ಕಾಪು : ರವಿವಾರ ರಾತ್ರಿ ಸುರಿದ ಭಾರೀ ಗುಡುಗು – ಸಿಡಿಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ.
ಕಟಪಾಡಿ ಪಡು ಏಣಗುಡ್ಡೆ ನಿವಾಸಿ ಸುರೇಶ್ ಕರ್ಕೇರ ಎಂಬವರ ಪುತ್ರ ಭರತ್ (24) ಮೃತ ಯುವಕ. ತಂದೆ ಸುರೇಶ ಕರ್ಕೇರಾ ಸೆಂಟ್ರಿಗ್ ಕೆಲಸ ಮಾಡುತ್ತಿದ್ದಾರೆ.
ರವಿವಾರ ರಾತ್ರಿ ಮನೆಯೊಳಗೆ ಇದ್ದ ಈತ ಮನೆಯವರೊಂದಿಗೆ ಮಾತನಾಡುತ್ತಿದ್ದಾಗಲೇ ಘಟನೆ ಸಂಭವಿಸಿದ್ದು, ತತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ.
ಭರತ್ ಕಟಪಾಡಿ ವಿಶ್ವನಾಥ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗುತ್ತಿದ್ದ, ಅಂಬಾಡಿ ಬೆಂಡೆ ಬಳಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ.
ಕಾಪು ಎಸ್.ಐ ರಾಜಶೇಖರ ಸಾಗನೂರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Click this button or press Ctrl+G to toggle between Kannada and English