ಆನ್‍ಲೈನ್ / ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ

5:15 PM, Tuesday, April 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

Mescomಮಂಗಳೂರು :  ವಿದ್ಯುತ್ ಗ್ರಾಹಕರೇ, ತಾವು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24×7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು COVID-19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿರುತ್ತವೆ. ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಂತರಾಗಿರಲು ಮೆಸ್ಕಾಂ ಬಯಸುತ್ತದೆ.

ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್ 2020 ರವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿರುತ್ತಾರೆ. ಆದರೆ ಈ ವಿಷಯದ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗಾಗಲೀ ಯಾವುದೇ ನಿರ್ದೇಶನಗಳಿರುವುದಿಲ್ಲ.

ಮಾಸಿಕ ಮಾಪಕ ಓದುವಿಕೆ ಹಾಗು ಬಿಲ್ ವಿತರಣೆಯನ್ನು ಈ ಕೆಳಕಂಡ ವಿಧಾನಗಳಲ್ಲಿ ನಿರ್ವಹಿಸಲಾಗುವುದು.

ಎಲ್ಲಾ ವಿದ್ಯುತ್ ಗ್ರಾಹಕರಿಗೆ ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್ ಅನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರುಗಳಿಗೆ ವಿದ್ಯುತ್ ಬಿಲ್ ಅನ್ನು ಇ-ಮೇಲ್ / ಎಸ್.ಎಂಎಸ್. / ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕರು ಸಹಾಯವಾಣಿ 1912 ಕ್ಕೆ ಕರೆಮಾಡಿ ಅವರ ಅಕೌಂಟ್ ಐ.ಡಿ. ಹಾಗು ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ ಬಿಲ್ ವಿವರಗಳನ್ನು ಇ-ಮೇಲ್ / ಎಸ್.ಎಂಎಸ್. / ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕರು ಮೆಸ್ಕಾಂನ ಜಾಲತಾಣ www.mesco.in ನಲ್ಲ್ಲಿ ನೊಂದಾಯಿಸಿಕೊಂಡು ವಿದ್ಯುತ್ ಬಿಲ್ ವಿವರಗಳನ್ನು ಪಡೆಯಬಹುದು. ಗ್ರಾಹಕರು ಸಂಬಂಧಪಟ್ಟ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಬಿಲ್ ವಿವರವನ್ನು ಪಡೆಯಬಹುದು. (ಉಪವಿಭಾಗದ ಸಂಪರ್ಕ ವಿವರಗಳು ಜಾಲತಾಣದಲ್ಲಿ ಲಭ್ಯವಿವೆ)

ಮೆಸ್ಕಾಂ, ಗ್ರಾಹಕರಿಂದ ದಿನನಿತ್ಯ ವಸೂಲಾಗುವ ಕಂದಾಯ ಮೊತ್ತದಲ್ಲಿ ದಿನನಿತ್ಯದ ಖರ್ಚು ವೆಚ್ಚಗಳು ಅದರಲ್ಲಿ ಪ್ರಮುಖವಾಗಿ ವಿದ್ಯುತ್ ಉತ್ಪಾದಕರ ಖರೀದಿ ವೆಚ್ಚವನ್ನು ಭರಿಸುತ್ತಿವೆ. ಗ್ರಾಹಕರಿಂದ ವಿದ್ಯುತ್ ಬಿಲ್ ಪಾವತಿಯು ವಿಳಂಬ ಉಂಟಾದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಉತ್ಪಾದಕರ ಬಿಲ್ಲನ್ನು ಪಾವತಿಸಲು ಅಸಾಧ್ಯವಾಗುವುದರ ಜೊತೆಗೆ, ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಹಾಗು ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಕಷ್ಟಕರವಾಗುವುದು. ಆದ್ದರಿಂದ ಗ್ರಾಹಕರು ಈ ಕೆಳಕಂಡ ಆನ್‍ಲೈನ್ / ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ವಿನಂತಿಸಲಾಗಿದೆ.

ನಗರ ಪ್ರದೇಶದ ಗ್ರಾಹಕರು (ಆರ್.ಎ.ಪಿ.ಡಿ.ಆರ್.ಪಿ. ಪಟ್ಟಣ ಪ್ರದೇಶಗಳು – ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ/ಮಣಿಪಾಲ, ಶಿವಮೊಗ್ಗ, ಸಾಗರ, ಶಿಕಾರಿಪುರ, ಭದ್ರಾವತಿ, ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು)

ಗ್ರಾಹಕರು www.mescom.org.in ಜಾಲತಾಣದಲ್ಲಿ ಲಾಗ್‍ಇನ್ ಆಗಿ ಬಿಲ್‍ನ್ನು ವೀಕ್ಷಿಸಿ ಮತ್ತು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‍ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್ಲನ್ನು ಪಾವತಿಸಬಹುದಾಗಿರುತ್ತದೆ. (“Quick payment”) ಆಯ್ಕೆಯನ್ನು ಮಾಡಿ ಗ್ರಾಹಕರು ರಿಜಿಸ್ಟರ್ ಮಾಡಿಕೊಳ್ಳದೆಯೂ ಪಾವತಿಸಬಹುದು.)

