ಮುಂಬಯಿ; ಆಹಾರ ಪೊಟ್ಟಣಗಳ ಉಪಚಾರಗೈಯುತ್ತಿರುವ ಉಡುಪಿ ಮೂಲದ ಕನ್ನಡಿಗ ಬಿ.ಆರ್ ಶೆಟ್ಟಿ

9:41 PM, Wednesday, April 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

B-R-Shetty-Help- (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಬ್ಧ ಗೊಂಡಿರುವ ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿನಲ್ಲಿ ಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ ಪೊಟ್ಟಣಗಳ ಉಪಚರಗೈದು ಸೇವೆಯಲ್ಲಿ ತೊಡಗಿಸಿದೆ. ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಸೇವಾಕರ್ತರು ಆಹಾರ ಸಿದ್ಧಪಡಿಸಿ ಜನತೆಗೆ ಪೂರೈಕೆ ಮಾಡುತ್ತಿರು ವ ಸುದ್ದಿ ತಿಳಿದು ಸಾಮ್ನಾ ಮರಾಠಿ ದೈನಿಕದ ಪ್ರಧಾನ ಸಂಪಾದಕ, ಶಿವಸೇನಾ ಪಕ್ಷದ ಧುರೀಣ, ಲೋಕಸಭಾ ಸದಸ್ಯ ಸಂಜಯ್ ರಾವುತ್ ಅವರು ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠದಲ್ಲಿ ಮತ್ತು ಚೆಂಬೂರು ಇಲ್ಲಿನ ಗುರುಕೃಪಾ ಸಭಾಗೃಹದಲ್ಲಿನ ತಲ್ವಾರ್ ಕ್ಯಾಟರರ‍್ಸ್ ಸಿದ್ಧ ಪಡಿಸಲಾಗುತ್ತಿರುವ ಆಹಾರದ ಬಗ್ಗೆ ಮಾಹಿತಿ ಪಡೆದ ಬಿ.ಆರ್ ಶೆಟ್ಟಿ ಅವರ ಅನುಪಮ ಸೇವೆಗಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠ, ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠ, ಎರ್ಮಾಳ್ ಹರೀಶ್ ಶೆಟ್ಟಿ (ಬೋರಿವಿಲಿ), ಎನ್.ಬಿ ಶೆಟ್ಟಿ (ಕ್ಲಾಸಿಕ್ ಹೊಟೇಲ್ ಮಾಟುಂಗಾ), ಸಚ್ಚು ಶೆಟ್ಟಿ (ಸುಂದರ್’ಸ್ ಹೊಟೇಲ್ ಮಧ್ಯ ರೈಲ್ವೇ, ಮಾಟುಂಗಾ), ನಿತೀಶ್ ಶೆಟ್ಟಿ (ವಿಶ್ವಮಹಲ್ ದಾದರ್ ಪೂರ್ವ), ಸುಭಾಷ್ ತಲ್ವಾರ್ (ತಲ್ವಾರ್ ಕ್ಯಾಟರರ‍್ಸ್) ತಮ್ಮ ಸಾರಥ್ಯದಲ್ಲಿ ಆಹಾರವನ್ನು ತಯಾರಿಸಿ ವಿತರಿಸುತ್ತಿದ್ದಾರೆ. ಸರಕಾರ, ಬಿಎಂಸಿ, ಪೋಲಿಸು ಅಧಿಕಾರಿಗಳ ಸಹಯೋಗದಿಂದ ನಿತ್ಯ ಈ ವ್ಯವಸ್ಥೆ ಮಾಡಿ ಅನಾಥಾಶ್ರಮ, ಅಲ್ಲಲ್ಲಿ ಸಿಕ್ಕಾಕಿ ಕೊಂಡಿರುವ ಹೊರ ರಾಜ್ಯಗಳ ಜನತೆಗೆ, ರಸ್ತೆ ಪಕ್ಕಗಳಲ್ಲಿ ನೆಲೆಬಿಟ್ಟಿರುವ ಭಿಕ್ಷುಕರು, ಅನಾಥ ವ್ಯಕ್ತಿಗಳು, ವಸತಿಗೃಹಗಳಿಗೆ ಆಹಾರ ಪೊಟ್ಟಣಗಳನ್ನು ಆಯ್ದ ಸೇವಕರುಗಳಿಂದ ವಿತರಿಸುತ್ತಿದ್ದಾರೆ.

