ಕಟಪಾಡಿಯಲ್ಲಿ ಸಿಡಿಲು ಬಡಿದು ಯುವಕ ಸಾವು

Monday, May 18th, 2020
bharath

ಕಾಪು : ರವಿವಾರ ರಾತ್ರಿ ಸುರಿದ ಭಾರೀ ಗುಡುಗು – ಸಿಡಿಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ. ಕಟಪಾಡಿ ಪಡು ಏಣಗುಡ್ಡೆ ನಿವಾಸಿ ಸುರೇಶ್ ಕರ್ಕೇರ ಎಂಬವರ ಪುತ್ರ ಭರತ್ (24) ಮೃತ ಯುವಕ. ತಂದೆ ಸುರೇಶ ಕರ್ಕೇರಾ ಸೆಂಟ್ರಿಗ್ ಕೆಲಸ ಮಾಡುತ್ತಿದ್ದಾರೆ. ರವಿವಾರ ರಾತ್ರಿ ಮನೆಯೊಳಗೆ ಇದ್ದ ಈತ ಮನೆಯವರೊಂದಿಗೆ ಮಾತನಾಡುತ್ತಿದ್ದಾಗಲೇ ಘಟನೆ ಸಂಭವಿಸಿದ್ದು, ತತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ. ಭರತ್ ಕಟಪಾಡಿ ವಿಶ್ವನಾಥ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗುತ್ತಿದ್ದ, ಅಂಬಾಡಿ ಬೆಂಡೆ […]

ಕಟಪಾಡಿ : ಮೀನು ಸಾಗಾಟ ವಾಹನದ ಟಯರ್ ಸ್ಪೋಟ : ರಸ್ತೆಯುದ್ದಕ್ಕೂ ಚೆಲ್ಲಿ ಬಿದ್ದ ಕಾರ್ಗಿಲ್ ಮೀನುಗಳು

Wednesday, November 13th, 2019
Kargil-meenugalu

ಕಟಪಾಡಿ : ಮೀನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವೊಂದು ಟಯರ್ ಸ್ಪೋಟಗೊಂಡು ಪಲ್ಟಿಯಾದ ಪರಿಣಾಮ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಇಂದು ಮುಂಜಾನೆ ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಟಾಟಾ ಏಸ್ ವಾಹನ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಿರುವು ಹೆದ್ದಾರಿ 66 ರ ಸಮೀಪ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಾಡಿವೆ. ಟಾಟಾ ಏಸ್ ವಾಹನ ಜಖಂಗೊಂಡಿದ್ದು, ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಕಾರ್ಗಿಲ್ ಮೀನುಗಳನ್ನು ತೆರವುಗೊಳಿಸಲಾಗುತ್ತಿದೆ. […]

ಕಾಪು: ಅಶಕ್ತ, ಅನಾಥ ಮಕ್ಕಳೊಂದಿಗೆ ಕಾಂಗ್ರೆಸ್ ದೀಪಾವಳಿ ಆಚರಣೆ

Thursday, October 19th, 2017
Diwali celebration

ಮಂಗಳೂರು:  ಕಾಪು ಕಾಂಗ್ರೆಸ್ ಹಿಂದುಳಿದ ವರ್ಗ ಕಟಪಾಡಿ ಬಳಿಯ ಶಂಕರ ಪುರ ವಿಶ್ವಾಸದ ಮನೆಯಲ್ಲಿ ಅಶಕ್ತ, ಅನಾಥ ಮಕ್ಕಳೊಂದಿಗೆ ಹಾಗೂ ವಯೋ ವೃದ್ಧರೊಂದಿಗೆ ದೀಪಾವಳಿ ಸಂಭ್ರವನ್ನು ಆಚರಿಸಿತು. ಇಲ್ಲಿಯ ಮಕ್ಕಳಿಗೆ ವಯೋವೃದ್ಧರಿಗೆ ಸಿಹಿ ತಿಂಡಿ ಹಾಗೂ ಬಟ್ಟೆ ಬರೆಗಳನ್ನು ಈ ಸಂದರ್ಭ ವಿತರಿಸಲಾಯಿತು. ಕಾಪು ಶಾಸಕ ವಿನಂ ಕುಮಾರ್ ಸೊರಕೆ ಮಾತನಾಡಿ, ದೀಪಾವಳಿ ಹಬ್ಬದ ಪ್ರಥಮ ದಿನವನ್ನು ಶಂಕರಪುರದ ಅನಾಥರ ವಿಶ್ವಾಸದ ಮನೆಯಲ್ಲಿ ಕಾಪು ಕಾಂಗ್ರೆಸ್ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವಾಸದ ಮನೆಗೆ ನಮ್ಮ ರಾಜ್ಯಕ್ಕೆ […]

ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಚಿರತೆ: ಸ್ಥಳೀಯರ ಆತಂಕ

Thursday, September 1st, 2016
Leopard

ಕಾಪು: ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಮರಿಗಳ ಸಹಿತ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಟಪಾಡಿ, ಅಗ್ರಹಾರ, ಮಣಿಪುರ, ಸುಭಾಸ್‌ ನಗರ, ಕುರ್ಕಾಲು ಮತ್ತು ಕುಂಜಾರುಗಿರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ರಾತ್ರಿ ಚಿರತೆ ಸಂಚಾರ ಹೆಚ್ಚಿರುವುದರಿಂದ ಜನರು ಕತ್ತಲಾಗುವ ಮೊದಲೇ ಮನೆ ಸೇರುವಂತಾಗಿದೆ. ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಚಿರತೆ ಕೆಲವೊಂದು ಮನೆಗಳ ನಾಯಿ, ಬೆಕ್ಕು ಮತ್ತು ದನಗಳ ಮೇಲೆಯೂ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಕಟಪಾಡಿ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ […]