ಕಾಪು: ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಮರಿಗಳ ಸಹಿತ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಟಪಾಡಿ, ಅಗ್ರಹಾರ, ಮಣಿಪುರ, ಸುಭಾಸ್ ನಗರ, ಕುರ್ಕಾಲು ಮತ್ತು ಕುಂಜಾರುಗಿರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ರಾತ್ರಿ ಚಿರತೆ ಸಂಚಾರ ಹೆಚ್ಚಿರುವುದರಿಂದ ಜನರು ಕತ್ತಲಾಗುವ ಮೊದಲೇ ಮನೆ ಸೇರುವಂತಾಗಿದೆ.
ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಚಿರತೆ ಕೆಲವೊಂದು ಮನೆಗಳ ನಾಯಿ, ಬೆಕ್ಕು ಮತ್ತು ದನಗಳ ಮೇಲೆಯೂ ದಾಳಿ ನಡೆಸಿದೆ ಎನ್ನಲಾಗುತ್ತಿದೆ.
ಕಟಪಾಡಿ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೂ ದೂರು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬಂದಿಗಳು ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬಂದಿ ಬೋನಿನೊಂದಿಗೆ ಬಂದಿದ್ದಾರಾದರೂ ಚಿರತೆ ಕಾಣಿಸದೇ ವಾಪಾಸಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Click this button or press Ctrl+G to toggle between Kannada and English