ಕೋವಿಡ್ ಸೋಂಕಿಗೆ ಬೋಳೂರಿನ 58 ವರ್ಷದ ಮಹಿಳೆ ಮೃತ್ಯು

7:55 PM, Wednesday, May 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

boloor-deathಮಂಗಳೂರು : ಕೋವಿಡ್ ಸೋಂಕಿಗೆ ತುತ್ತಾಗಿದ್ದ  ಬೋಳೂರಿನ 58 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳು ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಸೋಂಕು ತಗಳಿತ್ತು ನಂತರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು ಅದರ ವರದಿ ಏಪ್ರಿಲ್ 3೦ರಂದು ಬಂದಿದ್ದು ಅದರಲ್ಲಿ ಕೋವಿಡ್ ದೃಢಪಟ್ಟಿತ್ತು ನಂತರ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ, ಸ್ವೀಪರ್ ಆಗಿ ಕೆಲಸ ಮಾಡುವ ರೋಗಿಯ ಸಂಖ್ಯೆ 501 ರೊಂದಿಗೆ ಮೃತ  ಮಹಿಳೆ ಸಂಪರ್ಕಕ್ಕೆ ಬಂದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಕೋವಿಡ್  -19 ಪ್ರಕರಣಗಳ ಸಂಖ್ಯೆ ಈಗ 33 ಆಗಿದೆ. ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 14 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು 16 ಸಕ್ರಿಯ ಕರೋನ ವೈರಸ್ ಪ್ರಕರಣಗಗಳಿವೆ. 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English