ಲಾಕ್ ಡೌನ್ : ದುಬೈಯಲ್ಲಿ ಉಳಿದಿರುವ ಕರಾವಳಿಗರ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ

10:21 PM, Friday, May 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Air-Indiaಮಂಗಳೂರು: ಲಾಕ್ ಡೌನ್ ನಿಂದ ದುಬೈಯಲ್ಲಿ ಉಳಿದಿರುವ ಕರಾವಳಿಗರನ್ನು ಹೊತ್ತ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ ಬರಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

ದುಬೈನಿಂದ ಮಂಗಳೂರಿಗೆ ಮೇ 12 ರಂದು ಮೊದಲ ವಿಮಾನ ತಲುಪಬೇಕಿತ್ತು, ಅದನ್ನು ಈಗ ಮೇ 14 ಕ್ಕೆ ಮರು ನಿಗದಿಪಡಿಸಲಾಗಿದೆ.

ಯುಎಇ ಸಮಯ 16.10 ಕ್ಕೆ ಏರ್ ಇಂಡಿಯಾ ವಿಮಾನ ದುಬೈನಿಂದ ಮೇ 14 ರಂದು ಹೊರಟು ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ.

ವಿಮಾನದಲ್ಲಿ ಪ್ರಯಾಣಿಕರನ್ನು ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆಯೇ ಎಂದು ಖಚಿತಪಡಿಸಲಾಗಿಲ್ಲ.

ಗರ್ಭಿಣಿಯರಿಗೆ ಮತ್ತು ವೈದ್ಯಕೀಯ ತುರ್ತುಸ್ಥಿತಿ ಇರುವವರಿಗೆ ಮೊದಲಿಗೆ ಆದ್ಯತೆ ನೀಡಲಾಗುವುದು. ಮಂಗಳೂರಿನ ಪ್ರಯಾಣಿಕರನ್ನು ಮಂಗಳೂರಿನಲ್ಲಿ ಕೋರೆಂಟೈನ್ ಮಾಡಲಾಗುವುದು. ಮತ್ತು ಇತರ ಜಿಲ್ಲೆಗಳಾದ ಉಡುಪಿ ಮತ್ತು ಕಾಸರ್‌ಗೋಡ್‌ನ ಪ್ರಯಾಣಿಕರನ್ನು ಆಯಾ ಸ್ಥಳಗಳಿಗೆ ಕಳುಹಿಸಲಾಗುವುದು, ಅಲ್ಲಿ ಅವರನ್ನು ಕೋರೆಂಟೈನ್ ಮಾಡಲಾಗುವುದು ಎಂದು ತಿಳಿದುಬಂದಿದೆ.

ವಿದೇಶಗಳಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಹೋಟೆಲ್‌ಗಳು, ಇತರ ಸಂಸ್ಥೆಗಳನ್ನು ಕೋರೆಂಟೈನ್ ಸೌಲಭ್ಯವಾಗಿ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English