ಗ್ರಾಹಕರು ಪೇ-ಟಿಎಮ್ ಅಪ್ಲಿಕೀಷನ್‍ನಲ್ಲಿ ಲಾಗಿನ್ ಆಗಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್/ ಇಂಟರ್‍ನೆಟ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿದೆ. ಗ್ರಾಹಕರು, ಬಿ.ಬಿ.ಪಿ.ಎಸ್. ಪ್ಲಾಟ್‍ಫಾರ್ಮ್ ಮೂಲಕ ಯಾವುದೇ ಬ್ಯಾಂಕ್ ಆಪ್, ಬಿ.ಬಿ.ಪಿ.ಎಸ್. ಔಟ್‍ಲೆಟ್‍ಗಳು, ಮೊಬೈಲ್ ವ್ಯಾಲೆಟ್‍ಗಳನ್ನು ಬಳಸಿಕೊಂಡು ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿದೆ. ಗ್ರಾಹಕರು, ಕರ್ನಾಟಕ ಮೊಬೈಲ್ ಒನ್ ಆಪ್ ಅಪ್ಲಿಕೇಷನ್‍ನಲ್ಲಿ ಲಾಗಿನ್ ಆಗಿ ಬಿಲ್‍ನ್ನು ವೀಕ್ಷಿಸಿ ಮತ್ತು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‍ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿರುತ್ತದೆ.

ಗ್ರಾಹಕರು http://www.karnatakaone.gov.in/ ಜಾಲತಾಣದಲ್ಲಿ ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿದೆ.

ಗ್ರಾಮೀಣ ಪ್ರದೇಶದ ಗ್ರಾಹಕರು (ಮೇಲೆ ತಿಳಿಸಿದ ಆರ್.ಎ.ಪಿ.ಡಿ.ಆರ್.ಪಿ. ವ್ಯಾಪ್ತಿಯ ಗ್ರಾಹಕರನ್ನು ಹೊರತುಪಡಿಸಿ)

ಗ್ರಾಹಕರು www.mescomtrm.com ಜಾಲತಾಣದಲ್ಲಿ ಲಾಗ್‍ಇನ್ ಆಗಿ ಬಿಲ್‍ನ್ನು ವೀಕ್ಷಿಸಿ, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‍ನೆಟ್ ಬ್ಯಾಂಕಿಂಗ್ ಹಾಗು ಯು.ಪಿ.ಐ. ಸೌಲಭ್ಯಗಳೊಂದಿಗೆ ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿರುತ್ತದೆ.(“Quick pay”) ಆಯ್ಕೆಯನ್ನು ಮಾಡಿ ಗ್ರಾಹಕರು ರಿಜಿಸ್ಟರ್ ಮಾಡಿಕೊಳ್ಳದೆಯೂ ಪಾವತಿಸಬಹುದು.) ಗ್ರಾಹಕರು ಪೇ-ಟಿಎಮ್ ಅಪ್ಲಿಕೇಷನ್‍ನಲ್ಲಿ ಲಾಗಿನ್ ಆಗಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್‍ನೆಟ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್‍ನ್ನು ಪಾವತಿಸಬಹುದಾಗಿದೆ.

ಅದಲ್ಲದೆ ಉಪವಿಭಾಗದ ನಗದು ಕೌಂಟರ್‍ಗಳು ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯನಿರ್ವಹಿಸಲಿವೆ.

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಅಂತಹ ಗ್ರಾಹಕರು ಸ್ಥಳೀಯ ಮೆಸ್ಕಾಂ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಬೇಕು. ಅಂತಹ ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಿದೆ. ಈ ವಿಧಾನವನ್ನು COVID-19ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರ ಸುರಕ್ಷತೆಗಾಗಿ ಪ್ರಸ್ತುತ ತಿಂಗಳಿಗೆ ಮಾತ್ರ ಅನ್ವಯಿಸುವುದು.

ಮೇ 01 ರಿಂದ ಯಥಾಪ್ರಕಾರ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗು ಬಿಲ್ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಮತ್ತು ವಾಸ್ತವಿಕ ಬಳಕೆಯಲ್ಲಿ ಹಾಗು ಸರಾಸರಿ ಬಳಕೆಯಲ್ಲಿ ತಪ್ಪು / ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಮಾಹೆಯ ಬಿಲ್‍ನಲ್ಲಿ ಸರಿಪಡಿಸಲಾಗುವುದು. ಈ ಸಲಹೆಗಳನ್ನು ಹೆಚ್ಚಿನ ಜನಸಾಮಾನ್ಯರ ಹಿತದೃಷ್ಟಿಯಿಂದ ನೀಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English