ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

4:05 PM, Tuesday, May 5th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

durga balagokulaಮಂಗಳೂರು : ಕರ್ನಾಟಕ ಕೇರಳ ಗಡಿಪ್ರದೇಶದ ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಸಮಾಜ ಸೇವಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟು ಅಲ್ಲಿನ ಹಲವಾರು ಮಕ್ಕಳ ಹಾಗೂ ಹೆತ್ತವರ ಪ್ರೀತಿಗೆ ಪಾತ್ರರಾದರು.

ಕೊರೋನಾ ಲಾಕ್‌ಡೌನ್ ನಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಹಳ್ಳಿ ಪ್ರದೇಶದ ಕೂಲಿಮಾಡಿ ಜೀವನ ನಡೆಸುವ ಮತ್ತು ಮಧ್ಯಮವರ್ಗದ ಜನರ ಸಂಕಷ್ಟ ಹೇಳತೀರದು. ಇದನ್ನು ಮನಗಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಲಾಕ್‌ಡೌನ್ ಆರಂಭದ ದಿನಗಳಿಂದಲೇ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಬಡವರಿಗೆ ಆಹಾರಕಿಟ್ ಒದಗಿಸಿದವರಲ್ಲಿ ಮೊದಲಿಗರು.

ಶ್ರೀ ದುರ್ಗಾ ಬಾಲಗೋಕುಲದ ಪುಟ್ಟ ಮಕ್ಕಳಿಗೂ ಕೆ.ರವೀಂದ್ರ ಶೆಟ್ಟಿಯವರಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಮೂರು ವರ್ಷದ ಹಿಂದೆ ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮೇಲೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಗೇ ಈ ಬಾರಿಯ ಕೊರೋನಾ ಲಾಕ್‌ಡೌನ್ ಪರಿಸ್ಥಿತಿಯನ್ನು ಅವಲೋಕಿಸಿ ಶ್ರೀ ದುರ್ಗಾ ಬಾಲಗೋಕುಲದ ಪುಟಾಣಿಗಳ ಸುಮಾರು ಇಪ್ಪತ್ತೈದು ಕುಟುಂಬಗಳಿಗೆ ಅಕ್ಕಿ ಹಾಗೂ ಆಹಾರದ ಕಿಟ್ ಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

durga balagokulaಕೆ.ರವೀಂದ್ರ ಶೆಟ್ಟಿಯವರದೊಂದು ವಿಶೇಷ ಗುಣವೆಂದರೆ ಅವರು ಮಾಡುವ ಸಮಾಜ ಸೇವೆಗೆ ಪ್ರತಿಫಲ ಅಪೇಕ್ಷಿಸಿದವರಲ್ಲ. ಕೇವಲ ಒಂದು ಫೋನ್ ಕರೆಗೆ ಸ್ಪಂದಿಸುವ ಸರಳಗುಣ, ಈ ಬಾರಿಯ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಮನೆಗೆ ಸಂಪರ್ಕಿಸಿ ತಾನೇ ಆಹಾರದ ಕಿಟ್ ಗಳನ್ನು ಅರ್ಹ ಕುಟುಂಗಳಿಗೆ ತಲುಪಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಸಂಘ ಸಂಸ್ಥೆಗಳಿಗೂ ಆಹಾರದ ಕಿಟ್ ಗಳನ್ನು ಒದಗಿಸಿ ಕೊಟ್ಟಿದ್ದಾರೆ. ಬೆಲ್ಮದ ವೃದ್ದ ಮಹಿಳಾ ಸೇವಾಶ್ರಮಕ್ಕೆ ಸುಮಾರು ಒಂದು ತಿಂಗಳಿಗಾಗುವಷ್ಟು ಪಡಿತರವನ್ನು ಖರೀದಿಸಿ ತಲುಪಿಸಿ ಕೊಟ್ಟಿದ್ದಾರೆ.

ಕೆ.ರವೀಂದ್ರ ಶೆಟ್ಟಿ ಅವರ ಸಮಾಜ ಸೇವೆಗೆ ಶ್ರೀ ದುರ್ಗಾ ಬಾಲಗೋಕುಲದ ಪುಟಾಣಿಗಳಲ್ಲದೆ ಉಪಸ್ಥಿತರಿದ್ದ ಗೋವಿಂದ ಗುರುಸ್ವಾಮಿ, ಲೀಲಾವತಿ ಟೀಚರ್, ಹರೀಶ್ ಕನ್ನಿಗುಳಿ, ಪುರುಷೋತ್ತಮ ತಲಪಾಡಿ, ಜಯಪ್ರಕಾಶ್ ಶೆಟ್ಟಿ ತೌಡುಗೋಳಿ ಮೊದಲಾದವರು ಶುಭಾಶಯಗಳನ್ನು ತಿಳಿಸಿದ್ದಾರೆ.

durga balagokula

durga balagokula

Durga1

durga2

durga3

durga4

durga5

durga6

durga7

durga8


durga12

durga13

durga14

durga15

durga16

durga17

durga18

durga19

durga20

durga21

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English