ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢ, ಪುತ್ರಿಗೂ ಸೋಂಕು ದೃಢ

Monday, August 3rd, 2020
cm-yediyurappa

ಬೆಂಗಳೂರು :  ಕರ್ನಾಟಕ  ಸಿಎಂ ಯಡಿಯೂರಪ್ಪ ಅವರಿಗೆ  ಕೊರೋನಾ ಸೋಂಕು ದೃಢಪಟ್ಟಿದೆ. ಖುದ್ದು ಸಿಎಂ ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದು, ತಮಗೂ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. “ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆರೋಗ್ಯವಾಗಿದ್ದೇನೆ, ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ, ನನ್ನೊಂದಿಗೆ ಇತ್ತೀಚಿನ ದಿನಗಳಲ್ಲಿ ಸಂಪರ್ಕದಲ್ಲಿದ್ದವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ಗೆ ಒಳಪಟ್ಟು ಆರೋಗ್ಯದ ಮೇಲೆ ನಿಗಾ ವಹಿಸಬೇಕು” ಎಂದು ಸಿಎಂ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ […]

ಐವನ್ ಡಿ ಸೋಜ ಜೊತೆ ಕಾರ್ಯಕ್ರಮದಲ್ಲಿ ಇದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್​ಗೆ

Sunday, August 2nd, 2020
Ramanatha rai

ಬಂಟ್ವಾಳ : ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೊನಾ ಸೋಂಕು ದೃಢಪಟ್ಟ  ಬೆನ್ನಲೇ  ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಐವನ್ ಡಿ ಸೋಜ ಜೊತೆ ನಾನು ಇದ್ದೆ  ಹಾಗಾಗಿ ನಾನು ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಜನ ಸಾಮಾನ್ಯರ ಭೇಟಿ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಕ್ಷೇತ್ರದ ಜನರು […]

ತಂದೆಯನ್ನು ದರ ದರನೆ ಎಳೆದು ತಂದು ರಸ್ತೆಯಲ್ಲಿ ಮಲಗಿಸಿದ ಹುಚ್ಚ ಮಗ

Monday, June 29th, 2020
elderly-man

ಮಂಗಳೂರು :  ಪುತ್ರನೊಬ್ಬ ತನ್ನ ತಂದೆಯನ್ನು ಲಾಡ್ಜ್ ಮೇಲಿಂದ ಕೆಳಗೆ ಬೆತ್ತಲೆಯಾಗಿ ಎಳೆದು ತಂದು ರಸ್ತೆ ಬದಿಯಲ್ಲಿ ಮಲಗಿಸಿ ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. ಲಾಡ್ಜ್ ಮಾಲೀಕರು ಹಾಗೂ ಸಿಬ್ಬಂದಿ, ರೋಗಿಗೆ ಶುಶ್ರೂಷೆ ನೀಡಿ ಮರಳಿ ಲಾಡ್ಜ್ ರೂಮಿನಲ್ಲಿ ಮಲಗಿಸಿದ್ದಾರೆ. ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಟೆಂಡರ್ ಆಗಿರುವ ಬಜಪೆ ನಿವಾಸಿ ವೃದ್ಧ ಆರೋಗ್ಯ ಸಮಸ್ಯೆಯಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು, 15 ದಿನಗಳಿಂದ ಆಸ್ಪತ್ರೆ ಎದುರುಗಡೆಯ ಲುಲು ಲಾಡ್ಜ್ನಲ್ಲಿ ಇದ್ದು […]

ಕ್ವಾರಂಟೈನ್ ನಿಯಮ ಉಲ್ಲಂಘನೆ, ಮೊಬೈಲ್ ಬಂದ ಮಾಡಿದರೆ ಎಪ್‍ಐಆರ್

Tuesday, June 23rd, 2020
MG hiremat

ಗದಗ : ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಪ್ರದೇಶದಿಂದ ಬೇರೆ ಕಡೆಗೆ ಚಲನ ವಲನ ಮಾಡುವುದಾಗಲಿ ಅಥವಾ ತಮ್ಮ ಮೊಬೈಲ್‍ಗಳನ್ನು ಸ್ವಿಚಾಫ್ ಮಾಡಬಾರದು. ಒಂದು ವೇಳೆ ಉದ್ದೇಶಪೂರ್ವಕವಾಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಮೊಬೈಲ್ ಸ್ವಿಚಾಫ್ ಮಾಡಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಐ.ಪಿ.ಸಿ. ಸೆಕ್ಷನ್ 188 ರನ್ವಯ ಎಫ್ಐಆರ್ ದಾಖಲಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಸಾಂಕ್ರಾಮಿಕ ಪಿಡುಗಾದ ಕೋವಿಡ್-19 ಸೋಂಕು ತಡೆಗಟ್ಟಲು ಸರಕಾರ ಕೋವಿಡ್-19 ಕ್ವಾರಂಟೆನ್ ಅಲರ್ಟ […]

ಕಿಮ್ಸ್‌ ಸಿಬ್ಬಂದಿಗೆ ಹೇಳಿದ್ದು ಕ್ವಾರಂಟೈನ್‌ ಗೆ ಎಂದು, ಅವರು ಬಿಟ್ಟಿದ್ದು ಮಾತ್ರ ಲಾಡ್ಜ್‌ ಗೆ !

