ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯ ಮೂಲಕ ಯುವಜನರನ್ನು ಸಜ್ಜನರನ್ನಾಗಿ ಪರಿವರ್ತಿಸಲು ಸಾಧ್ಯ :ಎ.ಎಂ.ಪ್ರಸಾದ್

12:01 PM, Friday, March 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

National level con St Agnesಮಂಗಳೂರು : ನಗರದ ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಹಾಗೂ ಮಂಗಳೂರಿನ ಸಮಗ್ರ ಯೋಗ ಸತ್ಸಂಗದ ಜಂಟಿ
ಆಯೋಜಕತ್ವದಲ್ಲಿ ಗುರುವಾರ ಆಗ್ನೆಸ್ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಕ್ರೈಮ್ ಮತ್ತು ಟೆಕ್ನಿಕಲ್ ಸರ್ವಿಸ್‌ನ ಅಡಿಷನಲ್ ಡಿಜಿಪಿ ಅಶಿತ್ ಮೋಹನ್ ಪ್ರಸಾದ್ ನೆರವೇರಿಸಿದರು.

ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದರಲ್ಲಿ ಹೆಚ್ಚಾಗಿ ೧೮ ವರ್ಷ ಒಳಗಿನ ಯುವಕರು ಇದ್ದಾರೆ. ಇದಕ್ಕೆ ಪ್ರಮುಖವಾಗಿ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆ ಸಮರ್ಪಕವಾಗಿ ಅಳವಡಿಕೆ ಯಾಗದೆ ಇರುವುದು.  ಆದರಿಂದ ನೈತಿಕತೆಯನ್ನು ಬೋಧಿಸುವ ಮುಖಾಂತರ ಯುವಜನರನ್ನು ಸಜ್ಜನರನ್ನಾಗಿ ಮಾಡಿ ಅಪರಾಧ ಚಟುವಟಿಕೆಗಳಿಂದ ದೂರ ಉಳಿಯುವಂತೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ,  ಡಾ.ವಿ.ಪ್ರೇಮಾನಂದ, ವಿ.ಎಲ್.ರೆಗೋ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English