ನೈಟ್ ಕರ್ಫ್ಯೂ ಮುಂದುವರಿಸುವ ಬಗ್ಗೆ ಭಾನುವಾರ ನಿರ್ಧಾರ, ಏಪ್ರಿಲ್ 20ರ ವರೆಗೆ ಯಥಾಸ್ಥಿತಿ

Friday, April 16th, 2021
yedyurappa

ಬೆಂಗಳೂರು :  ರಾಜ್ಯ ರಾಜಧಾನಿಯಲ್ಲಿ ಆತಂಕಕಾರಿ ಮಟ್ಟದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಸೂಚನೆ ಇದೆ.  ನಗರದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇನ್ನೂ ಹೆಚ್ಚಿನ ಬಿಗಿಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ, ಏಪ್ರಿಲ್ 20, ಮಂಗಳವಾರದವರೆಗೂ ಈಗಿರುವ ಕ್ರಮಗಳನ್ನ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಜನತಾ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊದಲಾದ ಕ್ರಮಗಳ ಬಗ್ಗೆ ಭಾನುವಾರ ನೋಡೋಣ. […]

ಕೊರೋನಾ’ ಹರಡಲು ಸಹಾಯ ಮಾಡುವ ‘ತಬಲಿಗಿ ಜಮಾತ’ ನಂತಹ ಸಂಘಟನೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಿರಿ !

Thursday, April 2nd, 2020
Ramesha Sinde

ಪಣಜಿ  : ಕೊರೋನಾ ರೋಗಾಣುವಿನಿಂದಾಗಿ ಜಾಗತಿಕ ಮಟ್ಟದಲ್ಲಿ 47 ಸಾವಿರಕ್ಕಿಂತಲೂ ಹೆಚ್ಚು ಜನರ ಮೃತಪಟ್ಟಿದ್ದು 9 ಲಕ್ಷದ 40 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ತಗಲಿದೆ. ಭಾರತದಲ್ಲಿ ಈ ಮಹಾಮಾರಿ ಹರಡದಿರಲೆಂದು ಸರಕಾರ ‘ಜನತಾ ಕರ್ಫ್ಯೂ’, ಗುಂಪುನಿಷೇಧ, ‘ಲಾಕ್‌ಡೌನ್’, ಸಂಚಾರನಿಷೇಧ ಇತ್ಯಾದಿ ವಿವಿಧ ಉಪಾಯೋಜನೆಗಳನ್ನು ಮಾಡುತ್ತಾ ದೇಶಾದ್ಯಂತ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಿದೆ. ಹೀಗಿರುವಾಗ ಈಗಲೂ ದೇಶದಾದ್ಯಂತ ಅನೇಕ ಮಸೀದಿ, ಸಭಾಗೃಹ, ಕಟ್ಟಡದ ಮೇಲ್ಛಾವಣಿ ಇಂತಹ ಸ್ಥಳಗಳಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ದೊಡ್ಡ ಮಟ್ಟದಲ್ಲಿ ಒಟ್ಟಿಗೆ ಸೇರಿ ನಮಾಜು ಪಠಿಸುತ್ತಿರುವ […]

ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆಗೆ ಕರಾವಳಿಯಲ್ಲಿ ಬೆಂಬಲ

Sunday, March 22nd, 2020
kaladka

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿದೆ. ಮಂಗಳೂರು- ಉಡುಪಿ ನಗರದಲ್ಲಿ ಯಾವುದೇ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಗಳು ಸಂಚರಿಸುತ್ತಿಲ್ಲ. ಉಭಯ ಜಿಲ್ಲೆಗಳ ಸಾರ್ವಜನಿಕ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ. ಹೊಟೇಲ್ ಗಳು, ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳು ಬಂದ್ ಗಳು ಸಂಪೂರ್ಣ ಬಂದ್ ಆಗಿದೆ. ಆಟೋ, ಮ್ಯಾಕ್ಸಿ ಕ್ಯಾಬ್ ಗಳು ಬೀದಿಗಿಳಿದಿಲ್ಲ. ತುರ್ತು ಸೇವೆಗಳನ್ನು ಹೊರತು ಪಡಿಸಿ ನಗರ ಪೂರ್ತಿ ಬಂದ್‌ ಆಗಿದೆ. ಮಂಗಳೂರಿನಲ್ಲಿ […]

ಮಾರ್ಚ್ 22 ರ ‘ಜನತಾ ಕರ್ಫ್ಯೂ’ಗೆ ಎಲ್ಲಾ ನಾಗರಿಕರು ಬೆಂಬಲಿಸಬೇಕು :ಹಿಂದೂ ಜನಜಾಗೃತಿ ಸಮಿತಿ

Saturday, March 21st, 2020
hjjs

ಮಂಗಳೂರು :  ದಕ್ಷಿಣ ಕನ್ನಡ – ಮಾನ್ಯ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರು ಕೋವಿಡ್-19 (ಕೊರೋನಾ ೧೯ ರೋಗಾಣು) ವಿರುದ್ಧ ಹೋರಾಡಲು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಈ ಕರೆಗೆ ಬೆಂಬಲಿಸಿ ಇಡೀ ಜಗತ್ತಿನಾದ್ಯಂತ ಇದೇ ಮೊದಲಬಾರಿ ಜನತೆಯು ರಾಷ್ಟ್ರಹಿತಕ್ಕಾಗಿ ತೆಗೆದುಕೊಂಡಿರುವ ಬಂದ್ ಆಗಿರಬಹುದು. ಈ ಉಪಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ನಾಗರಿಕರ ರಾಷ್ಟ್ರಕರ್ತವ್ಯವಾಗಿದೆ. ಕೊರೋನಾದಂತಹ ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಜನಜಾಗೃತಿಯನ್ನು ಮಾಡಲು ಹಿಂದೂ ಜನಜಾಗೃತಿ ಸಮಿತಿಯೂ […]

ಮಾರ್ಚ್ 22 : ಮಂಗಳೂರಲ್ಲಿ ಖಾಸಗಿ ಬಸ್ ಓಡಾಟ ಬಂದ್

Friday, March 20th, 2020
private bus

ಮಂಗಳೂರು :  ದೇಶದ ಹಿತ ದೃಷ್ಟಿಯಿಂದ ಮಾನ್ಯ ಪ್ರಧಾನ ಮಂತ್ರಿಯವರು ಕೊರೊನಾ ವೈರಸ್‌ ಅನ್ನು ಎದುರಿಸಲು ನೀಡಿರುವ “ಜನತಾ ಕರ್ಫ್ಯೂ” ಕರೆಗೆ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ ಸೋಂಕು ಹರಡುವುದನ್ನು ತಡೆಯಲು ಮಾರ್ಚ್ 22 ರಂದು ಸಾರ್ವಜನಿಕರು ಮನೆಯಲ್ಲಿಯೇ ಉಳಿಯಬೇಕು ಎಂಬ ಉದ್ದೇಶದಿಂದ ಬಸ್ ಓಡಾಟ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರು ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