ಒಕ್ಕಲಿಗರ ಸಂಘ ಮಹಾರಾಷ್ಟ್ರದ ವತಿಯಿಂದ ಮುಂಬಯಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ

9:52 PM, Monday, May 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

okkaliga sangha mumbai ಮುಂಬಯಿ : ಲಾಕ್ ಡೌನ್ ನಿಂದಾಗಿ ಈಗಾಗಲೇ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದು, ಒಕ್ಕಲಿಗರ ಸಂಘ ಮಹಾರಾಷ್ಟ್ರವು ಅಧ್ಯಕ್ಷರಾದ ಜಿತೇಂದ್ರ ಗೌಡ ಇವರ ನೇತೃತ್ವದಲ್ಲಿ ಸಮಾಜ ಬಾಂಧವರೂ ಸೇರಿ 610 ಕ್ಕೂ ಅಧಿಕ ತುಳು ಕನ್ನಡಿಗ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿಗಳ ಕಿಟ್ ವಿತರಿಸಿ ಸಹಕರಿಸಿದೆ.

ನಮ್ಮ ಸಮಾಜದಲ್ಲಿ ಅನೇಕರು ಹೋಟೇಲು ಕಾರ್ಮಿಕರು, ಸಣ್ಣ ವ್ಯಾಪಾರಿಗಳಾಗಿದ್ದು ದೈನಂದಿನ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದಿಸುತ್ತಿದ್ದು ಲಾಕ್ ಡೌನ್ ನಿಂದಾಗಿ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಲ್ಲೂ ಹೆಚ್ಚಿನವರು ಮುಂಬಯಿ, ನವಿಮುಂಬಯಿ, ಠಾಣೆ ಹಾಗೂ ಪಾಲ್ಘರ್ ಜಿಲ್ಲೆಯಲ್ಲಿದ್ದು ಅವರವರ ಪರಿಸರದಲ್ಲಿರುವ ನಮ್ಮ ಸಂಘದ ಪ್ರಮುಖರು ಇವರನ್ನು ಸಂಪರ್ಕಿಸಿ ಕಿಟ್ ನ್ನು ವಿತರಿಸಿರುವರು. ಈಗಾಗಲೇ ಸಂಘದ ವತಿಯಿಂದ ಇದಕ್ಕೆ ಖರ್ಚು ಮಾಡಲಾಗಿದ್ದು ಈ ತನಕ ಯಾರಿಂದಲೂ ದೇಣಿಗೆ ಪಡೆಯಲಿಲ್ಲ ಹಾಗೂ ಈ ಬಗ್ಗೆ ಮುಂದೆ ಚಿಂತಿಸಲಾಗುವುದು ಎಂದು ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷರಾದ ಜಿತೇಂದ್ರ ಗೌಡ ತಿಳಿಸಿದ್ದಾರೆ.

ಈ ಮಧ್ಯೆ ಕೆಲವರು ಅತೀ ಅಗತ್ಯವಾಗಿ ಊರಿಗೆ ತೆರಳಲಿದ್ದು ನಾವು ಸ್ಥಳೀಯ ಎಂ.ಎಸ್.ಆರ್. ಟಿ.ಸಿ. ಅಧಿಕಾರಿಗಳನ್ನು ಸಂಪರ್ಕಿಸಿರುವೆವು ಅದಲ್ಲದೆ ಹುಬ್ಬಳ್ಳಿಯಿಂದ ಇಲ್ಲಿಗೆ ಬಸ್ಸನ್ನು ತರಿಸಿ ಅಗತ್ಯವಿದ್ದವರಿಗೆ ಮಾತ್ರ ಪ್ರಯಾಣಿಸುವ ಅವಕಾಶವನ್ನು ಒದಗಿಸುತ್ತೇವೆ. ಸರಕಾರದ ಆದೇಶದಂತೆ ಸಮಾಜಿಕ ಅಂತರವನ್ನು ಕಾಪಾಡಲು ಎರಡು ಸೀಟಲ್ಲಿ ಒಬ್ಬರಂತೆ ಬಸ್ಸಿನಲ್ಲಿರುವ ಸೀಟಿನ ಸಂಖ್ಯೆಗಿಂತ ಬಹಳ ಕಡೆಮೆ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಅಲ್ಲದೆ ಮುಂಬಯಿಯಿಂದ ಊರಿಗೆ ಹೋಗುವ ಬಸ್ಸು ಹಿಂತಿರುಗುವಾಗ ಖಾಲಿಯಾಗಿ ಬರಲಿದ್ದು ಪ್ರತಿಯೊಬ್ಬ ಪ್ರಯಾಣಿಕರಿಗೆ ಇಮ್ಮಡಿಗಿಂತಲೂ ಹೆಚ್ಚು ಮೊತ್ತ ನೀಡಿ ಪ್ರಯಾಣಿಸಬೇಕಾಗಿದೆ. ಇದರಲ್ಲಿ ಯಾವುದೇ ಏಜಂಟ್ ಮಧ್ಯಸ್ಥಿಕೆ ಇಲ್ಲದಿದ್ದು ಯಾರಿಗೂ ಇದರಿಂದ ಯಾವುದೇ ರೀತಿಯಲ್ಲಿ ಲಾಭವಿಲ್ಲ ಹೊರತು ಇದು ಒಕ್ಕಲಿಗರ ಸಂಘ ವು ಸಮಾಜ ಬಾಂಧವರಿಗೆ ಹಾಗೂ ಇಲ್ಲಿರುವ ಅಸಾಯಕ ಕನ್ನಡಿಗರಿಗೆ ಮಾಡುತ್ತಿರುವ ಸೇವೆ ಎಂದು ಅಧ್ಯಕ್ಷರು ಸ್ಪಷ್ಟೀಕರಣ ನೀಡಿದ್ದಾರೆ.

