ಕೆಲವೊಂದು ಟಿವಿ ಚಾನೆಲ್ ಗಳಲ್ಲಿ ಸೀಲ್ ಡೌನ್ ಎಂದು ಅಪಪ್ರಚಾರ; ಜನ ಭಯ ಬೀತರಾಗ ಬೇಡಿ

2:57 PM, Friday, April 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

TVಮಂಗಳೂರು : ನಗರದಲ್ಲಿ ಸೀಲ್ ಡೌನ್ ಆಗಿದೆ ಎಂಬ ಸುದ್ದಿ ಕೆಲವೊಂದು ಟಿವಿ ಚಾನೆಲ್ ಗಳಲ್ಲಿ ಬರುತ್ತಿದೆ. ಕೊರೋನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ನಿಜ, ಸ್ಪರ್ಶ, ಕೆಮ್ಮು ಮತ್ತು ಕಡಿಮೆ ಅಂತರದಿಂದಲೂ ಸೋಂಕು ಹರಡುವುದು ನಿಜ,  ಯಾವುದೇ ರೀತಿ ಭಯಪಡುವ ಅಗತ್ಯ ವಿಲ್ಲ ನಾವು ಜಾಗರೂಕರಾಗಿರ ಬೇಕು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಕಟಣೆಯೊಂದು ತಿಳಿಸಿದೆ.

ಈ ಬಗ್ಗೆ ಸ್ಪಷ್ಟಪಡಿಸುವುದೇನೆಂದರೆ, ಇದೊಂದು ನಿರಾಧಾರ ಸುದ್ದಿ ಆಗಿದೆ. ಮಂಗಳೂರು ನಗರದಲ್ಲಿ ಯಾವುದೇ ಸೀಲ್ ಡೌನ್ ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಪ್ರಕ್ರಿಯೆ‌ ಜಾರಿಯಲ್ಲಿದೆ. ಇದನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ಇಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಸಂಬಂಧಪಟ್ಟವರಿಂದ ದೃಢೀಕರಿಸಲು ಕೋರಲಾಗಿದೆ. ವದಂತಿ, ಅಧಾರ ರಹಿತ ಸುದ್ದಿಗಳ ಪ್ರಸಾರದಿಂದ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಮೂಡುತ್ತಿದೆ. ಜನರಿಗೆ ಅರಿವು ಮೂಡಿಸಬೇಕೇ ಹೊರತು ಸೀಲ್ ಡೌನ್ ಆಗುತ್ತದೆ ಎಂದು ಭಯ ಪಡಿಸುವುದು ಅಲ್ಲ ಎಂದು ಅಪ ಪ್ರಚಾರ ಮಾಡುವ ಮಾದ್ಯಮಗಳಿಗೆ ಸೂಚಿಸಲಾಗಿದೆ

ಮಾಧ್ಯಮ ಮಿತ್ರರು ಸಹಕರಿಸಲು ಕೋರಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English