ಮಂಗಳೂರು: ಕೊರೋನಾ ಸೋಂಕಿನಿಂದ ಬಂಟ್ವಾಳದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆಯಿಂದ ಜಕ್ರಿಬೆಟ್ಟು ವಿನವರೆಗೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ಮೃತ ಮಹಿಳೆಯ ಅತ್ತೆ ಹಾಗೂ ಪಕ್ಕದ ಮನೆಯ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿರುವುದು ಪರಿಸರದಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ
ಮೃತ ಮಹಿಳೆಯ ಅತ್ತೆಯನ್ನು ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಮೂರು ದಿನಗಳ ಹಿಂದೆ ಪಕ್ಕದಮನೆಯ ಮಹಿಳೆಯೊಬ್ಬರು ಕೂಡ ಜ್ವರದ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಅತ್ತೆಇತ್ತೀಚೆಗೆ ಕಾಲು ಜಾರಿ ಗಂಭೀರ ಗಾಯಗೊಂಡಿದ್ದರು.
ಮೃತ ಮಹಿಳೆಯ ಪುತ್ರ ಮಾ.16ರಂದು ದುಬೈನಿಂದ ಆಗಮಿಸಿದ್ದು, ಮೃತ ಮಹಿಳೆಯ ಪತಿ ಹಾಗೂ ಮಕ್ಕಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಪೊಲೀಸರು ಯಾರು ಕೂಡ ಮನೆಯಿಂದ ಹೊರಬರಬೇಡಿ ಎಂದು ಅನೌನ್ಸ್ ಮಾಡಲಾರಂಭಿಸಿದ್ದಾರೆ. ಕೊರೋನಾ ಪಾಸಿಟಿವ್ ಕಂಡುಬಂದ ಬಂಟ್ವಾಳದ ಕಸ್ಬಾ ಗ್ರಾಮ ಕೂಡ ಸಂಪೂರ್ಣ ಲಾಕ್ಡೌನ್ ಗೆ ಒಳಪಟ್ಟಿದೆ.
Click this button or press Ctrl+G to toggle between Kannada and English