ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿ ಜನತೆಯ ಹಸಿವು ನೀಗಿಸುವ ಹೋಟೆಲು ಉದ್ಯಮಿ, ಇನ್ನಂಜೆ ಶಶಿಧರ ಕೆ. ಶೆಟ್ಟಿ

11:42 AM, Sunday, May 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shashidhara shettyಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ ನಿಂದಾಗಿ ಮುಂಬಯಿಯ ತನ್ನ ಪರಿಸರದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗಬಹುದೆಂದು ಮೊದಲೇ ಅರಿತು ಆಗಲೇ ಊರಲ್ಲಿ ಇದ್ದುಕೊಂಡೇ ಹತ್ತು ಲಕ್ಷ ರೂಪಾಯಿ ಮೊತ್ತದ ಉತ್ತಮ ದರ್ಜೆಯ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದು, ಜನರಲ್ಲಿ ಇದ್ದ ಆಹಾರ ಸಾಮಾಗ್ರಿಗಳು ಮುಗಿದ ಕೂಡಲೇ ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ, ಶ್ರೀದೇವಿ ಯಕ್ಷಕಲಾ ನಿಲಯ, ತುಳು ಕೂಟ ಫೌಂಡೇಶನ್ ಇದರ ಮೂಲಕ ನಯ್ಗಾಂವ್ ನಿಂದ ಡಹಾಣು ವರೆಗಿನ ಮುಖ್ಯವಾಗಿ ಲಾಕ್ ಡೌನ್ ನಿಂದ ತೊಂದರೆಗೀಡಾದ ತುಳು ಕನ್ನಡಿಗರಿಗೆ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸುವ ಕಾರ್ಯವನ್ನು ಆರಂಭಿಸಿದರು.

shashidhara shettyಕರೋನ ಮಹಾಮಾರಿಯಿಂದ ಸಂಪೂರ್ಣ ಜಗತ್ತು ತತ್ತರಿಸಿ ಹೋಗಿದೆ. ಅದರಲ್ಲಿ ನಮ್ಮ ಭಾರತವೂ ಹೊರತು ಪಡಿಸಿಲ್ಲ. ಸರ್ಕಾರ ತೆಗೆದುಕೊಂಡ ಲಾಕ್ ಡೌನ್ ನಿರ್ಧಾರಗಳು ನಮಗೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನು ಎದುರಿಸುವಂತಾಗಿದೆ. ಅಲ್ಲದೇ ಈ ಲಾಕ್ ಡೌನ್ ಮೇ 3 ರಿಂದ ಮೇ 17 ತಾರೀಕಿನವರೆಗೆ ವಿಸ್ತರಿಸಿದ್ದು , ಮುಂಬಯಿ ಮಹಾನಗರದ ತುಳುಕನ್ನಡಿಗರ ಸಂಕಷ್ಟ ಪರಿಸ್ಥಿತಿಯನ್ನು ಮನಗಂಡು ನಮ್ಮ ಪರಿಸರದಲ್ಲಿ ಸಂಕಷ್ಟದಲ್ಲಿರುವ ತುಳು ಕನ್ನಡಿಗರಿಗೆ ಸಹಾಯ ಮಾಡಲು ಮುಂದಾದ ಪರಿಸರದ ಸಂಸ್ಥೆಗಳಾದ ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ, ತುಳು ಕೂಟ ಫೌಂಡೇಶನ್, ನಲಸೋಪಾರ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯದ ಪದಾಧಿಕಾರಿಗಳು, ನಯ್ಗಾಂವ್ ನಿಂದ ಡಹಾಣು ವರೆಗಿನ ಸಂಕಷ್ಟದಲ್ಲಿ ಇರುವ ತುಳು ಕನ್ನಡಿಗರಿಗೆ ಸಹಾಯ ಮಾಡಲಾಗಿದೆ.