Monday, June 1st, 2020
lodge

ಹುಬ್ಬಳ್ಳಿ : ಕರೋನಾ ಪೀಡಿತ ಜಿಲ್ಲೆಗಳಿಂದ ಬಂದಿರುವವರನ್ನು ಕ್ವಾರಂಟೈನ್‌ ನಲ್ಲಿಡಬೇಕೆಂಬುದು ಸರಕಾರದ ಮಾರ್ಗಸೂಚಿಯಾಗಿದೆ. ಆದರೆ ಆಂಧ್ರದ ಹೈದರಾಬಾದ್‌ ನಿಂದ ಬಂದಿದ್ದ ವ್ಯಕ್ತಿಯೊಬ್ಬರು ಸರಕಾರಿ ಕ್ವಾರಂಟೈನ್‌ ಗೆಂದು ತೆರಳಿದರೆ ಅವರನ್ನು ಇಲ್ಲಿನ ಕಿಮ್ಸ್‌ ಸಿಬ್ಬಂದಿ ಖಾಸಗಿ ಲಾಡ್ಜ್‌ ಗೆ ಬಿಟ್ಟು ಬಂದಿದ್ದಾರೆ. ತನ್ನನ್ನು ಸರಕಾರಿ ಕ್ವಾರಂಟೈನ್‌ ನಲ್ಲಿಯೇ ಇರಿಸಿಕೊಳ್ಳಿ ಎಂದು ಕೇಳಿದ ವ್ಯಕ್ತಿಯನ್ನು ಅವರಿಗೆ ವಿಷಯ ತಿಳಿಸದೇ ಕಿಮ್ಸ್‌ ಸಿಬ್ಬಂದಿ ಇಲ್ಲಿನ ಆರ್ಯದುರ್ಗಾ ಲಾಡ್ಜ್‌ ಗೆ ಬಿಟ್ಟು ಬಂದಿದ್ದಾರೆ. ಅಲ್ಲಿನ ಮ್ಯಾನೇಜರ್‌ ರೂಮ್‌ ಬಾಡಿಗೆ 2 ಸಾವಿರ ರೂ. ನೀಡಿ […]

ಕೊರೋನಾ ಸೋಂಕಿನ ಶಂಕೆ: ಕೋಳಿ ಫಾರಂನಲ್ಲೇ ಟೈಗರ್‌ ಗೂ ಕ್ವಾರಂಟೈನ್‌ !

Friday, May 29th, 2020
tiger

ಚಿಕ್ಕೋಡಿ : ಕೊರೋನಾ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಟೈಗರ್‌ ಎಂಬ ಹೆಸರಿನ ನಾಯಿಯೊಂದಕ್ಕೆ ಕ್ವಾರಂಟೈನ್‌ ಮಾಡಲಾಗಿದೆ. ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇನಾಪುರ ಗ್ರಾಮದ ಶಿಂಧೆ ಎನ್ನುವ ಕುಟುಂಬದವರು ಕೋಲ್ಕತ್ತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೋಲ್ಕತ್ತಾದಿಂದ ತಮ್ಮೊಂದಿಗೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಈ ನಾಯಿಯನ್ನು ಕರೆ ತಂದಿದ್ದಾರೆ. ಊರಿನಿಂದ ಬಂದ ನಂತರ ತಮ್ಮ ಕೋಳಿ ಫಾರಂನಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ತಮ್ಮೊಂದಿಗೆ ನಾಯಿಯನ್ನೂ ಕ್ವಾರಂಟೈನ್‌ ಮಾಡಿರುವುದು ವಿಶೇಷ. 5 ವರ್ಷಗಳಿಂದ ಸಾಕಿರುವ ಟೈಗರ್ […]

ಕೊರೋನಾ ಶಂಕಿತರು ಕ್ವಾರಂಟೈನ್‌ ನಲ್ಲಿದ್ದರೂ ದುಡ್ಡು ಗಳಿಸಬಹುದು !

