ಮಾರ್ಚ್ 22 ರ ‘ಜನತಾ ಕರ್ಫ್ಯೂ’ಗೆ ಎಲ್ಲಾ ನಾಗರಿಕರು ಬೆಂಬಲಿಸಬೇಕು :ಹಿಂದೂ ಜನಜಾಗೃತಿ ಸಮಿತಿ

7:45 PM, Saturday, March 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

hjjs ಮಂಗಳೂರು :  ದಕ್ಷಿಣ ಕನ್ನಡ – ಮಾನ್ಯ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರು ಕೋವಿಡ್-19 (ಕೊರೋನಾ ೧೯ ರೋಗಾಣು) ವಿರುದ್ಧ ಹೋರಾಡಲು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಈ ಕರೆಗೆ ಬೆಂಬಲಿಸಿ ಇಡೀ ಜಗತ್ತಿನಾದ್ಯಂತ ಇದೇ ಮೊದಲಬಾರಿ ಜನತೆಯು ರಾಷ್ಟ್ರಹಿತಕ್ಕಾಗಿ ತೆಗೆದುಕೊಂಡಿರುವ ಬಂದ್ ಆಗಿರಬಹುದು. ಈ ಉಪಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ನಾಗರಿಕರ ರಾಷ್ಟ್ರಕರ್ತವ್ಯವಾಗಿದೆ. ಕೊರೋನಾದಂತಹ ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಜನಜಾಗೃತಿಯನ್ನು ಮಾಡಲು ಹಿಂದೂ ಜನಜಾಗೃತಿ ಸಮಿತಿಯೂ ಈ ಉಪಕ್ರಮದಲ್ಲಿ ಪಾಲ್ಗೊಂಡಿದೆ. ಮಾರ್ಚ್ 21 ರಂದು ಸಮಿತಿಯ ಕಾರ್ಯಕರ್ತರು ದೇಶದಾದ್ಯಂತ ಪ್ರಬೋಧನೆಯನ್ನು ಮಾಡಿದ್ದಾರೆ. ಇದರಲ್ಲಿ ಮಂಗಳೂರು ನಲ್ಲಿ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ ಅಸುಪಾಸಿನಲ್ಲಿ ಹಾಗೂ ಜ್ಯೋತಿ ಸರ್ಕಲ್ ನ ಆಸುಪಾಸಿನಲ್ಲಿ ಅದೇ ರೀತಿ ಪುತ್ತೂರಿನ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ , ಬೆಳ್ತಗಂಡಿ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ ಹತ್ತಿರವೂ ಸಹ ಸಮಿತಿಯ ಕಾರ್ಯಕರ್ತರು ಕೈಯಲ್ಲಿ ಪ್ರಬೋಧನಾ ಫಲಕವನ್ನು ಹಿಡಿದು ನಿಂತಿದ್ದರು. ಈ ಮೂಲಕ ನಾಗರಿಕರಿಗೆ ‘ಕರೋನಾ 19’ ರೋಗಾಣು ವಿರುದ್ಧ ಹೋರಾಡಲು ಸರಕಾರ ಹಾಗೂ ಅದಕ್ಕೆ ಸಂಬಂಧಪಟ್ಟ ಖಾತೆಯು ಹೇಳಿದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅದೇ ರೀತಿ ಸಂಘಟಿತವಾಗಿ ಈ ಮಹಾಮಾರಿಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿರಬೇಕು ಎಂದು ಕರೆ ನೀಡಲಾಯಿತು.

ಈ ಪ್ರಬೋಧನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರೊಂದಿಗೆ ಧರ್ಮಪ್ರೆಮಿಗಳು ಪಾಲ್ಗೊಂಡಿದ್ದರು. ಪ್ರಬೋಧನೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕುವುದು, ‘ಸ್ಯಾನಿಟೈಝರ’ನ ಉಪಯೋಗಿಸುವುದು ಇದರೊಂದಿಗೆ ಸರಕಾರವು ನೀಡಿದ ಎಲ್ಲ ಉಪಾಯೋಜನೆಗಳ ಪಾಲನೆಯನ್ನು ಮಾಡಲಾಯಿತು.

hjjs ಈ ಸಮಯದಲ್ಲಿ ಪ್ರಬೋಧನಾಕಾರರು ‘1 ದಿನ ದೇಶದ ಆರೋಗ್ಯಕ್ಕಾಗಿ  – ಪ್ರಧಾನಮಂತ್ರಿಗಳ ಕರೆಗನುಸಾರ ಮಾರ್ಚ್ 22 ರಂದು ಮನೆಯಲ್ಲೇ ಇರಿ !’, ‘ಮಾರ್ಚ್ 22 ರಂದು ಖರೀದಿ ಬೇಡ, ಬೇಡ ಪ್ರವಾಸ, ಆರೋಗ್ಯ ರಕ್ಷಣೆಗೆ ಮನೆಯಲ್ಲೇ ಒಂದು ದಿನದ ವಾಸ ’, ‘ಮಾರ್ಚ್ 22 ರಂದು ‘ಜನತಾ ಕರ್ಫ್ಯೂ’ ಪಾಲಿಸಿ, ರಾಷ್ಟ್ರಭಕ್ತಿ ತೋರಿಸಿ ! ಮನೆಯಲ್ಲಿರಿ, ಸುರಕ್ಷಿತವಾಗಿರಿ !’, “ಕೋವಿಡ್-19’ ಹಾವಳಿ ತಡೆಯಲು ಮಾರ್ಚ್ 22 ರಂದು ಮನೆಯಲ್ಲೇ ಇದ್ದು ಸರಕಾರದ ಆದೇಶವನ್ನು ಪಾಲಿಸುವುದು ರಾಷ್ಟ್ರಕರ್ತವ್ಯವೇ !’, ‘ಕೊರೋನಾದ ನಿರ್ಮೂಲನೆ ಮಾಡೋಣ ‘ಜನತಾಕರ್ಫ್ಯೂ’ ಪಾಲಿಸಿ ಆರೋಗ್ಯವನ್ನು ರಕ್ಷಿಸೋಣ !! ’, ‘ಮಾರ್ಚ್ 22 ರಂದು ಬೆಳಗ್ಗೆ7 ರಿಂದ ರಾತ್ರಿ 9 ರ ವರೆಗೆ ಮನೆಯಿಂದ ಹೊರಗೆ ಹೋಗದಿರೋಣ !!’ ಈ ರೀತಿಯ ಫಲಕಗಳನ್ನು ಕೈಯಲ್ಲಿ ಹಿಡಿದಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English