ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಗಳಿಂದ ಅಧಿಕೃತವೆಂದು ಅಂಗೀಕೃತವಾದ ತುಳು ಲಿಪಿ ಪರಿಚಯದ ಪರಿಷ್ಕೃತ ಮುದ್ರಣದ ತುಳು ಲಿಪಿ ತಜ್ಞ ಶ್ರೀಯುತ ಡಾ. ರಾಧಕೃಷ್ಣ ಬೆಳ್ಳೂರು ಲಿಖಿತ ’ತುಳು ಲಿಪಿ’ ಪುಸ್ತಕವನ್ನು ಮೇ 19, ಶನಿವಾರದಂದು ಅಕಾಡೆಮಿ ಸಿರಿಚಾವಡಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿರುವ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ’ತುಳು ಲಿಪಿ’ ಪುಸ್ತಕ ಬಿಡುಗಡೆಗೊಳಿಸಿಡಿಸಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಹಾಗೂ ಶೀಘ್ರದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಮನ್ನಣೆ ಮಾಡುವಲ್ಲಿ ಕಾರ್ಯಗತವಾಗುವುದಾಗಿ ಆಶ್ವಾಸನೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ. ಕತ್ತಲ್‌ಸಾರ್‌ರವರು ಮಾತನಾಡಿ ತುಳು ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಯು ಜಂಟಿಯಾಗಿ ಅಂಗೀಕೃತಗೊಂಡಿರುವ ತುಳು ಲಿಪಿ ಮಾಲಿಕೆಯನ್ನು ಮುಂದೆ ಕಲಿಕೆಗಾಗಿ ಉಪಯೋಗಿಸಬೇಕೆಂದು ಮತ್ತು ಅಕಾಡೆಮಿ ಮೂಲಕ ತುಳು ಯುನಿಕೋಡ್ ಬಳಕೆಗೆ ಬರುವಲ್ಲಿ ಮುಂದಿನ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ, ಸದಸ್ಯರುಗಳಾದ ಲೀಲಾಕ್ಷ ಕರ್ಕೇರ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ, ಡಾ. ಆಕಾಶ್‌ರಾಜ್ ಜೈನ್, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್, ವಿಜಯಲಕ್ಷ್ಮಿ ಪಿ ರೈ, ಕಡಬ ದಿನೇಶ್ ರೈ, ತಾರಾ ಉಮೇಶ್ ಆಚಾರ್ಯ, ಚೇತಕ್ ಪೂಜಾರಿ, ಪಿ. ಎಂ. ರವಿ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English