Wednesday, May 27th, 2020
Narega job card

ಬಾಗಲಕೋಟೆ: ಸಾಮಾನ್ಯವಾಗಿ ಕೊರೋನಾ ಶಂಕಿತರಾಗಿ ಕ್ವಾರಂಟೈನ್‌ ನಲ್ಲಿರುವವರು 14 ದಿನಗಳ ವರೆಗೆ ಬರೀ ತಮ್ಮ ದೈನಂದಿನ ಚಟುವಟಿಕೆಗಳನ್ನಷ್ಟೇ ಮಾಡುತ್ತಾರೆ. ಕೊರೋನಾ ಪರೀಕ್ಷೆಯ ವರದಿ ನೆಗೆಟಿವ್‌ ಬಂದರೆ ಅವರನ್ನು ಬೀಳ್ಕೋಡಲಾಗುತ್ತದೆ. ಅಲ್ಲಿಂದ ಹೊರಗೆ ಬಂದ ನಂತರ ಇದ್ದವರು ತಮ್ಮ ಉದ್ಯೋಗಕ್ಕೆ ತೆರಳುತ್ತಾರೆ. ಆದರೆ, ಉದ್ಯೋಗವಿಲ್ಲದೇ ನಿತ್ಯ ದುಡಿದು ತಿನ್ನುವವರು ಹೊರಗೆ ಬಂದ ಕೂಡಲೇ ಜೀವನೋಪಾಯಕ್ಕೆ ಏನು ಮಾಡಬೇಕು ಎಂಬ ಚಿಂತೆಯಲ್ಲಿರುತ್ತಾರೆ. ಈ ಬಗ್ಗೆ ಯೋಚಿಸಿದ ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ. […]

ಕಾರ್ಕಳದಲ್ಲಿ ಎಎಸ್‌ಐ ಮತ್ತು ಪೇದೆಗೆ ಕೊರೊನಾ ದೃಢ, 80 ಸಿಬ್ಬಂದಿಗಳಿಗೆ ಕ್ವಾರಂಟೈನ್ ಸಿದ್ಧತೆ ‌

Sunday, May 24th, 2020
Karkala Corona

ಉಡುಪಿ  : ಚೆಕ್‌ಪೋಸ್ಟ್‌ ಹಾಗೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ ಅಜೆಕಾರು ಠಾಣೆಯ ಎಎಸ್‌ಐ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಪೇದೆಗೆ ಕೊರೊನಾ ದೃಢಪಟ್ಟಿದೆ, ಇದರಿಂದಾಗಿ ಒಟ್ಟು 80 ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಪೊಲೀಸರಿಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನಲೆ ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆ, ಕಾರ್ಕಳ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ, ಅಜೆಕಾರು ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ದೃಢಪಟ್ಟ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಚೆಕ್‌ಪೋಸ್ಟ್‌ ಹಾಗೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಾರ್ಯ […]

ಮುಂಬಯಿ ಯಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ, ಉಳಿದವರನ್ನು ಶಾಲೆಯಿಂದ ಸ್ಥಳಾಂತರ

Thursday, May 21st, 2020
Mudabidre Man

ಮೂಡುಬಿದಿರೆ : ಮುಂಬಯಿ ಯಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕಡಂದಲೆ ನಿವಾಸಿ ದಯಾನಂದ ಪೂಜಾರಿ ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿ  ಮುಂಬೈಯಲ್ಲಿ ಹೋಟೆಲ್ ಕೆಲಸದಲ್ಲಿದ್ದರು ಎಂದು ತಿಳಿದುಬಂದಿದೆ ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದರು. ಊರಿಗೆ ಬಂದವರನ್ನು ತಡರಾತ್ರಿ 1 ಗಂಟೆಗೆ  ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮುಂಜಾನೆ 3 ಗಂಟೆಯ ಹೊತ್ತಿಗೆ ಶಾಲೆಯ […]

ಬೆಂಗಳೂರು: ಒಂದೇ ದಿನ 19 ಮಂದಿಗೆ ಕೋವಿಡ್-19 ಸೋಂಕು ದೃಢ ; ಇಬ್ಬರು ಸಾವು

Wednesday, April 15th, 2020
Corona 19

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 19 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ ಸಾವನ್ನಪ್ಪಿದ ಬೆಳಗಾವಿ ವೃದ್ಧೆಗೆ ಸೋಂಕು ಇತ್ತು ಎಂದು ಖಚಿತವಾಗಿದೆ. ಬುಧವಾರ ಬೆಳಿಗ್ಗೆ ಚಿಕ್ಕಬಳ್ಳಾಪುರದ ವ್ಯಕ್ತಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದರು. ಈಗ ಬೆಳಗಾವಿ, ಹಿರೇಬಾಗೆವಾಡಿಯ 80 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಾವಿನ ಸಂಖ್ಯೆ 12ಕ್ಕೇರಿದೆ. ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢವಾಗಿದೆ. ಸೋಂಕಿತ ಸಂಖ್ಯೆ 221 ರ ಸಂಪರ್ಕಕ್ಕೆ ಬಂದ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. […]