ಈಗಾಗಲೇ 1285 ಕ್ಕಿಂತಲೂ ಅಧಿಕ ಕುಟುಂಬಗಳಿಗೆ 12 ಲಕ್ಷ ರೂಪಾಯಿ ಹೆಚ್ಚಿನ ಮೊತ್ತದ ಕಿಟ್ಟನ್ನು ವಿತರಿಸಲಾಗಿದ್ದು ತುಳು ಕನ್ನಡಿಗರಲ್ಲದೆ ಅತ್ಯಂತ ಕಷ್ಟದಲ್ಲಿರುವ ಇತರ ಸಮುದಾಯದ ಕೆಲವರಿಗೆ ವಿತರಿಸಲಾಗಿದೆ. ಕೆಲವರಿಗೆ ನಗದು ಹಣವನ್ನೂ ನೀಡಿ ಸಹಕರಿಸಲಾಗಿದೆ ಅದೂ ಅಲ್ಲದೆ ಯವುದೇ ಪ್ರಚಾರವನ್ನು ಬಯಸದೇ ಊರಲ್ಲಿ ಕೂಡಾ ಈ ಸೇವೆಯನ್ನು ಮಾಡುತ್ತಿರುವೆವು ಎಂದು ಊರಲ್ಲಿರುವ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಮಾಧ್ಯಮಗಳಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ನಯ್ಗಾಂವ್ ನಿಂದ ಡಹಾಣು ವರೆಗಿನ ತುಳು ಕನ್ನಡಿಗರಿಗೆ ಕಿಟ್ ನ್ನು ವಿತರಿಸುವ ಈ ಸೇವೆಯಲ್ಲಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರ ಗೈರುಹಾಜರಿಯಲ್ಲಿ ತುಳು ಕೂಟ ಫೌಂಡೇಶನ್, ನಲಸೋಪಾರ ಹಾಗೂ ಶ್ರೀದೇವಿ ಯಕ್ಷಕಲಾ ನಿಲಯ, ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ ಯ ಪರವಾಗಿ ಜಯಂತ ಆರ್ ಪಕ್ಕಳ (ಕಾರ್ಯಾದ್ಯಕ್ಷ – ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ) ಕಣಂಜಾರು ಪ್ರವೀಣ್ ಶೆಟ್ಟಿ, ಪಳ್ಳಿ ಜಗನ್ನಾಥ ಡಿ. ಶೆಟ್ಟಿ, ಜಯ ಅಶೋಕ್ ಶೆಟ್ಟಿ ನಯ್ಗಾಂವ್- ವಸಯಿ, ನೀರೆ ಸುಪ್ರೀತ್ ಶೆಟ್ಟಿ ನಲಸೋಪಾರ, ಉಮಾ ಸತೀಶ್ ಶೆಟ್ಟಿ ನಲಸೋಪಾರ, ಲ! ಕೃಷ್ಣಯ್ಯ ಎ ಹೆಗ್ಡೆ ಅಡಂದಾಲು ವಿರಾರ್, ಯಶೋದ ಎಸ್ ಕೋಟ್ಯಾನ್ , ಮಲ್ಲಿಕ ಆರ್ ಪೂಜಾರಿ , ಕಾಪು ರಮೇಶ್ ವಿ ಶೆಟ್ಟಿ ಕಾಪು , ಪಳ್ಳಿ ಜಗನ್ನಾಥ ಡಿ ಶೆಟ್ಟಿ ಹೀಗೇ ಅನೇಕರು ಸಹಕರಿಸಿದ್ದಾರೆ.

ಕೊರೋನಾ ಮಹಾಮಾರಿಯು ಇಡೀ ಜಗತ್ತನ್ನೇ ಕತ್ತಲಾಗಿರಿಸಿದೆ. ಮುಂಬಯಿಯಲ್ಲಿ ಅದರಲ್ಲೂ ಗ್ರಾಮೀನ ಪ್ರದೇಶವಾದ ವಸಾಯಿ ತಾಲೂಕು ನಲ್ಲಿ ಹೋಟೇಲು ಅಸೋಷಿಯೇಶನ್ ಆಗಲಿ ಹೋಟೇಲು ಉದ್ಯಮವಾಗಲಿ ಹಾಗೂ ಅನೇಕ ಸಮಾಜ ಸಂಘಟನೆಗಳು ಉತ್ತಮ ಕೆಲಸವನ್ನು ಮಾಡುತ್ತಿದೆ. ತನ್ನ ಬದುಕಲ್ಲಿ ಬಹಳ ಕಷ್ಟ ಸುಖಗಳನ್ನು ಅನುಭವಿಸಿದಂತಹ ಶಶಿಧರ ಶೆಟ್ಟಿ ಯವರು ತಾನೇ ಸಂಪಾದಿಸದ ಲಕ್ಷಾಂತರ ಹಣವನ್ನು ಸಮಾಜಕ್ಕೆ ಈ ಸಮಯದಲ್ಲಿ ನೀಡುತ್ತಿರುವುದು ಉತ್ತಮ ಕೆಲಸ. ಇದು ತನ್ನ ಬಾಲ್ಯದಿಂದಲೇ ಇವರು ಅನುಸರಿಸಿಕೊಂಡು ಬಂದದ್ದು. ಬಂಟರ ಸಂಘದ ಸ್ಥಳೀಯ ಸಮಿತಿಗೆ ಹಾಗೂ ತುಳು ಕನ್ನಡ ಸಂಘಟನೆಗಳಿಗೆ ಇವರ ಕೊಡುಗೆ ಅಪಾರ. ಇಂದಿನ ಪರಿಸ್ಥಿತಿಯಲ್ಲಿ ಜಾತಿಯನ್ನು ಮೀರಿ ಅವರು ಮಾಡುತ್ತಿರುವ ಕಾರ್ಯ ಸ್ಲಾಘನೀಯ. ಅವರೊಂದಿಗೆ ನಾವೂ ಇದ್ದೇವೆ. ನಾನೂ ಕೂಡ ಅವರ ಈ ಕೆಲಸಕ್ಕೆ ನನ್ನ ವೈಯಕ್ತಿಕ 50 ಸಾವಿರ ಮೊತ್ತವನ್ನು ನೀಡಿರುವೆನು. ಇಂತಹ ಕೆಲಸಗಳು ನಿರಂತರವಾಗಿ ನಡೆಯಲಿ. ತುಳು ಕನ್ನಡಿಗರಿಗೆ ಸ್ಪಂದಿಸುವ ಇಂತಹ ಕೆಲಸ ಸದಾ ನಡೆಯಲಿ.

