ಮಂಗಳೂರಿನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು, ಹಲವು ಕೃಷಿ ಭೂಮಿಗಳಿಗೆ ಆಪತ್ತು

Thursday, January 14th, 2021
Ramanatha Rai

ಮಂಗಳೂರು: ಯುಪಿಸಿಎಲ್‌ ಕಂಪೆನಿಯು ನಂದಿಕೂರಿನಿಂದ ಕೇರಳಕ್ಕೆ ಅಳವಡಿಸಲಿರುವ ವಿದ್ಯುತ್‌ ಪ್ರಸರಣ ತಂತಿ ಹಾದು ಹೋಗುವ ಪ್ರದೇಶಗಳ ಕುರಿತು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಭೂಮಿಯ ಮೇಲ್ಭಾಗದಲ್ಲಿ ತಂತಿ ಎಳೆಯುವ ಬದಲು ಭೂಗತ ಕೇಬಲ್‌ ಅಳವಡಿಸುವುದು ಸೂಕ್ತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ನಂದಿಕೂರಿನಿಂದ ಮೂಡುಬಿದಿರೆ- ಬಂಟ್ವಾಳ-ವಿಟ್ಲ- ಕರೋ ಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಿದ್ಯುತ್‌ ಲೈನ್‌ ಕೊಂಡೊಯ್ಯುವ ಬಗ್ಗೆ ಗೂಗಲ್‌ ಸರ್ವೇ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಬಂಟ್ವಾಳ ತಾಲೂಕಿನ […]

ಮಂಗಳೂರು ವಿದ್ಯುತ್ ಸರಬರಾಜು ನಿಗಮದ ನಿರ್ದೇಶಕಿ ಸ್ನೇಹಲ್ ಆರ್. ವರ್ಗಾವಣೆ

Thursday, September 3rd, 2020
snehal

ಮಂಗಳೂರು : ಮಂಗಳೂರು ವಿದ್ಯುತ್ ಸರಬರಾಜು ನಿಗಮ(ಮೆಸ್ಕಾಂ) ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಬೆಂಗಳೂರು ಪಿಯು ಶಿಕ್ಷಣ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ವಿದ್ಯುತ್ ಸರಬರಾಜು ನಿಗಮ ನೂತನ ನಿರ್ದೇಶಕರಾಗಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಪ್ರಶಾಂತ್ ಮಿಶ್ರಾ, 2014ರಲ್ಲಿ ಐಎಎಸ್ ಉತ್ತೀರ್ಣರಾಗಿದ್ದರು. ಈ ಹಿಂದಿನ ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಬೆಂಗಳೂರು ಪಿಯು ಶಿಕ್ಷಣ ನಿರ್ದೇಶಕರಾಗಿ ನೇಮಕ ಮಾಡಿ ಸರಕಾರ ಆದೇಶ ನೀಡಿದೆ. ಸ್ನೇಹಲ್, 2013ನೇ ಐಎಎಸ್ ಬ್ಯಾಚ್ ನವರಾಗಿದ್ದಾರೆ. ಸ್ನೇಹಲ್ ಅವರು ನಿರ್ದೇಶಕಿಯಾಗಿದ್ದ […]

ಆನ್‍ಲೈನ್ / ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ

Tuesday, April 7th, 2020
Mescom

ಮಂಗಳೂರು :  ವಿದ್ಯುತ್ ಗ್ರಾಹಕರೇ, ತಾವು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24×7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು COVID-19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿರುತ್ತವೆ. ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಂತರಾಗಿರಲು ಮೆಸ್ಕಾಂ ಬಯಸುತ್ತದೆ. ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್ 2020 ರವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿರುತ್ತಾರೆ. ಆದರೆ ಈ […]