ಬಾಗಲಕೋಟೆ: ಸಾಮಾನ್ಯವಾಗಿ ಕೊರೋನಾ ಶಂಕಿತರಾಗಿ ಕ್ವಾರಂಟೈನ್ ನಲ್ಲಿರುವವರು 14 ದಿನಗಳ ವರೆಗೆ ಬರೀ ತಮ್ಮ ದೈನಂದಿನ ಚಟುವಟಿಕೆಗಳನ್ನಷ್ಟೇ ಮಾಡುತ್ತಾರೆ. ಕೊರೋನಾ ಪರೀಕ್ಷೆಯ ವರದಿ ನೆಗೆಟಿವ್ ಬಂದರೆ ಅವರನ್ನು ಬೀಳ್ಕೋಡಲಾಗುತ್ತದೆ. ಅಲ್ಲಿಂದ ಹೊರಗೆ ಬಂದ ನಂತರ ಇದ್ದವರು ತಮ್ಮ ಉದ್ಯೋಗಕ್ಕೆ ತೆರಳುತ್ತಾರೆ. ಆದರೆ, ಉದ್ಯೋಗವಿಲ್ಲದೇ ನಿತ್ಯ ದುಡಿದು ತಿನ್ನುವವರು ಹೊರಗೆ ಬಂದ ಕೂಡಲೇ ಜೀವನೋಪಾಯಕ್ಕೆ ಏನು ಮಾಡಬೇಕು ಎಂಬ ಚಿಂತೆಯಲ್ಲಿರುತ್ತಾರೆ.
ಈ ಬಗ್ಗೆ ಯೋಚಿಸಿದ ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿದ ಗಾರೆ ಕೆಲಸ ಮಾಡುತ್ತಿದ್ದ ಕೂಲಿಕಾರರು 14 ದಿನಗಳ ಕ್ವಾರಂಟೈನ್ ನಲ್ಲಿ ಇದ್ದರು. ಇವರನ್ನು ಬೀಳಗಿ ತಾಲೂಕಿನ ಗಿರಿಸಾಗರದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಪರಿಶೀಲನೆಗೆಂದು ಬಂದ ಸಿಇಒ ಗಂಗೂಬಾಯಿ ಅವರಿಗೆ ಶಾಲೆಯ ಸ್ಥಿತಿಯನ್ನು ಸುಧಾರಿಸಲು ಯೋಚಿಸಿ ಕ್ವಾರಂಟೈನ್ ನಲ್ಲಿದ್ದ ಮೂರು ಕುಟುಂಬಗಳ 6 ಸದಸ್ಯರಿಗೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಿಸಿದರು. ನಂತರ ಅವರಿಗೆ ಶಾಲೆಗೆ ಸುಣ್ಣ, ಬಣ್ಣ ಹಚ್ಚುವುದು ಹಾಗೂ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಸಸಿ ನೆಡುವ ಕೆಲಸ ಹಚ್ಚಿದ್ದಾರೆ. ಶಾಲಾ ಆವರಣದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಾರ್ಯ ಈಗ ಆರಂಭಿಸಲಾಗಿದೆ. ಅವರು ಬಿಡುಗಡೆ ನಂತರ ಅವರು ದುಡಿದ ಹಣವನ್ನು ಅವರಿಗೆ ನೀಡಲಾಗುವುದು ಎಂದು ಸಿಇಒ ಹೇಳಿದ್ದಾರೆ.
ಒಟ್ಟಿನಲ್ಲಿ ದುಡಿಯುವವನಿಗೆ ಎಲ್ಲಿಯಾದರೇನು ಎಂಬ ಮಾತು ನಿತ್ಯಸತ್ಯವೆನ್ನಬಹುದು.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English