ಸಮಾಜ ಸೇವೆಗೆಂದು ಲಭ್ಯವಿದ್ದ 30 ಮೃತದೇಹ ಮಣ್ಣುಪಾಲು !

2:10 PM, Wednesday, May 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Dead bodyಬೆಳಗಾವಿ: ತಮ್ಮ ಸಾವಿನ ನಂತರವೂ ನಮ್ಮ ದೇಹ ಸಮಾಜಕ್ಕೆ ಉಪಯೋಗವಾಗಲಿ ಎಂದು ಎಷ್ಟೋ ಜನರು ಆಸ್ಪತ್ರೆಗಳಿಗೆ ತಮ್ಮ ಸಾವಿನ ನಂತರ ವೈದ್ಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆಂದು ದೇಹದಾನ ಮಾಡುತ್ತಾರೆ.

ಆದರೆ, ವಿಶ್ವಕ್ಕೆ ವಕ್ಕರಿಸಿದ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ದಾನ ಮಾಡಿದ ದೇಹಗಳನ್ನು ಸ್ವೀಕರಿಸಲಾಗದೆ ಅಂತ್ಯಸಂಸ್ಕಾರ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿಯ ಡಾ.ರಾಮಣ್ಣವರ ಚಾರಿಟೇಬಲ್‌ ಟ್ರಸ್ಟ್‌ ನ ಡಾ. ಮಹಾಂತೇಶ ರಾಮಣ್ಣವರ, ಲಾಕ್ ಡೌನ ಸಂದರ್ಭದಲ್ಲಿ ಸರಕಾರವು ದೇಹದಾನದ ಕುರಿತು ಸರಿಯಾದ ಮಾಹಿತಿ ಮತ್ತು ಮಾರ್ಗಸೂಚಿ ನೀಡಿರಲಿಲ್ಲ. ಜೊತೆಗೆ ದಾನ ಮಾಡಿದವರ ದೇಹವನ್ನು ಪಡೆದುಕೊಂಡು ಕೊರೋನಾ ಭಯದಲ್ಲಿರುವ ಈ ಸಮಯದಲ್ಲಿ ಪರೀಕ್ಷಾರ್ಥಿ ವೈದ್ಯರಿಗೆ ಸಮಸ್ಯೆ ಎದುರಾಗಬಹುದೆಂಬ ಆತಂಕದಿಂದ ಮೃತದೇಹವನ್ನು ಸ್ವೀಕರಿಸಿಲ್ಲ ಎಂದರು.

ಮುಂದೆ ಕೊರೋನಾ ಆತಂಕ ಸ್ವಲ್ಪ ಕಡಿಮೆಯಾದರೆ ಜೂನ್‌ 1 ರಿಂದ ದೇಹಗಳನ್ನು ದಾನಿಗಳ ಆಸೆಯಂತೆ ಮತ್ತೆ ಸ್ವೀಕರಿಸಲಾಗುವುದು ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English