ಕೊರೋನಾ ಭೀತಿ : ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧಾರ; ಪ್ರಧಾನಿ ಮೋದಿ

2:43 PM, Wednesday, March 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

modi

ನವದೆಹಲಿ : ಪ್ರಪಂಚವನ್ನು ಬೆಚ್ಚಿ ಬೀಳಿಸಿರುವ ಮಾರಕ ಸೋಂಕು ಕೊರೋನಾ ಸೋಂಕು ಎಲ್ಲರನ್ನು ಭಯಭೀತರನ್ನಾಗಿ ಮಾಡಿದೆ. ದೇಶದಲ್ಲಿಯೂ ದಿನೇ ದಿನೇ ಈ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಈಗಾಗಲೇ 6 ಜನರು ಈ ಸೋಂಕಿಗೆ ಬಲಿಯಾಗಿದ್ದು, ಜೈಪುರ ಪ್ರವಾಸಕ್ಕೆ ಒಂದ 15 ಜನರಲ್ಲಿ ಕೂಡ ಈ ಸೋಂಕು ದೃಢಪಟ್ಟಿದೆ. ಈ ಭಯ ಈಗ ಪ್ರಧಾನಿ ಮೋದಿಯನ್ನು ಆವರಿಸಿದ್ದು, ಈ ಹಿನ್ನೆಲೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗದಿರಲು ಅವರು ನಿರ್ಧಾರಿಸಿದ್ದಾರೆ.

ಹೋಳಿ ಹಬ್ಬದ ಸಂಭ್ರದಲ್ಲಿ ಭಾಗಿಯಾಗಲು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದರು. ಆದರೆ, ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜನಸಂದಣಿ ಪ್ರದೇಶದಲ್ಲಿ ಭಾಗಿಯಾಗುವುದು ಅಷ್ಟು ಸುರಕ್ಷಿತವಲ್ಲ ಎಂದು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಹೆಚ್ಚು ಜನ ಸೇರುವುದನ್ನು ಕಡಿಮೆಗೊಳಿಸಬೇಕೆಂದು ವಿಶ್ವಾದ್ಯಂತ ತಜ್ಞರು ಹೇಳುತ್ತಿದ್ಧಾರೆ. ಹಾಗಾಗಿ ಈ ವರ್ಷ ನಾನು ಸಾರ್ವಜನಿಕರೊಂದಿಗೆ ಹೋಳಿ ಹಬ್ಬ ಆಚರಿಸುತ್ತಿಲ್ಲ ಎಂದಿದ್ದಾರೆ.ಉತ್ತರ ಭಾರತೀಯರಿಗೆ ಹೋಳಿ ಹಬ್ಬ ಬಹುದೊಡ್ಡ ಹಬ್ಬವಾಗಿದ್ದು, ಒಟ್ಟಾಗಿ ಕಲೆತು ಬಣ್ಣದೋಕುಳಿಯಾಡುತ್ತಾರೆ. ಪ್ರಧಾನಿ ಮೋದಿ ಕೂಡ ಈ ರೀತಿ ಸಾರ್ವಜನಿಕವಾಗಿ ಈ ಹಿಂದೆ ಹೋಳಿ ಹಬ್ಬ ಆಚರಿಸಿದ್ದರು.

ಕೊರೋನಾ ವೈರಸ್ಗೆ ವಿಶ್ವದಲ್ಲಿ 3000 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಭಾರತದಲ್ಲಿ ಇದರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಈ ಬಗ್ಗೆ ಸುರಕ್ಷತಾ ಕ್ರಮಕ್ಕೆ ಮುಂದಾಗುವುದು ಒಳಿತು ಎಂಬ ಮಾತು ಕೇಳಿಬಂದಿದೆ. ಇನ್ನು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಹಲವು ಸಲಹೆಗಳನ್ನು ನೀಡಿ ಪ್ರಧಾನಿ ಟ್ವೀಟ್ ಕೂಡ ಮಾಡಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English