ರಾಜ್ಯದಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿಲ್ಲ; ಭಯ ಪಡುವುದು ಬೇಡ : ಶಿಕ್ಷಣ ಸಚಿವ ಡಾ.ಸುಧಾಕರ್

2:34 PM, Saturday, March 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

sudhakar

ಮೈಸೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾಗಿಲ್ಲ. ಯಾರು ಕೂಡ ಭಯ ಪಡುವುದು ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

ಮೈಸೂರಿನಲ್ಲಿ ಸಚಿವ ಡಾ. ಸುಧಾಕರ್‌ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊರೊನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ವ್ಯಾಪ್ತಿಯವರೆಗೂ ಎಲ್ಲ ಸ್ಥಳಗಳಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ವಿಶೇಷವಾಗಿ ನಮ್ಮ ರಾಜ್ಯ ಸರಕಾರದಿಂದ ಟಾಸ್ಕ್ ಫೋರ್ಸ್‌ ರಚಿಸಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.

ನಮ್ಮ ಸರಕಾರ ಅನುಸರಿಸುತ್ತಿರುವ ವಿಶೇಷ ಮುಂಜಾಗ್ರತಾ ಕ್ರಮದಿಂದಾಗಿ ಯಾವುದೇ ಕೊರೋನಾ ಬಂದಿಲ್ಲ ಎಂದರು.

ಕೊರೊನಾ ಹಿನ್ನೆಲೆ ರಾಜ್ಯದ ಕಾರ್ಪೋರೇಟ್ ಹಾಗೂ ಐಟಿ ಕಂಪನಿಯಲ್ಲಿ ಬಯೋಮೆಟ್ರಿಕ್ ಲಾಗ್‌ ಇನ್ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಸರಕಾರಿ ಕಚೇರಿಗಳಲ್ಲೂ ಬಯೋಮೆಟ್ರಿಕ್ ಲಾಗ್ಇನ್ ನಿಲ್ಲಿಸುವಂತೆ ಸದ್ಯದಲ್ಲೇ ಆದೇಶ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ಕೊರೊನಾ ಪತ್ತೆಗಾಗಿ ಹೊಸ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿ ಕೊಡುತ್ತಿದ್ದೇವೆ ಎಂದರು.

ಬಜೆಟ್‌ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ರಾಜ್ಯ ಬಜೆಟ್ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ. ದೇಶದಲ್ಲಿ ಅದರಲ್ಲೂ ರಾಜ್ಯದಲ್ಲಿ ಆರ್ಥಿಕ ಹಿಂಜರಿತದ ನಡುವೆಯೇ ಉತ್ತಮ ಬಜೆಟ್ ನೀಡಿದ್ದಾರೆ. ಎಲ್ಲ ಭಾಗಗಳಿಗೂ ಅವಶ್ಯಕತೆಗೆ ತಕ್ಕ ಅನುದಾನ ನೀಡಿದ್ದಾರೆ. ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಿದೆ ಎಂದು ಸಚಿವ ಡಾ ಸುಧಾಕರ್‌ ತಿಳಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English