‘ಬದಲಾದ ಉದ್ಯೋಗ ಪರ್ವ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಸಚಿವ ವಿ.ಸುನೀಲ್ ಕುಮಾರ್

Thursday, September 30th, 2021
Sunil Kumar

ಬೆಂಗಳೂರು  :   ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸೆ.30 ಗುರುವಾರದಂದು ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಬದಲಾದ ಉದ್ಯೋಗ ಪರ್ವ’ ವಿಚಾರ ಸಂಕಿರಣಕ್ಕೆ  ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 1984 ರಲ್ಲಿ ಬಂದಂತಹ ಡಾ.ಸರೋಜಿನಿ ಮಹಿಷಿ ವರದಿ ಆ ಹೊತ್ತಿನ ಕಾಲಘಟ್ಟದ ಅಗತ್ಯತೆಗಳಿಗೆ ಮಾನ್ಯತೆ ನೀಡಿದೆ‌‌. ನಂತರದ ಕಾಲಘಟ್ಟದಲ್ಲಿ ಹೊಸ ಹೊಸ ಕಂಪೆನಿಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿ ಕೊಡುವ ನಿಟ್ಟಿನಲ್ಲಿ […]

ವಿವಿ ಕಾಲೇಜಿನಲ್ಲಿ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ- ರಾಜ್ಯಮಟ್ಟದ ವಿಚಾರ ಸಂಕಿರಣ ಸಂಪನ್ನ

Wednesday, March 17th, 2021
UCM

ಮಂಗಳೂರು: ರತ್ನಾಕರವರ್ಣಿ ಕೇವಲ ಜೈನ ಕವಿಯಲ್ಲ, ಆತ ವಿಶ್ವಕವಿ, ಸರ್ವಮಾನ್ಯ. ಆತನ ಸಾಹಿತ್ಯದ ಅವಲೋಕನದ ಜೊತೆಗೆ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಎಸ್‌ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. […]

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾಸ್ತು ಶಿಲ್ಪಿ ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್‌ರಿಂದ ವಿಚಾರ ಸಂಕಿರಣ

Tuesday, March 3rd, 2020
Srinivas-Institute-of-Techn

ಮಂಗಳೂರು : ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾದಲ್ಲಿ 3 ದಿನಗಳ ಸಾಂಸ್ಕೃತಿಕ ಉತ್ಸವ ಆರ್ಕಿಹೋಲಿಕ್ಸ್ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ಶಿಲ್ಪಿ ಕ್ರಿಸ್ಟೋಫರ್ ಚಾರ್ಲ್ಸ್ ಬೆನ್ನಿಂಗರ್ ಮತ್ತು ಸಿಸಿಬಿಎ ವಿನ್ಯಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಂಪ್ರಸಾದ್ ಅಕ್ಕಿಸೆತಿ ಇವರುಗಳು ಆಗಮಿಸಿದ್ದರು. ಬೆಳಿಗ್ಗೆ ಉದ್ಘಾಟನಾ ಸಮಾರಂಭದ ನಂತರ ಮುಖ್ಯ ಅತಿಥಿಗಳು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವಾಸ್ತುಶಿಲ್ಪ ವಿಷಯದ ಬಗ್ಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ […]

ಕೊಡವ ಬುಡಕಟ್ಟು ಸ್ಥಾನಮಾನ ವಿಚಾರ ಸಂಕಿರಣ : ಸಂಘಟಿತ ಹೋರಾಟಕ್ಕೆ ಕುಪ್ಪೇಂದ್ರ ರೆಡ್ಡಿ, ಹರಿಪ್ರಸಾದ್ ಕರೆ

