ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸಂಗೀತ ಭಾರತಿ ಉತ್ಸವ’ 2020

9:29 AM, Friday, March 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bharathi-rath

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರು ಪ್ರಸ್ತುತ ಪಡಿಸುವಇದೇ ಬರುವ ಮಾರ್ಚ್ 07 ಮತ್ತು 08 ರಂದುಈ ವರ್ಷದ’ಸಂಗೀತ ಭಾರತಿ ಉತ್ಸವ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ.

07 ಕಾರ್ಯಕ್ರಮಗಳು ಈ ಎರಡು ದಿನಗಳ ಸಂಗೀತೋತ್ಸವದಲ್ಲಿ ನಡೆಯಲಿದ್ದು ಸಂಗೀತಾಸಕ್ತರಿಗೆ ಇದೊಂದು ಸಂಗೀತದರಸದೌತಣ.

ಮಾರ್ಚ್07ರಶನಿವಾರದಂದು ಸಂಜೆ 6 ರಿಂದ ನಮ್ಮ ದೇಶದ ಪ್ರಖ್ಯಾತ ಕಲಾವಿದರಾದ ಮುಂಬೈನ ಶ್ರೀ ಮಾನಸ್‌ ಕುಮಾರ್‌ ಇವರಿಂದ ಹಿಂದೂಸ್ತಾನೀ ವಯೋಲಿನ್ ವಾದನ ಮತ್ತು ತದನಂತರ ಉತ್ಕೃಷ್ಟಮಟ್ಟದ ಗಾಯಕರಾದ ಹುಬ್ಬಳ್ಳಿಯ ಶ್ರೀ ಜಯತೀರ್ಥ ಮೇವುಂಡಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ.

ತಬ್ಲಾದಲ್ಲಿ ಬೆಂಗಳೂರಿನ ಶ್ರೀರಾಜೇಂದ್ರ ನಾಕೋಡ್, ಹಾರ್ಮೋನಿಯಂನಲ್ಲಿ ಬೆಂಗಳೂರಿನ ಶ್ರೀ ವ್ಯಾಸಮೂರ್ತಿ ಕಟ್ಟಿಯವರು ಸಾಥ್ ನೀಡಲಿದ್ದಾರೆ.
ಮಾರ್ಚ್08ರ ಭಾನುವಾರದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ01ರವರೆಗೆ ಧಾರವಾಡದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ|| ವೆಂಕಟೇಶ್‌ಕುಮಾರ್‌ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತಗಾಯನಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2ರಿಂದ3.30ರವರೆಗೆ ಮೃದಂಗ ಮತ್ತು ತಬ್ಲಾಜುಗಲ್ ಬಂಧಿ ಕಾರ್ಯಕ್ರಮವನ್ನು ಚೆನ್ನೈನ ವಿದ್ವಾನ್ ಪತ್ರಿ ಸತೀಶ್‌ ಕುಮಾರ್ ಮತ್ತು ಮುಂಬೈನ ಶ್ರೀ ಸತ್ಯಜಿತ್‌ ತಲ್‌ವಾಲ್‌ಕರ್‌ ಅವರು ನಡೆಸಿಕೊಡಲಿದ್ದಾರೆ.

3.45 ರಿಂದ5ರವರೆಗೆ ಪುಣೆಯ ವಿದುಷಿ ಸಾನಿಯಾಪಟಾನ್‌ಕರ್‌ ಅವರು ಶಾಸ್ತ್ರೀಯ ಗಾಯನ ನಡೆಸಿಕೊಡಲಿದ್ದಾರೆ.ಸಂಜೆ5.15ರಿಂದ 6.45ರವರೆಗೆ ಮಂಗಳೂರಿನ ಉಸ್ತಾದ್‌ ರಫೀಕ್‌ಖಾನ್‌ ಅವರಿಂದ ಸಿತಾರ್ ವಾದನ ಹಾಗೂ ಸಂಜೆ 7ರಿಂದ ಚೆನ್ನೈನ ವಿದ್ವಾನ್ ಶಶಾಂಕ್‌ ಸುಬ್ರಹ್ಮಣ್ಯಂ ಇವರಿಂದ ಕರ್ನಾಟಕೀ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ.

ಈ ದಿನದ ಎರಡು ಗಾಯನ ಕಾರ್ಯಕ್ರಮಗಳಿಗೂ ತಬ್ಲಾದಲ್ಲಿ ಬೆಂಗಳೂರಿನ ಶ್ರೀ ಕೇಶವ ಜೋಶಿ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ನರೇಂದ್ರಎಲ್.ನಾಯಕ್‌ರವರು ಸಹಕಾರ ನೀಡಲಿದ್ದಾರೆ.

ಎರಡು ದಿನಗಳ ಈ ಸಂಗೀತೋತ್ಸವದ ಮೊದಲ ದಿನದ ಮುಖ್ಯ ಪ್ರಾಯೋಜಕರಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಎರಡನೇ ದಿನದ ಮುಖ್ಯ ಪ್ರಾಯೋಜಕರಾಗಿ ಕರ್ಣಾಟಕ ಬ್ಯಾಂಕ್‌ ಸಹಕರಿಸಲಿದ್ದಾರೆ. ಸಹ ಪ್ರಾಯೋಜಕರಾಗಿ ಐಡಿಯಲ್‌ ಐಸ್‌ಕ್ರೀಮ್, ಕಾರ್ಪೋರೇಶನ್ ಬ್ಯಾಂಕ್, ನ್ಯೂ ಮಂಗಳೂರು ಪೋರ್ಟ್‌ಟ್ರಸ್ಟ್, ಕೆನರಾ ಬ್ಯಾಂಕ್, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ, ಎಕ್ಸಿಸ್ ಬ್ಯಾಂಕ್, ಎಂಸಿಎಫ್, ಎನ್‌ಕೆಜಿಎಸ್‌ಬಿ ಬ್ಯಾಂಕ್ ಹಾಗೂ ಎಸ್‌ವಿಸಿ ಬ್ಯಾಂಕ್‌ ಸಹಕರಿಸಲಿದ್ದಾರೆ.

’ಸಂಗೀತ ಭಾರತಿ ಉತ್ಸವ’ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಸಂಗೀತದರಸದೌತಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರಎಲ್. ನಾಯಕ್‌ರವರು ಕೋರಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English