ಸೀಲ್ ಡೌನ್ ಇದ್ದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು

Wednesday, June 16th, 2021
Subrahmanya

ಸುಬ್ರಹ್ಮಣ್ಯ : ಸೋಮವಾರದಿಂದ  ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದರೂ ಹೊರ ಜಿಲ್ಲೆಗಳಿಂದ ಕುಕ್ಕೆಗೆ ಯಾತ್ರಿಕರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ  ಆಗಮಿಸುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಆನ್ ಲಾಕ್ ಇರುವುದರಿಂದ ಮತ್ತು ಮಂಗಳವಾರ ಆಶ್ಲೇಷ ನಕ್ಷತ್ರ ಇದ್ದುದರಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಸೋಮವಾರದಿಂದ ಸುಬ್ರಹ್ಮಣ್ಯ   ಪಂಚಾಯತಿ ವ್ಯಾಪ್ತಿಯ ಪ್ರವೇಶ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕುಲ್ಕುಂದ ಭಾಗದಿಂದ ಕುಕ್ಕೆ ಕಡೆಗೆ ಯಾತ್ರಿಕರ ವಾಹನಗಳು ಆಗಮಿಸುತ್ತಿದೆ. ಅಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಪೊಲೀಸರು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಗ್ರಾಮ ಪಂಚಾಯತ್ ಗಳು ಸೀಲ್ ಡೌನ್

Sunday, June 13th, 2021
KV Rajendra Kumar

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ  ಪ್ರಮಾಣ ಹೆಚ್ಚಳವಾಗಿರುವ ಹದಿನೇಳು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಮಣ್ಯ ಹಾಗೂ ಸವಣೂರು ಸೀಲ್ ಡೌನ್ ಆಗಲಿದೆ. ದ.ಕ. ಜಿಲ್ಲೆಯ 17 ಗ್ರಾಪಂ.ಗಳು  […]

ವಿಟ್ಲದ ಹಾಳೆತಟ್ಟೆ ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ, ಕಂಪೆನಿ ಸೀಲ್ ಡೌನ್

Wednesday, July 29th, 2020
Vitla Factory

ವಿಟ್ಲ : ಕೊಡಂಗಾಯಿ ಬಲಿಪಗುಳಿಯಲ್ಲಿರುವ ಇಕೋ-ಬ್ಲಿಝ್  ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ ವಾಗಿದ್ದು,  ಸುಮಾರು  300ಕ್ಕೂ ಹೆಚ್ಚಿನ ಕಾರ್ಮಿಕರಲ್ಲಿ ಆತಂಕ ಮಡುಗಟ್ಟಿದೆ. ಹಾಳೆತಟ್ಟೆ ತಯಾರಿಕೆಯಲ್ಲಿ ಅಂತರ್ರಾಷ್ಟೀಯ ಮಾರುಕಟ್ಟೆ ಹೊಂದಿರುವ ಇಕೋ-ಬ್ಲಿಝ್ ಕಂಪೆನಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಜನ ಕಾರ್ಮಿಕರಿದ್ದಾರೆ. ಅದೇ ರೀತಿ ಸ್ಥಳೀಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇದೀಗ 9ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಮಂಗಳವಾರ ಕಂಪೆನಿಗೆ ಆಗಮಿಸಿದ ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಸೀಲ್ ಡೌನ್ ಮಾಡಿದ್ದಾರೆ. ಮುನ್ನೆಚ್ಚರಿಕೆಯ […]

ಬೆಳ್ಮಣ್‌ : ಹೊಟೇಲ್ ಉದ್ಯಮಿ ಹಾಗೂ ಪತ್ನಿ, ಮಗಳಿಗೂ ಕೊರೊನಾ ಸೋಂಕು

Wednesday, July 22nd, 2020
belman corona

ಉಡುಪಿ  :  ಹೊಟೇಲ್ ಉದ್ಯಮಿಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು ಎರಡು ದಿನಗಳ ಬಳಿಕ ಆತನ ಪತ್ನಿ ಹಾಗೂ ಮಗಳಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಹೋಟೆಲ್ ಉದ್ಯಮಿಗೆ ಪಾಸಿಟಿವ್ ವರದಿ ದೃಢವಾದ ಹಿನ್ನಲೆಯಲ್ಲಿ ಬೆಳ್ಮಣ್‌ನಲ್ಲಿ ಅವರು ನಡೆಸುತ್ತಿದ್ದ ಹೊಟೇಲ್ ಹಾಗೂ ಅವರ ವಾಸದ ಬಾಡಿಗೆ ಮನೆಯ ಸಹಿತ ಸುಮಾರು 15 ಮನೆ ಹಾಗೂ 30 ಅಂಗಡಿ ಹಾಗೂ ಎರಡು ಬ್ಯಾಂಕ್‌‌ಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಒಂದೇ ಮನೆಯ ಮೂವರಲ್ಲಿ ಕೊರೊನಾ ಸೋಂಕು […]

