರೀನಿವಾಸ್ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀನಿವಾಸ ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾಗಿರುವ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಎ. ಶ್ಯಾಮ್ ರಾವ್ ಪ್ರತಿಷ್ಠಾನ ಮಂಗಳೂರು ಇದರ
ಕಾರ್ಯದರ್ಶಿಯಾಗಿರುವ ಶ್ರೀಮತಿ ಮಿತ್ರಾ ಎಸ್. ರಾವ್ ಇವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಕಾಲೇಜಿನ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಂಗಳೂರಿನ ವಾಸ್ತುಶಿಲ್ಪಿಗಳು ಮತ್ತು ಅಧ್ಯಾಪಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ| ಶ್ರೀನಿವಾಸ ಮಯ್ಯ ಡಿ, ಪ್ರಾಂಶುಪಾಲರು, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ, ವಿಭಾಗದ ಡೀನ್ ಕುಮಾರಚಂದ್ರ, ವಿಭಾಗ ಮುಖ್ಯಸ್ಥ ವಾಸುದೇವ ಶೇಟ್, ವಿಭಾಗದ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
Click this button or press Ctrl+G to toggle between Kannada and English