ಮಂಗಳೂರು : ದಿನಾಂಕ 8 ಮಾರ್ಚ್, 2020 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೌರ ಸಮುದಾಯ ಸಮಿತಿ ಆಯೋಜಿಸಿದ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ಯಲ್ಲಿ ದೇಶ ವಿರೋಧಿ ಕೃತ್ಯ ಮಾಡುವ ಕನ್ಹಯ್ಯ ಕುಮಾರ್ ಭಾಗವಹಿಸಿತ್ತಿದ್ದಾರೆ. ಕನ್ನಯ್ಯ ಕುಮಾರ ಇತ್ತೀಚಿಗೆ ದೆಹಲಿ, ಬಿಹಾರದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಪ್ರತಿಭಟನೆಯಲ್ಲಿ ಹಿಂದೂಗಳ ವಿರುದ್ಧ ಅನೇಕ ಪ್ರಚೋದನೆ ಭಾಷಣ ನೀಡಿ, ದಂಗೆ ಮಾಡಲು ಕಾರಣರಾಗಿದ್ದಾರೆ.
ಈ ಹಿಂದೆ ಜೆಎನ್ ಯು ವಿಶ್ವವಿದ್ಯಾಲಯ ಆವರಣದಲ್ಲಿ ಭಯೋತ್ಪಾದಕ ಅಪ್ಜಲ್ ಗುರು ಕಾರ್ಯಕ್ರಮ ಆಯೋಜನೆ ಮಾಡಿ ಭಾರತ್ ತೆರೆ ತುಕಡೆ ಕರೆಂಗೆ ದೇಶ ವಿರೋಧಿ ಘೋಷಣೆಯನ್ನು ಕೂಗಿದ್ದರು. ಇವರ ವಿರುದ್ಧ ದೆಹಲಿ ಸರ್ಕಾರ ದೇಶದ್ರೋಹದ ಪ್ರಕರಣ ಧಾಖಲು ಮಾಡಿದೆ. ಇದಲ್ಲದೆ ಇತ್ತೀಚಿಗೆ ಸುಪ್ರೀಂಕೋರ್ಟ್ ಸಹ ಕನ್ಹಯ್ಯ ಕುಮಾರ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲು ಆದೇಶ ನೀಡಿದೆ.
ಇಂತಹ ವಿವಾದಾತ್ಮಕ, ದೇಶದ್ರೋಹದ ಆರೋಪ ಇರುವ ವ್ಯಕ್ತಿಯನ್ನು ಅತಿಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಅವಕಾಶ ನೀಡುವುದು ಎಷ್ಟು ಸರಿ?
ಈಗಾಗಲೇ ಮಂಗಳೂರಿನಲ್ಲಿ ಕಳೆದ ಬಾರಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ಯಲ್ಲಿ ದಂಗೆಯನ್ನು ನಿರ್ಮಾಣ ಮಾಡಿದ್ದರು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟು ಮಾಡಿದ್ದರು, ಪೋಲಿಸರ ಮೇಲೆಕಲ್ಲು ತೂರಾಟ ಮಾಡಿದರು.
ಅದಕ್ಕಾಗಿ ಪ್ರಚೋದಾನ್ಮಕ ಹೇಳಿಕೆಯನ್ನು ನೀಡುವ, ದಂಗೆಗೆ ಪ್ರಚೋದನೆ ನೀಡುವ ಕನ್ಹಯ್ಯ ಕುಮಾರ್ ನಿಗೆ ಮಂಗಳೂರು ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಅನುಮತಿ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಅಗ್ರಹಿಸುತ್ತದೆ. ಒಂದೊಮ್ಮೆ ಅವರಿಗೆ ಅವಕಾಶ ನೀಡಿದರೆ, ಅದರಿಂದ ಉದ್ಭವಿಸುವ ಕಾನೂನು ಸುವ್ಯವಸ್ಥೆಯ ಸಮಸ್ಯೆಗೆ ಪೋಲಿಸರೆ ಜವಾಬ್ದಾರರಾಗುವುರು.
ಈ ವಿಷಯದ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ – ತಹಸೀಲ್ದಾರ್ ಶ್ರೀ ಗೋಪಾಲ ಕೃಷ್ಣ ಇವರ ಮೂಲಕ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಇವರಿಗೆ ಪೊಲೀಸ್ ಉಪಯುಕ್ತರಾದ (ಕಾನೂನು ಸುವ್ಯವಸ್ಥೆ ) ಶ್ರೀ ಲಕ್ಷ್ಮೀ ಗಣೇಶ್ ಇವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ ಪಡಿಯಾರ, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಸೌ.ರೂಪ,
ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಪವಿತ್ರನ, ಎಬಿವಿಪಿಯ ಶ್ರೀ ಆಗ್ನೇಯ, ಶ್ರೀ ಸತೀಶ್, ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ ಮಧುಸೂದನ ಅಯ್ಯಾರ್, ಸಾಮಾಜಿಕ ಕಾರ್ಯ ಮಾಡುವ ಸೌ.ಸುನಂದ, ಶ್ರೀ ದಯಾನಂದ ವಳಚಿಲ್, ಶ್ರೀ ಶಿವಪ್ರಸಾದ್ , ಶ್ರೀ ವಿಶ್ವನಾಥ್, ಶ್ರೀ ಶಶಿಧರ್ ಬಾಳಿಗ, ಶ್ರೀ ಅಜಿತ್, ಶ್ರೀ ಕಿರಣ್ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ನಗರದ ಸಮನ್ವಯಕರಾದ ಶ್ರೀ ಹರ್ಷವರ್ಧನ್ ಶೆಟ್ಟಿ, ಉಪೇಂದ್ರ ಆಚಾರ್ಯ, ಸೌ. ಲೀಲಾವತಿ , ಹಿಂದೂ ಜನಜಾಗೃತಿ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
March 6th, 2020 at 14:54:33
It’s really true for this . Do not allowed to kannayya in this situation .first mistake is born in hidhu . Very arrogent guy and also he his big cheeter .