ಕೋವಿಡ್ ವೈರಸ್ ಗೆ ಕಲ್ಲಡ್ಕದ 45ವರ್ಷದ ವ್ಯಕ್ತಿ ಬಲಿ

Thursday, July 2nd, 2020
covid-death

ಬಂಟ್ವಾಳ: ಕೋವಿಡ್ ವೈರಸ್ ಗೆ ಬಂಟ್ವಾಳ ತಾಲೂಕಿನಲ್ಲಿ 5ನೇ ಬಲಿಯಾಗಿದ್ದು, ಕಲ್ಲಡ್ಕ ಭಾಗದ 45ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಗೆ ಕಿಡ್ನಿ ಸಮಸ್ಯೆ ಯ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದಿತ್ಯವಾರ ವೈದ್ಯರ ಪರೀಕ್ಷೆಯ ಬಳಿಕ ಅವರಿಗೆ ಕೋವಿಡ್ ಸೊಂಕು ತಗಿಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಇವರಿಗೆ ಸೊಂಕಿನ ಮೂಲ ಯಾವುದು ಎಂಬುದು ದೃಡವಾಗಿಲ್ಲ. ಇವರು ಪ್ರಥಮ ಚಿಕಿತ್ಸೆ ಪಡೆದ ಕಲ್ಲಡ್ಕ ದ ಖಾಸಗಿ ಆಸ್ಪತ್ರೆಯ ನ್ನು ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿದೆ. ಮೃತ ವ್ಯಕ್ತಿಯ ಪುತ್ರ […]

ಹುಬ್ಬಳ್ಳಿ ಮೂರುಸಾವಿರ ಮಠ ಸೀಲ್ ಡೌನ್

Wednesday, June 24th, 2020
Mooru-savira-Matt

ಹುಬ್ಬಳ್ಳಿ: ಕೊರೋನಾ ವೈರಸ್ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೃದ್ದಿಸುತ್ತಿವೆ. ಉತ್ತರ ಕರ್ನಾಟಕ ರಾಜಧಾನಿ, ಛೋಟಾ ಮುಂಬೈ, ವಾಣಿಜ್ಯ ನಗರಿ ಎಂದೇ ಖ್ಯಾತಿ ಹೊಂದಿರುವ ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ‌ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರತಿದಿನ ಭಕ್ತರು ಗದ್ದುಗೆ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೀಗ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಮಠದಲ್ಲಿ ಭಕ್ತರಿಗೆ ಗದ್ದುಗೆಯ ದರ್ಶನ ಭಾಗ್ಯ ಇಲ್ಲವಾಗಿದೆ. ಮಠದ ಪಕ್ಕದಲ್ಲೆ ಪಿ- 9418 ಸೊಂಕಿತನಿಂದ ಮಠದ […]

ಬಂಟ್ವಾಳ ಕೆಳಗಿನ ಪೇಟೆ ಸಂಪೂರ್ಣ ಸ್ತಬ್ದ, ಮೃತ ಮಹಿಳೆಯ ಕುಟುಂಬದ ಮೇಲೆ ನಿಗಾ

Sunday, April 19th, 2020
Bantwal

ಮಂಗಳೂರು: ಕೊರೋನಾ ಸೋಂಕಿನಿಂದ ಬಂಟ್ವಾಳದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆಯಿಂದ ಜಕ್ರಿಬೆಟ್ಟು ವಿನವರೆಗೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ಮೃತ ಮಹಿಳೆಯ ಅತ್ತೆ ಹಾಗೂ ಪಕ್ಕದ ಮನೆಯ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿರುವುದು ಪರಿಸರದಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ ಮೃತ ಮಹಿಳೆಯ ಅತ್ತೆಯನ್ನು ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಮೂರು ದಿನಗಳ ಹಿಂದೆ ಪಕ್ಕದಮನೆಯ ಮಹಿಳೆಯೊಬ್ಬರು ಕೂಡ ಜ್ವರದ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.  ಅತ್ತೆಇತ್ತೀಚೆಗೆ ಕಾಲು […]

ಕೆಲವೊಂದು ಟಿವಿ ಚಾನೆಲ್ ಗಳಲ್ಲಿ ಸೀಲ್ ಡೌನ್ ಎಂದು ಅಪಪ್ರಚಾರ; ಜನ ಭಯ ಬೀತರಾಗ ಬೇಡಿ

Friday, April 10th, 2020
TV

ಮಂಗಳೂರು : ನಗರದಲ್ಲಿ ಸೀಲ್ ಡೌನ್ ಆಗಿದೆ ಎಂಬ ಸುದ್ದಿ ಕೆಲವೊಂದು ಟಿವಿ ಚಾನೆಲ್ ಗಳಲ್ಲಿ ಬರುತ್ತಿದೆ. ಕೊರೋನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ನಿಜ, ಸ್ಪರ್ಶ, ಕೆಮ್ಮು ಮತ್ತು ಕಡಿಮೆ ಅಂತರದಿಂದಲೂ ಸೋಂಕು ಹರಡುವುದು ನಿಜ,  ಯಾವುದೇ ರೀತಿ ಭಯಪಡುವ ಅಗತ್ಯ ವಿಲ್ಲ ನಾವು ಜಾಗರೂಕರಾಗಿರ ಬೇಕು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಕಟಣೆಯೊಂದು ತಿಳಿಸಿದೆ. ಈ ಬಗ್ಗೆ ಸ್ಪಷ್ಟಪಡಿಸುವುದೇನೆಂದರೆ, ಇದೊಂದು ನಿರಾಧಾರ ಸುದ್ದಿ ಆಗಿದೆ. ಮಂಗಳೂರು ನಗರದಲ್ಲಿ ಯಾವುದೇ ಸೀಲ್ ಡೌನ್ ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ ಕಳೆದ ಕೆಲವು ದಿನಗಳಿಂದ […]