okkaliga sangha mumbai ಈ ಎಲ್ಲ ಕಾರ್ಯದ ಬಗ್ಗೆ ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಯ ನಾಲ್ವರು ಶಾಸಕ ರು ಹಾಗೂ ಸಚಿವರಾದ ಡಾ. ಕೆ. ಸಿ. ನಾರಾಯಣ ಗೌಡ, ಶಾಸಕರುಗಳಾದ ಬಾಲಕೃಷ್ಣ ಗೌಡ, ಸಿ.ಎಸ್. ಪುತ್ರಾಜನ, ಇವರಲ್ಲಿ ನಾವು ಆಗಾಗ ಸಂಪರ್ಕದಲ್ಲಿದ್ದೇವೆ. ನಾವು ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯ ಮಂತ್ರಿಗಳಿಗೆ ನಮ್ಮವರ ಸಮಸ್ಯೆ ಬಗ್ಗೆ ಪತ್ರವ್ಯವಹಾರ ಮಾಡಿರುವೆವು. ಮುಂಬಯಿಯ ಸಂಸದರಾದ ಅನಿಲ್ ದೇಸಾಯಿ ಅಲ್ಲದೆ ಸಚಿನ್ ಅಹಿರೆ, ರವಿ ದೊಡ್ಡಿ ಹೀಗೇ ಅನೇಕ ಗಣ್ಯರು ನಮಗೆ ಸಹಕರಿಸುತ್ತಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿಎ ಮಂಜುನಾಥ ಗೌಡ ತಿಳಿಸಿದ್ದಾರೆ. ಸಂಘದ ಕೋಶಾಧಿಕಾರಿ ದೀಪಕ್ ಆರ್ ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕುಮಾರ್ ಆರ್ ಗೌಡ, ಚೌಡಪ್ಪ ಗೌಡ, ಸುನಿಲ್ ಬಿ ಗೌಡ, ಯೋಗೇಶ್ವರ್ ಗೌಡ, ಮಂಜ ಗೌಡ, ರಮೇಶ್ ಗೌಡ, ನಟೇಷ್ ಗೌಡ, ಮುತ್ತಣ್ಣ ಗೌಡ ಅಲ್ಲದೆ ಆಹಾರ ಸಾಮಾಗ್ರಿಗಳ ವಿತರಣೆಯಲ್ಲಿ ಸಂದೀಪ್ ಗೌಡ, ಸಂದೀಪ್ ಪಸಿ, ರಮೇಶ್ ಗೌಡ, ಚೇತು ಗೌಡ, ಸತೀಶ್ ಗೌಡ, ಮಂಜು ಗೌಡ, ಭಾರತಿ ಗೌಡ, ಮಂಜಣ್ಣ ಗೌಡ, ಕೃಷ್ಣ ಗೌಡ ಮತ್ತು ಇತರ ಅನೇಕ ಸದಸ್ಯರುಗಳು ಸಹಕರಿಸಿದ್ದಾರೆ. ಬಿಡುವಿಲ್ಲದೆ ತಡರಾತ್ರಿ ತನಕ ಈ ಸೇವೆಯಲ್ಲಿ ನಿರತರಾದ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ಈ ಎಲ್ಲಾ ಕೆಲಸಗಳನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷರಾದ ಜಿತೇಂದ್ರ ಗೌಡ ಇವರು ಕೃತಜ್ನತೆಯನ್ನು ಸಲ್ಲಿಸಿದ್ದಾರೆ.

ವರದಿ : ಈಶ್ವರ ಎಂ. ಐಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English