ಮಂಗಳೂರು : ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಮೊದಲ ವಿಮಾನ ಮಂಗಳವಾರ ರಾತ್ರಿ ಬಂದಿಳಿಯಿತು.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ರಾತ್ರಿ 10.10 ಕ್ಕೆ ಲ್ಯಾಂಡ್ ಆಯಿತು. 176 ಮಂದಿಯಲ್ಲಿ 95 ಪುರುಷರು, 81 ಮಹಿಳೆಯರು, 12 ಮೆಡಿಕಲ್ ಎಮರ್ಜನ್ಸಿ, 38 ಬಾಣಂತಿಯರು ಪ್ರಯಾಣಿಸಿದ್ದರು. ಜೊತೆಗೆ ಕೆಲಸಕಳಕೊಂಡವರು, ವೀಸಾ ಮುಗಿದವರು, ಮನೆಯವರಿಗೆ ಎಮರ್ಜೆನ್ಸಿ ಚಿಕಿತ್ಸೆ, ಲಾಕ್ ಡೌನ್ ನಿಂದ ಸಿಕ್ಕಿ ಹಾಕಿ ಕೊಂಡವರು ಇದ್ದರು.
ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು.
ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು.
ವಿಮಾನ ಆಗಮನ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
Click this button or press Ctrl+G to toggle between Kannada and English