shashidhara shetty

ಐಕಳ ಹರೀಶ್ ಶೆಟ್ಟಿ- ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು

ಬಂಟರ ಸಂಘ ಮತ್ತು ನಮ್ಮ ಪ್ರಾದೇಶಿಕ ಸಮಿತಿಗಳು ಸಮಾಜ ಬಾಂಧವರಿಗೆ ಹಾಗೂ ಇತರ ಸಮಾಜದವರಿಗೆ ಈ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಈ ವಸಾಯಿ ತಾಲೂಕಿನಲ್ಲಿ ಶಶಿಧರ ಶೆಟ್ಟಿಯವರು ಬಂಟರ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಮೂಲಕ ಸಹಕರಿಸಿದರಲ್ಲದೆ ತಾನು ವ್ಯಯಕ್ತಿಕವಾಗಿ ಲಕ್ಷಾಂತರ ರೂಪಾಯಿ ಯ ಸಹಾಯ ನೀಡುತ್ತಿರುವರು ಅಲ್ಲದೆ ಊರಲ್ಲಿ ಇದ್ದರೂ ಕೂಡ ಅವರು ಬೆಳೆದು ನಿಂತಿರುವ ವಸಾಯಿ ಪರಿಸರದ ಜನರಿಗೆ ಆಶ್ರಯ ನೀಡುತ್ತಿರುವರು. ಇದು ಬಂಟರ ಸಮಾಜಕ್ಕೂ ಕೀರ್ತಿ ತಂದಿದೆ.

ಪದ್ಮನಾಭ ಪಯ್ಯಡೆ – ಅಧ್ಯಕ್ಷರು, ಬಂಟರ ಸಂಘ, ಮುಂಬಯಿ

ಬಿಲ್ಲವರ ಅಸೋಷೀಯೇಷನ್ ಮತ್ತು ಸ್ಥಳೀಯ ಸಮಿತಿಗಳು ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡುತ್ತಿರುವರು. ನಮ್ಮ ಅತ್ಮೀಯರಾದ ಬಂಟರ ಸಂಘದ ಅತ್ಯುತ್ತಮ ಸಮಾಜ ಸೇವಕರಾದ ವಸಾಯಿ ಪರಿಸರದಲ್ಲಿ ಗುರುತಿಸಿ ಕೊಂಡಿರುವ ಶಶಿಧರ ಶೆಟ್ಟಿಯವರ ಸೇವಾ ಕಾರ್ಯ ಅತೀ ಉತ್ತಮವಾದದು. ಈ ಪರಿಸರದಲ್ಲಿ ಯವುದೇ ಜಾತಿ ಮತ ಕೇಳದೆ ನಿಸ್ವಾರ್ಥ ಸೇವೆ ಮಾಡುತ್ತಿರುವರು. ಇಂಥವರು ಸಮಾಜಲ್ಲಿ ಇನ್ನೂ ಮುಂದೆ ಬರಲಿ. ಯಾರೇ ಆಗಲಿ ಸಮಸ್ಯೆಗೆ ಒಳಗಾದಲ್ಲಿ ಶಶಿಧರ ಶೆಟ್ಟಿಯವರು ಕೂಡಲೇ ಸ್ಪಂದಿಸುವವರು. ಇವರ ಸೇವೆ ಬಹಳ ಅಭಿಮಾನ ತಂದಿದೆ.

