ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಬಟ್ಟೆ ಅಂಗಡಿ ತೆರೆಯದಿರಲು ಮನವಿ

6:51 PM, Saturday, May 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

cloth storeಮಂಗಳೂರು  : ಬಟ್ಟೆ ಅಂಗಡಿಗಳನ್ನು ತೆರೆಯಲು ಸರಕಾರ ಅವಕಾಶ ಕೊಟ್ಟಿರುವುದರಿಂದ ತೆರೆಯವುದೂ ಬಿಡುವುದೂ ಆಯಾಯ ಅಂಗಡಿಯರ ವಿವೇಚನೆಗೆ ಬಿಟ್ಟ ವಿಚಾರ. ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಹೆಚ್ಚಿನವರು ತಮ್ಮ ಅಂಗಡಿಗಳನ್ನು ಸ್ವ ಇಚ್ಛೆಯಿಂದ ಬಂದು ಮಾಡಲು ತೀರ್ಮಾನಿಸಿರುವುದು ಶ್ಲಾಘನೀಯ. ಕೆ.ಟಿ.ಎ.ಯೂತ್ ಫಾರಂ ಎಂಬ ಹೆಸರಿನ ವರ್ತಕರ ಸಂಘವು ತಮ್ಮ ಅಂಗಡಿಗಳನ್ನು ತೆರೆಯದೇ ಇರಲು ತೀರ್ಮಾನಿಸಿರುವುದು ಅಭಿನಂದನೀಯ. ಯಾಕೆಂದರೆ ಒಂದು ಕಡೆ ಕೊರೋನ ಸೋಂಕಿನ ಭೀತಿ, ಇನ್ನೊಂದು ಕಡೆ ಈದ್ ಹಬ್ಬದ ಖರೀದಿಯ ವಿಚಾರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಸ್ವಾರ್ಥಗಳನ್ನೆಲ್ಲಾ ಬಿಟ್ಟು ನಾಡಿನ ಸಂರಕ್ಷಣೆಗಾಗಿ ಮತ್ತು ಸಮುದಾಯದ ಘನತೆಗಾಗಿ ನಮ್ಮ ಸಂಭ್ರಮವನ್ನು ತ್ಯಾಗ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೆಚ್ಚಿನ ವ್ಯಾಪಾರಸ್ಥರು ಅಂಗಡಿಗಳನ್ನು ಬಂದು ಮಾಡಿರುವುದು ಅಲ್ಲಾಹನು ಮೆಚ್ಚುವಂತಹ ಪುಣ್ಯ ಕಾರ್ಯವಾಗಿದೆ.

ಈ ಮಧ್ಯೆ ಮುಸ್ಲಿಮರು ಯಾರಾದರೂ ತಮ್ಮ ಅಂಗಡಿಗಳನ್ನು ತೆರೆದರೆ ವಿಷಯದ ಗಂಭೀರತೆಯನ್ನು ಅವರಿಗೆ ಮನವರಿಕೆ ಮಾಡಿ ಅಂಗಡಿಗಳನ್ನು ತೆರೆಯದಂತೆ ಅವರ ಮನವೊಳಿಸಲು ಪ್ರಯತ್ನಿಸಿರಿ. ಬಲವಂತದಿಂದ ಬಂದು ಮಾಡಿಸುವುದು ಬೇಡ. ನಿಮ್ಮ ಮನವಿಗೂ ಅವರು ಸ್ಪಂದಿಸದಿದ್ದರೆ ಆಯಾಯ ಜಮಾತ್ ನವರ ಗಮನಕ್ಕೆ ತಂದು ಬಂದು ಮಾಡಿಸುವಂತೆ ವಿನಂತಿಸಿರಿ.

ಬಟ್ಟೆ ಅಂಗಡಿಗಳನ್ನು ತೆರೆಯುವ ವಿಚಾರದಲ್ಲಿ ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ಗಳಲ್ಲಿ ವ್ಯಯಕ್ತಿಕ ನಿಂದನೆ ಮಾಡುವುದಾಗಲೀ ಅಥವಾ ವಿವಿಧ ವ್ಯಕ್ತಿಗಳು ಪ್ರತಿನಿಧಿಸುವ ಸಂಘಟನೆಗಳನ್ನು ನಿಂದನೆ ಮಾಡುವುದಾಗಲೀ ಬೇಡ. ಅಭಿಪ್ರಾಯ ವ್ಯತ್ಯಾಸಗಳು ಸಹಜ. ದಯವಿಟ್ಟು ಈ ಕ್ಷುಲ್ಲಕ ವಿಚಾರಗಳಿಗಾಗಿ ಸಮುದಾಯದೊಳಗೆ ಬಿಕ್ಕಟ್ಟು ತರುವ ಕೆಲಸವನ್ನು ಯಾರೂ ಕೂಡಾ ಮಾಡಬೇಡಿ. ನಾವೆಲ್ಲರೂ ಒಗ್ಗಟ್ಟಾಗಿ ಕೊರೋನರದ ವಿರುದ್ಧ ಹೋರಾಡುವ.

ಕೊರೋನ ಸೋಂಕು ಪ್ರತಿದಿನವೂ ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪ್ರತಿಯೊಂದು ಜಮಾತ್ ಸಮಿತಿಯ ವತಿಯಿಂದ ಈ ಬಾರಿ ಈದ್ ಹಬ್ಬದ ಪ್ರಯುಕ್ತ ಯಾರೂ ಕೂಡಾ ಖರೀದಿ ಮಾಡದಂತೆ, ಅಂಗಡಿಗಳಲ್ಲಿ ಮುಗಿಬೀಳದಂತೆ ಎಚ್ಚರಿಕೆ ನೀಡುವುದು ಅತೀ ಅಗತ್ಯವಾಗಿದೆ.

ನಾವೆಲ್ಲರೂ ಒಂದಾಗಿ ಮುಂದೆ ಆಗಬಹುದಾದಂತಹ ಅನಾಹುತಗಳನ್ನು ತಪ್ಪಿಸಲು ಪ್ರಯತ್ನಿಸೋಣ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ  ಮಾಜಿ ಮೇಯರ್ ಅಧ್ಯಕ್ಷ ಕೆ.ಅಶ್ರಫ್ ವಿನಂತಿಸಿದ್ದಾರೆ.

1 ಪ್ರತಿಕ್ರಿಯೆ - ಶೀರ್ಷಿಕೆ - ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಬಟ್ಟೆ ಅಂಗಡಿ ತೆರೆಯದಿರಲು ಮನವಿ

  1. ಮೊಹಮ್ಮದ್ ಹನೀಫ್.ಯು, ಉಳ್ಳಾಲ

    ಉತ್ತಮ ವರದಿಗಾರಿಕೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English