ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು ಆಘಾತಕಾರಿ : ಸಿಎಂ ಯಡಿಯೂರಪ್ಪ ವಿಷಾದ

1:36 PM, Friday, March 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

bsy

ಬೆಂಗಳೂರು : ಕೊರೋನಾ ಸೋಂಕಿನಿಂದ ಗುರುವಾರ ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಮೃತಪಟ್ಟಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾಧ ವ್ಯಕ್ತಪಡಿಸಿದ್ದಾರೆ.

ಇಡೀ ವಿಶ್ವಕ್ಕೆ ಇಂದು ಬೆದರಿಕೆ ಒಡ್ಡಿರುವ ಕೊರೋನಾ ಭಾರತದಕ್ಕೂ ತನ್ನ ಕಬಂದಬಾಹುವನ್ನು ವಿಸ್ತರಿಸಿದೆ. ದೇಶದಲ್ಲಿ ಈವರೆಗೆ 75 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲೂ 6 ಜನರಿಗೆ ಈ ಸೋಂಕು ತಗುಲಿದೆ. ಈ ಪೈಕಿ ಗುರುವಾರ ಕಲಬುರ್ಗಿಯ ವ್ಯಕ್ತಿ ನಿನ್ನೆ ಮೃತರಾಗಿದ್ದರು.

ಈ ಕುರಿತು ಇಂದು ವಿಧಾನಮಂಡಲ ಕಲಾಪದಲ್ಲಿ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, “ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು ಆಘಾತಕಾರಿ. ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಓರ್ವ ಮೃತಪಟ್ಟಿದ್ದಾರೆ. ಹೀಗಾಗಿ ಮೃತನು ಯಾವ ವಿಮಾನದಲ್ಲಿ ಪ್ರಯಾಣ ಮಾಡಿದ, ಅವನ ಅಕ್ಕಪಕ್ಕದಲ್ಲಿ ಯಾರು ಕುಳಿತಿದ್ದರು ಅನ್ನೋದರ ಬಗ್ಗೆ ಕೇಂದ್ರ ಮಾಹಿತಿ ಪಡೆಯುತ್ತಿದೆ. ಮೃತನ ಸಂಬಂಧಿಕರ ಒಂದೆಡೆ ಇರಿಸಲಾಗಿದೆ.

ಇನ್ನೂ ಕಲಬುರಗಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದರಿಂದ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ, ಎಚ್ಚರಿಕೆಯಿಂದಿರುವುದು ಒಳಿತು. ಅಲ್ಲದೆ, ಜನ ಗುಂಪುಗಳಿಂದ ದೂರ ಉಳಿಯುವುದು ಒಳ್ಳೆಯದು ಇದೇ ಕಾರಣಕ್ಕೆ ಗುಲ್ಬರ್ಗ ಶರಣ ಬಸವೇಶ್ವರ ಜಾತ್ರೆಯನ್ನು ರದ್ದು ಮಾಡಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English