ಮಂಗಳೂರು : ಒಕ್ಕೂಟದ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ ರಾಸುಗಳು ಮರಣ ಹೊಂದಿದ ಸಂಧರ್ಭದಲ್ಲಿ, ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದರಿಂದ ಹೈನುಗಾರರು ಹೈನುಗಾರಿಕೆಯಲ್ಲಿ ಮುಂದುವರಿಯಲು ಕಷ್ಟವಾಗುತ್ತದೆ. ಆದುದರಿಂದ ಹೈನುಗಾರರನ್ನು ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ರಾಸುಗಳ ಆಕಸ್ಮಿಕ ಮರಣ ದಿಂದಾಗುವ ಅನಿರೀಕ್ಷಿತ ನಷ್ಟಕ್ಕೆ ಪರಿಹಾರ ನೀಡುವ ಉದ್ಧೇಶದಿಂದ ಹೈನುಗಾರರ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯಒದಗಿಸಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಅದರಂತೆ ಒಕ್ಕೂಟದ ಎಲ್ಲಾ ಹಾಲು ಉತ್ಪಾದಕ ಸದಸ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಸುಗಳಿಗೆ ವಿಮೆ ಮಾಡಿಸಲು ತೀರ್ಮಾನಿಸಲಾಗಿರುತ್ತದೆ.
ಈ ಯೋಜನೆಯನ್ವಯ ಒಕ್ಕೂಟದಿಂದ75% ಮತ್ತು ಹೈನುಗಾರರಿಂದ 25% ವಿಮಾ ವಂತಿಕೆಯನ್ನು ಭರಿಸಿ ಸುಮಾರು ಅಂದಾಜು 1 ಲಕ್ಷ ರಾಸುಗಳಿಗೆ ವಿಮಾ ಸೌಲಭ್ಯ ಮಾಡಲುಉದ್ಧೇಶಿಸಿದ್ದು, ಅದರ ಅಂದಾಜು ಮೌಲ್ಯ ರೂ.6 ಕೋಟಿಗಳಷ್ಟುಆಗುತ್ತದೆ. ಈ ಯೋಜನೆಯನ್ನು ದಿನಾಂಕ ಜೂನ್1 ರಿಂದ ಜಾರಿಗೊಳಿಸಲಾಗುವುದು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸಂಪರ್ಕಿಸುವರೇ ಕೋರಿಕೊಳ್ಳಲಾಗಿದೆ.
ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕ ಸದಸ್ಯರು ತಮ್ಮಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯವನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ತಮ್ಮಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಬಹುದಾಗಿರುತ್ತದೆ. ಇದರಿಂದ ಎಲ್ಲಾ ಹೈನುಗಾರರು ಇದರ ಸೌಲಭ್ಯವನ್ನು ಪಡೆಯಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿತಿಳಿಸಿರುತ್ತಾರೆ.
Click this button or press Ctrl+G to toggle between Kannada and English