B-R-Shetty-Help- ದೈವಕ್ಯ ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನ್ನದಾಸೋಹದ ಕನಸಿನಂತೆ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರ ಅನುಗ್ರಹ ಮತ್ತು ಮಾರ್ಗದರ್ಶನದಂತೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲೂ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ ಜೆ.ಗೋಗಟೆ ಇವರ ಮುಂದಾಳುತ್ವದಲ್ಲಿ ನಿತ್ಯ ೧,೦೦೦ ಆಹಾರ ಪೊಟ್ಟಣಗಳ ವ್ಯವಸ್ಥೆ ಮಾಡಲಾಗುತ್ತಿದ್ದರೆ, ಉಡುಪಿ ಶ್ರೀ ಅದಮಾರು ಮಠದ ಶ್ರೀ ಅದಮಾರು ಮಠದ ಮಠಾಧೀಶ 108  ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮತ್ತು ಪರ್ಯಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರ ಆಶೀರ್ವಚನ, ಆದೇಶದಂತೆ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಸಹಕಾರದಲ್ಲಿ ವೆಂಕಟೇಶ್ ಭಟ್ ಕಟಪಾಡಿ ಮತ್ತು ಅನೂಪ್ ಶೆಟ್ಟಿ ಮುಂದಾಳುತ್ವದಲ್ಲಿ ನಿತ್ಯ 2,000 ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಲಾಗುತ್ತಿದೆ.

ದೈನಂದಿನವಾಗಿ ಸುಮಾರು 3.25  ಲಕ್ಷ ಮೊತ್ತದ ಅಕ್ಕಿ, ತರಕಾರಿ, ಎಣ್ಣೆ, ದಿನಸಿ ಪದಾರ್ಥಗಳೊಂದಿಗೆ ಆಹಾರ ಸಿದ್ಧಪಡಿಸಿ ಮುಂಬಯಿನಾದ್ಯಂತದ ಅಗ್ನಿಶಾಮಕ ದಳಕ್ಕೆ 1,250 ಪೊಟ್ಟಣಗಳ, ರೈಲ್ವೇ ಪೋಲಿಸು ತಂಡಗಳಿಗೆ 1,500 ಪೊಟ್ಟಣಗಳ, ಪಶ್ಚಿಮ ಉಪನಗರದ ಪೋಲಿಸ್ ಸಿಬ್ಬಂದಿಗಳಿಗೆ 1,5000 ಪೊಟ್ಟಣಗಳ, ನವಿಮುಂಬಯಿ ಪೋಲಿಸ್ ಆಯುಕ್ತರಿಗೆ 2,500 ಪೊಟ್ಟಣಗಳ (ತಮ್ಮತಮ್ಮ ಅಧೀನದಲ್ಲಿನ ಸೇವಾಕರ್ತರಿಗೆ, ಅವಶ್ಯಕರಿಗೆ ವಿತರಿಸುವರು), ಭಾಂಡೂಪ್, ಕುರ್ಲಾ ಮತ್ತಿತರ ಕೊಳೆಗೇರಿ ಪ್ರದೇಶವಾಸಿಗಳಿಗೆ 1,650 ಪೊಟ್ಟಣಗಳ, ಬಿಎಂಸಿ ಸೇವಾಕರ್ತರಿಗೆ, ನೌಕರರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ 4,000 ಪೊಟ್ಟಣಗಳ ವಿತರಿಸಲಾಗುತ್ತಿದೆ. ಈ ವರೆಗೆ ದೈನಂದಿನವಾಗಿ 13,000 ಪೊಟ್ಟಣಗಳಂತೆ ಸಿದ್ಧಪಡಿಸಿ ಬಿ.ಆರ್ ಶೆಟ್ಟಿ ಅವರು ಆಪತ್ಕಾಲದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಡಾ| ಚಿರಂಜೀವಿ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

B-R-Shetty-Help-

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English