ಪಣಜಿ : ಕೊರೋನಾ ರೋಗಾಣುವಿನಿಂದಾಗಿ ಜಾಗತಿಕ ಮಟ್ಟದಲ್ಲಿ 47 ಸಾವಿರಕ್ಕಿಂತಲೂ ಹೆಚ್ಚು ಜನರ ಮೃತಪಟ್ಟಿದ್ದು 9 ಲಕ್ಷದ 40 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ತಗಲಿದೆ. ಭಾರತದಲ್ಲಿ ಈ ಮಹಾಮಾರಿ ಹರಡದಿರಲೆಂದು ಸರಕಾರ ‘ಜನತಾ ಕರ್ಫ್ಯೂ’, ಗುಂಪುನಿಷೇಧ, ‘ಲಾಕ್‌ಡೌನ್’, ಸಂಚಾರನಿಷೇಧ ಇತ್ಯಾದಿ ವಿವಿಧ ಉಪಾಯೋಜನೆಗಳನ್ನು ಮಾಡುತ್ತಾ ದೇಶಾದ್ಯಂತ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಿದೆ. ಹೀಗಿರುವಾಗ ಈಗಲೂ ದೇಶದಾದ್ಯಂತ ಅನೇಕ ಮಸೀದಿ, ಸಭಾಗೃಹ, ಕಟ್ಟಡದ ಮೇಲ್ಛಾವಣಿ ಇಂತಹ ಸ್ಥಳಗಳಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ದೊಡ್ಡ ಮಟ್ಟದಲ್ಲಿ ಒಟ್ಟಿಗೆ ಸೇರಿ ನಮಾಜು ಪಠಿಸುತ್ತಿರುವ ಘಟನೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗುತ್ತಿದೆ. ‘ಟಿಕ್‌ಟಾಕ್’ ನಂತಹ ಜಾಲತಾಣಗಳಲ್ಲಿ ಮುಸಲ್ಮಾನರು ಮಾಸ್ಕ್ ಹಾಕಬಾರದು, ‘ಸೋಶಿಯಲ್ ಡಿಸ್ಟೆಸಿಂಗ್’ನ ಪಾಲಿಸಬೇಡಿ, ಎಂಬಂತಹ ವಿಡಿಯೋ ಹಬ್ಬಿಸಲಾಗುತ್ತಿದೆ. ಈಗಂತೂ ದೆಹಲಿಯಲ್ಲಿ ತಬಲಿಗಿ ಜಮಾತಿನ ಕಾರ್ಯಕ್ರಮದಿಂದಾಗಿ ದೇಶದಾದ್ಯಂತ ಅನೇಕ ರಾಜ್ಯಗಳಿಂದ ಕೊರೋನಾದ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡಿರುವುದು ಬಹಿರಂಗವಾಗಿದೆ.
ಅದೇರೀತಿ ಆ ತಬಲಿಗಿ ಜಮಾತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕ ಜನರು ‘ಪ್ರವಾಸಿ ವೀಸಾ’ ತೆಗೆದುಕೊಂಡು ಭಾರತಕ್ಕೆ ಬಂದಿರುವುದು ಹಾಗೂ ಕಾನೂನುಬಾಹಿರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಬಹಿರಂಗವಾಗಿದೆ. ಕೊರೋನಾದ ಸೋಂಕು ಹರಡದಿರಲೆಂದು ಸರಕಾರದ ಆದೇಶವನ್ನು ಪಾಲಿಸುತ್ತಾ ಹಿಂದೂಗಳು ದೇವಸ್ಥಾನವನ್ನು ಮುಚ್ಚುವ ಮೂಲಕ ಸಾಮಾಜಿಕ ಅರಿವನ್ನು ಇಟ್ಟುಕೊಂಡರು; ಆದರೆ ಮುಸಲ್ಮಾನ ಸಮಾಜದ ಕೆಲವು ಸಮಾಜಘಾತಕ ವೃತ್ತಿಯವರು ಈ ಆದೇಶವನ್ನು ಧಿಕ್ಕರಿಸುತ್ತ ‘ಕೊರೋನಾ’ವನ್ನು ತಡೆಯುತ್ತಿರುವ ಸರಕಾರದ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಹಾಗೂ ಸಮಾಜದ ಆರೋಗ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಅಪಾಯವುಂಟು ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿಗಳ ಮೇಲೆ ಅದೇರೀತಿ ಅಲ್ಲಿಯ ಮೌಲ್ವಿ ಹಾಗೂ ತಬಲಿಗಿ ಜಮಾತ ಮೇಲೆ ಕಾನೂನಿನ ಕಠಿಣ ಶಿಕ್ಷೆಯನ್ನು ವಿಧಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದರು.