ಚಂದ್ರಶೇಖರ ಪೂಜಾರಿ – ಅಧ್ಯಕ್ಷರು, ಬಿಲ್ಲವರ ಅಸೋಶಿಯೇಶನ್ ಮುಂಬಯಿ

ವಸಯಿ ತಾಲೂಕು ಮತ್ತು ಪರಿಸರದಲ್ಲಿ ನಮ್ಮ ಸಮಾಜದ ಅನೇಕ ಬಡ ಕುಟುಂಬದವರು ನೆಲೆಸಿದ್ದು ಶಶಿಧರ ಶೆಟ್ಟಿಯವರು ಈ ಪರಿಸರದಲ್ಲಿ ನಮ್ಮ ಸಮಾಜದವರಿಗೂ ಕೂಡಾ ಬಹಳ ಸಹಕರಿಸಿದ್ದು ಅವರಿಗೆ ಅಭಿನಂದಿಸುತ್ತಿರುವೆನು.

ದೇವದಾಸ ಕುಲಾಲ್ – ಅಧ್ಯಕ್ಷರು, ಕುಲಾಲ ಸಂಘ ಮುಂಬಯಿ

ಮುಂಬಯಿ ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ, ಸಂಘಟಕ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾದ್ಯಕ್ಷ, ಪ್ರಸ್ತುತ ಇದರ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವರು. ಪರಿಸರದ ಹಾಗೂ ಮುಂಬಯಿಯ ಅನೇಕ ತುಳು ಕನ್ನಡಿಗರ ಕಾರ್ಯಕ್ರಮಕ್ಕೆ ಇವರು ನೀಡುತ್ತಿರುವ ದೇಣಿಗೆ ಅಪಾರ. ಶ್ರೀದೇವಿ ಯಕ್ಷಕಲಾ ನಿಲಯದ ಅಧ್ಯಕ್ಷರಾಗಿರುವ ಇವರು ಯಕ್ಷಗಾನ, ನಾಟಕ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಮುಂಬಯಿಯಲ್ಲಿನ ಹೊಟೇಲುಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನವರು ವಸಾಯಿ ವಿರಾರ್ ಪರಿಸರದದವರಾಗಿದ್ದು ಅವರಿಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಹೋಟೇಲು, ಕ್ಯಾಂಟೀನ್ ಕಾರ್ಮಿಕರೇ ಹೆಚ್ಚು – ಪಳ್ಳಿ ಜಗನ್ನಾಥ ಡಿ. ಶೆಟ್ಟಿ

ಪ್ರಾರಂಭದಲ್ಲಿ ಜನರು ಒಬ್ಬೊಬ್ಬರಾಗಿ ಸಹಕರಿಸುತ್ತಿದ್ದು ಪರಿಸ್ಥಿತಿ ಇನ್ನೂ ಹಾಳಾಗಬಹುದೆಂದು ಅರಿತು ಈ ಮೂರು ಸಂಘಟನೆಗಳ ಪ್ರಮುಖರು ಒಂದಾಗಿ, ಹೆಚ್ಚಾಗಿ ಹೋಟೇಲು ಹಾಗೂ ಕ್ಯಾಂಟೀನ್ ಕಾರ್ಮಿಕರು ಇರುವ ಈ ಪ್ರದೇಶದಲ್ಲಿ ಅಗತ್ಯೈರುವ ತುಳು ಕನ್ನಡಿಗರಿಗೆ ಸಂಘಟನೆಯ ಮೂಲಕ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆಸಿದೆವು. ಈ ಕಾರ್ಯದ ರೂವಾರಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರ ಸಹಾಯದಿಂದ ಬಂಟರ ಸಂಘ, ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿ, ಶ್ರೀದೇವಿ ಯಕ್ಷಕಲಾ ನಿಲಯ, ತುಳು ಕೂಟ ಫೌಂಡೇಶನ್ ಗಳ ಮೂಲಕ ನಮ್ಮವರನ್ನು ಸಂಪರ್ಕಿಸಿ ಅವರ ಹೆಸರು, ವಿಳಾಸ ಹಾಗೂ ದೂರವಾಣಿಯನ್ನು ಸಂಗ್ರಹಿಸಿ ಅವರ ಪರಿಸರಕ್ಕೆ ತೆರಳಿ ಸಾಮಾಜಿಕ ಅಂತರವನ್ನು ಕಾಪಾಡಿ ಒಂದು ಕುಟುಂಬಕ್ಕೆ ತಿಂಗಳಿಗೆ ಬೇಕಾದ ಆಹಾರದ ಕಿಟ್ ನ್ನು ಒದಗಿಸಿರುವೆವು ಎಂದು ಎಲ್ಲರನ್ನೂ ಒಂದಾಗಿರಿಸಿ ವಿತರಣೆಯ ಈ ಕಾರ್ಯವನ್ನು ನೆರವೇರಿಸಿದ ಪಳ್ಳಿ ಜಗನ್ನಾಥ ಡಿ. ಶೆಟ್ಟಿ ಇವರು ನುಡಿದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English