Monday, January 20th, 2020
CNC

ಮಡಿಕೇರಿ : ಸತತ ಪ್ರಯತ್ನ ಮತ್ತು ಸಂಘಟಿತ ಹೋರಾಟ ಮಾಡದೇ ಇರುವುದರಿಂದ ಸಂವಿಧಾನ ಬದ್ಧವಾಗಿ ದೊರಕಬೇಕಿದ್ದ ಬುಡಕಟ್ಟು ಸ್ಥಾನಮಾನದ ಹಕ್ಕಿನಿಂದ ಕೊಡವ ಸಮುದಾಯ ವಂಚಿತವಾಗಿದೆ. ಕಳೆದ 70 ವರ್ಷಗಳಿಂದ ಸುಮ್ಮನಿದ್ದಿರಿ, ಇನ್ನಾದರೂ ಹೋರಾಟಕ್ಕೆ ಮುಂದಾಗಿ ಎಂದು ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಕೊಡವರಿಗೆ ಕರೆ ನೀಡಿದರು. ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕೊಡವ ಬುಡಕಟ್ಟು ಸ್ಥಾನಮಾನದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಸಮುದಾಯದ […]

ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ

Tuesday, January 14th, 2020
peraje

ಮಡಿಕೇರಿ : ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್, ಮಡಿಕೇರಿ ಮತು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ ಪೆರಾಜೆ, ಇದರ ಜಂಟಿ ಆಶ್ರಯದಲ್ಲಿ ಗೇರು, ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವು ದಿನಾಂಕ 13.01.2020 ಸೋಮವಾರದಂದು, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಸಹಕಾರ ಸಧನದಲ್ಲಿ ಪೂರ್ವಾಹ್ನ 10.00 ಗಂಟೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ವಹಿಸಿದ್ದರು. ಪೆರಾಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ […]

ಮಡಿಕೇರಿಯಲ್ಲಿ ವಿಚಾರ ಸಂಕಿರಣ : ಬಡವರ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆದಿಲ್ಲ; ಬಿ.ಗೋಪಾಲ್ ವಿಷಾದ

Monday, December 2nd, 2019
madikeri

ಮಡಿಕೇರಿ : ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರು ಪ್ರಜ್ಞಾವಂತ ಸಮಾಜ ಬಡಜನರು ಹಾಗೂ ದುರ್ಬಲರಾಗಿರುವ ದಲಿತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸದೆ ಇರುವುದೇ ಈ ವರ್ಗಗಳ ಬದುಕು ಇಂದಿಗೂ ಹೀನಾಯವಾಗಿರಲು ಕಾರಣವೆಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಸ್ವತಂತ್ರ ಭಾರತದಲ್ಲಿ ಬಹುಜನರು ಅವಲಂಬಿತರು ಏಕೆ? ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಡಜನರು, ಹಿಂದುಳಿದ ವರ್ಗದವರು, […]

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯ ಮೂಲಕ ಯುವಜನರನ್ನು ಸಜ್ಜನರನ್ನಾಗಿ ಪರಿವರ್ತಿಸಲು ಸಾಧ್ಯ :ಎ.ಎಂ.ಪ್ರಸಾದ್

Friday, March 15th, 2013
National level con St Agnes

ಮಂಗಳೂರು : ನಗರದ ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಹಾಗೂ ಮಂಗಳೂರಿನ ಸಮಗ್ರ ಯೋಗ ಸತ್ಸಂಗದ ಜಂಟಿ ಆಯೋಜಕತ್ವದಲ್ಲಿ ಗುರುವಾರ ಆಗ್ನೆಸ್ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಕ್ರೈಮ್ ಮತ್ತು ಟೆಕ್ನಿಕಲ್ ಸರ್ವಿಸ್‌ನ ಅಡಿಷನಲ್ ಡಿಜಿಪಿ ಅಶಿತ್ ಮೋಹನ್ ಪ್ರಸಾದ್ ನೆರವೇರಿಸಿದರು. ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದರಲ್ಲಿ ಹೆಚ್ಚಾಗಿ ೧೮ ವರ್ಷ ಒಳಗಿನ ಯುವಕರು ಇದ್ದಾರೆ. ಇದಕ್ಕೆ ಪ್ರಮುಖವಾಗಿ […]