ಮಂಗಳೂರು : ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್05, ಗುರುವಾರ ಕೋಡಿಕಲ್ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಂಡಿಕಾಯಾಗ ನಡೆಯಿತು. ಮೊಗವೀರ ಸಮಾಜದ ಬಂಧುಗಳು ಹಾಗೂ ಗ್ರಾಮದ ಭಕ್ತಾದಿಗಳು ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪುನೀತರಾದರು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಲ್ಯಾಂಡ್ ಲಿಂಕ್ಸ್ ಮಾಲಕರಾದ ಪ್ರದೀಪ್ ಪಾಲೇಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶ್ರೀ ಮಾರಿಯಮ್ಮ ದೇವರು ಸರ್ವ ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸಿ, ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸಿದರು.
ಕಾಂಚನ್ ಹುಂಡೈಮಾಲಕರಾದ ಪ್ರಸಾದ ರಾಜ್ ಕಾಂಚನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಥಿತಿಗಳಾಗಿ ಮೋಹನ್ ಬೆಂಗ್ರೆ, ಗಣೇಶ್ ಕುಲಾಲ್, ಲೀಲಾಕ್ಷ ಕರ್ಕೇರ, ಯಶವಂತ ಪಿ.ಮೆಂಡನ್, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಮಧ್ಯಾಹ್ನ ಸರ್ವಾಲಂಕಾರ ಪೂಜೆಯೊಂದಿಗೆ ಮಾರಿಯಮ್ಮ ದೇವರಿಗೆ ಮಹಾಪೂಜೆ ನಡೆಯಿತು. ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆಯೊಂದಿಗೆ ಮಹಾಪೂಜೆ ನಡೆಯಲಿದೆ.
ಮಾರ್ಚ್ 9 ರಂದು ಬೆಳಿಗ್ಗೆ 6 ರಿಂದ ಶ್ರೀ ಮಾರಿಯಮ್ಮ ದೇವರಿಗೆ ಪ್ರತಿಷ್ಟಾ ವರ್ಧಂತಿ ಮಹೋತ್ಸವ, ಕಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ 9ಕ್ಕೆ ಹಾಲು ಉಕ್ಕಿಸುವ ಪೂಜೆ, ರಾತ್ರಿ 11.30ಕ್ಕೆ ಮಹಾಪೂಜೆ ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ತಾನ, ಕಂಚಿಲ್ ಸೇವೆ ಹಾಗೂ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ.
ಮಾರ್ಚ್ 10 ರಂದು ಬೆಳಿಗ್ಗೆ 7 ಕ್ಕೆ ನಿತ್ಯ ಪೂಜೆ ಮಧ್ಯಾಹ್ನ ಮಹಾಪೂಜೆ, ಸಂಜೆ ಮಹಾಪೂಜೆ ಹೊರಗಿನ ದರ್ಶನ ಬಲಿ, ಕಟ್ಟಬಲಿ, ಮಡಸ್ತಾನ, ಕಂಚಿಲ್ ಸೇವೆ ಹಾಗೂ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ. ರಾತ್ರಿ 8ರಿಂದ ಸುಡುಮದ್ದು ಪ್ರದರ್ಶನ 11 ರಿಂದ ನೈವೇದ್ಯಬಲಿ, ಮಹಾರಾಶಿ ಪೂಜೆ, ಬೆಳಿಗ್ಗೆ 2.30 ರಿಂದ ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ತಾನ, ಕಂಚಿಲ್ ಸೇವೆ ಹಾಗೂ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ.
ಮಾರ್ಚ್ 8 ರಿಂದ 48 ದಿನಗಳ ಕಾಲ ಸಂಜೆ 4.30ರಿಂದ 5.30 ರ ವರೆಗೆ ಮಹಿಳೆಯರಿಂದ ‘ಲಲಿತ ಸಹಸ್ರನಾಮ’ ನಡೆಯಲಿದೆ.
ಮಾರ್ಚ್ 14 ರಂದು ರಾತ್ರಿ 8 ರಿಂದ ಮಲರಾಯ ಧೂಮಾವತಿ ದೈವಗಳ ವೇಮೋತ್ಸವ ನಡೆಯಲಿದೆ.
Click this button or press Ctrl+G to toggle between Kannada and English