ಒಂದೆಡೆ ‘ಸೋಶಿಯಲ್ ಡಿಸ್ಟೆಂಸಿಂಗ್’ ಆಗದ ಕಾರಣ ಮತ್ತು ಗುಂಪುನಿಷೇಧದ ಆದೇಶವನ್ನು ಪಾಲಿಸದಿರುವ ಜನರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಯಾರು ಕಾನೂನನ್ನು ಪಾಲಿಸುವುದಿಲ್ಲವೋ ಅವರ ಮೇಲೆ ಕ್ರಮಕೈಗೊಳ್ಳಲೇಬೇಕು; ಆದರೆ ಮುಸಲ್ಮಾನರಿಂದ ಅದರ ಪಾಲನೆಯಾಗದಿರುವುದರಿಂದ ಅವರ ಮೇಲೆ ಕಠಿಣ ಕ್ರಮಕೈಗೊಂಡಿರುವುದು ಎಲ್ಲಿಯೂ ಕಂಡುಬರುತ್ತಿಲ್ಲ ಎಂಬುದು ದುರ್ದೈವವಾಗಿದೆ. ಅನೇಕ ಮಸೀದಿಗಳಿಗೆ ವಿದೇಶಿ ಮುಸಲ್ಮಾನರು ಬಂದು ಕಾನೂನುಬಾಹಿರವಾಗಿ ನೆಲೆಸುತ್ತಿದ್ದಾರೆ. ಅವರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನುಮತಿ ಇಲ್ಲದಿರುವಾಗ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ವಿಷಯಗಳು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಈಗಂತೂ ಕೊರೋನಾಪೀಡಿತ ಮುಸಲ್ಮಾನ ರೋಗಿಗಳು ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಉಗುಳುತ್ತಿರುವ ಹಾಗೂ ಅವರ ಪರೀಕ್ಷೆಗೆ ತೆರಳಿದ ವೈದ್ಯಾಧಿಕಾರಿಗಳ ಮೇಲೆ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ವಾರ್ತೆಗಳು ಬರುತ್ತಿವೆ. ಈ ಮಾನಸಿಕತೆ ಅತ್ಯಂತ ಘಾತಕವಿದ್ದು ಸಮಾಜದಲ್ಲಿ ಕೊರೋನಾವನ್ನು ಉದ್ದೇಶಪೂರ್ವಕವಾಗಿ ಹಬ್ಬಿಸುತ್ತಿರುವ ಈ ಕೃತಿ ಗಂಭೀರ ಅಪರಾಧವಾಗಿದೆ. ಇಂತಹ ಸಮಾಜಕಂಟಕರನ್ನು ಕೂಡಲೇ ಬಂಧಿಸಬೇಕು. ಯಾವಾಗಲೂ ಪ್ರಗತಿಪರದ ಹೆಸರಿನಲ್ಲಿ ಕೋಲಾಹಲವೆಬ್ಬಿಸುವವರು ಹಾಗೂ ಮುಸಲ್ಮಾನ ಮುಖಂಡರು ಇದರ ಬಗ್ಗೆ ಇದು ವರೆಗೆ ಸುಮ್ಮನಿದ್ದಾರೆ
Click this button or press Ctrl+G to toggle between Kannada and English